ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಾರ್ವಜನಿಕ ಮಾಹಿತಿ ಕೇಂದ್ರವನ್ನು ಆರಂಭಿಸಿದೆ.ಶುಕ್ರವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ ಅವರು ಸಾರ್ವಜನಿಕ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.ಎಸ್ಪಿ ಡಾ| ಸುಬ್ರಹ್ಮಣ್ಯೇಶ್ವರ ರಾವ್, ಹೆಚ್ಚುವರಿ ಎಸ್ಪಿ ಎಂ. ಪ್ರಭಾಕರ್, ಡಿ ಸಿ ಆರ್ ಬಿ ಪೊಲೀಸ್ ಉಪಾಧೀಕ್ಷಕ ಬಿ.ಜೆ. ಭಂಡಾರಿ ಮತ್ತಿತರ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.ಉದ್ಘಾಟನೆಯ ಬಳಿಕ ಪತ್ರಕರ್ತರೊಂದಿಗೆ ಎಸ್ಪಿ ಡಾ| ರಾವ್ ಮಾತನಾಡಿ ನೂತನ ಘಟಕ ಜಿಲ್ಲೆಯಲ್ಲಿ ನಡೆದ ಕಾನೂನು-ಸುವ್ಯವಸ್ಥೆ, ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಮಾಧ್ಯಮಗಳಿಗೆ ಮತ್ತು ಅಪೇಕ್ಷಿತ ನಾಗರಿಕರಿಗೆ ತಿಳಿಸಬೇಕಾಗುತ್ತದೆ. ಘಟಕಕ್ಕೆ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿದೆ.ಜಿಲ್ಲೆಯ ಪೊಲೀಸ್ ಬ್ಲಾಗ್, ವೆಬ್ ಸೈಟ್ ಈ ಘಟಕ ಅಪ್ ಡೇಟ್ ಮಾಡಲಿದೆ ಎಂದು ವಿವರಿಸಿದರು.ಮಾಹಿತಿ ಹಕ್ಕು, ಅರ್ಜಿ ಸ್ವೀಕಾರ, ಮಾಹಿತಿ ಒದಗಿಸುವಿಕೆಗೆ ಇದು ಏಕ ಗವಾಕ್ಷಿ ಕೇಂದ್ರವಾಗಿಯೂ ಕೆಲಸ ಮಾಡಲಿದೆ ಎಂದ ಎಸ್ಪಿ ಅವರು ಘಟಕಕ್ಕೆ ಅಧಿಕೃತ ನಂಬರ್ ನೀಡಲಾಗಿದ್ದು 9480805300 ಮತ್ತು 0824-2424204 ದೂರವಾಣಿಗಳನ್ನು ಅಗತ್ಯವಿರುವವರು ಸಂಪರ್ಕಿಸಬಹುದೆಂದರು. ಮೊಬೈಲ್ ದೂರವಾಣಿಯಲ್ಲಿ ಸಬ್ ಇನ್ಸ್ ಪೆಕ್ಟರ್ ದಿನದ 24 ಗಂಟೆಯೂ ಲಭ್ಯರಿರುವರೆಂದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರ್ಯಾಲಯವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾಪ ಇಲಾಖೆಯ ಮುಂದೆ ಇಲ್ಲ ಎಂದು ಡಾ| ರಾವ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಕಮಿಷನರೇಟ್ ಇರುವ ಇತರ ನಗರಗಳಲ್ಲಿ ಕೂಡಾ ಎಸ್ಪಿ ಕಚೇರಿ ಸ್ಥಳಾಂತರಗೊಂಡಿಲ್ಲ. ಇಲ್ಲೂ ಹಾಗೆಯೇ ಮುಂದುವರೆಯಲಿದೆ ಎಂದರು.
ನಾಗರಿಕರ ಹಕ್ಕು ಬಾಧ್ಯತೆ:
ಠಾಣೆ ಗಳಲ್ಲಿ ನಾಗರಿ ಕರ ಹಕ್ಕು ಬಾಧ್ಯತೆ ಕುರಿತು ಫೆ.1ರಿಂದ ಫಲಕ ಹಾಕ ಲಾಗಿದೆ. ಅದ ರಂತೆ ಠಾಣೆಗೆ ಆಗಮಿ ಸುವ ವರಿಗೆ ಸೇವೆ ಒದಗಿ ಸಲು ಆದೇಶಿ ಸಲಾ ಗಿದೆ. ಸಮಯ ವನ್ನು ನಿಗದಿ ಪಡಿಸ ಲಾಗಿದೆ. ಪಶ್ಚಿಮ ಬಂಗಾ ಳದ ಸಿಲಿ ಗುರಿ ಹೊರತು ಪಡಿಸಿ ದರೆ `ಟೈಮ್ ಬಾಂಡೆಂಡ್' ಸೇವಾ ಪದ್ಧತಿ ಜಾರಿಗೊ ಳಿಸಿರು ವುದು ದ.ಕ. ಜಿಲ್ಲಾ ಪೊಲೀಸರ ಹೆಗ್ಗಳಿಕೆಯಾಗಿದೆ ಎಂದು ಎಸ್ಪಿ ನುಡಿದರು.ಯಾವುದೇ ತನಿಖೆಯನ್ನು 15 ದಿನಗಳಲ್ಲಿ ಮುಗಿಸಬೇಕು, ಗಂಭೀರ ಪ್ರಕರಣಗಳಲ್ಲಿ 90 ದಿನಗಳಲ್ಲಿ ಮತ್ತು ಇತರ ಪ್ರಕರಣಗಳಲ್ಲಿ 60 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕು. ಠಾಣೆಗೆ ಫಿರ್ಯಾದಿ ನೀಡಿ 2 ಗಂಟೆಗಳ ಒಳಗೆ ಕೇಸು ದಾಖಲಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಪೋಲಿಸ್ ವಸತಿ ಗೃಹಗಳ ದುರಸ್ತಿ:
ಕಡಬ ಹೊರತುಪಡಿಸಿ ಉಳಿದ ಠಾಣೆಗಳ ವಸತಿ ಗೃಹಗಳ ರಿಪೇರಿ ಮುಗಿದಿದೆ. ಕಡಬದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 2010ನೇ ಸಾಲಿನಲ್ಲಿ ವಸತಿ ಗೃಹಗಳ ದುರಸ್ತಿಗೆ 32 ಲಕ್ಷ ರೂ. ಅನುದಾನ ದೊರೆತಿದೆ. ಎಲ್ಲಾ ಠಾಣೆಗಳಿಗೆ ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಇದೆ. ಎಸ್ಪಿ ಕಚೇರಿ ಪಕ್ಕದಲ್ಲಿ ಪೊಲೀಸ್ ಕುಟುಂಬದ ಕಾರ್ಯ ಕ್ರಮ ಗಳಿಗಾಗಿ ರೂ.45 ಲಕ್ಷ ವೆಚ್ಚದಲ್ಲಿ ಪೊಲೀಸ್ ಭವನ ನಿರ್ಮಾಣ ಗೊಳ್ಳುತ್ತಿದೆ. ಜೂನ್ ಒಳಗೆ ಕಾಮಗಾರಿ ಮುಗಿಯಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಾರ್ವ ಜನಿಕ ಮಾಹಿತಿ ಕೇಂದ್ರ:
ನಗರದ ಜಿಲ್ಲಾ ಪೊಲೀಸ್ ಅಧೀಕ್ಷ ಕರ ಕಾರ್ಯಾಲ ಯದಲ್ಲಿ ಕಾರ್ಯಾ ಚರಿ ಸುವ ಈ ಕೇಂದ್ರದ ಪೊಲೀಸ್ ಜವಾ ಬ್ದಾರಿ ಯನ್ನು ಸಬ್ ಇನ್ಸ್ ಪೆಕ್ಟರ್ ಒಬ್ಬರು ನಿರ್ವಹಿ ಸಲಿ ದ್ದಾರೆ. ಪ್ರಸ್ತುತ ನಂದ ಕುಮಾರ್ ಸಾರ್ವ ಜನಿಕ ಮಾಹಿತಿ ಘಟಕದ ನೋಡೆಲ್ ಅಧಿಕಾ ರಿಯಾಗಿ ನಿಯುಕ್ತಿ ಗೊಂಡಿದ್ದು ಇಂದು ಅಧಿಕಾರ ವಹಿಸಿ ಕೊಂಡಿ ದ್ದಾರೆ.

0 comments:

Post a Comment