ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ,ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳ 429 ಮಂದಿ ಎಂಡೋ ಸಲ್ಫಾನ್ ದುಷ್ಪರಿಣಾಮಗಳಿಗೆ ತುತ್ತಾಗಿ ಅಂಗವಿಕಲತೆ ಹಾಗೂ ಇತರ ಕಾಯಿಲೆಗಳಿಗೆ ತುತ್ತಾಗಿದ್ದು,ಇವರಿಗೆ ಈಗ ನೀಡುತ್ತಿರುವ ಪರಿಹಾರದ ಜೊತೆಗೆ ಇನ್ನೂ ಹೆಚ್ಚಿನನೆರವು ನೀಡಬೇಕೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣಪಾಲೇಮಾರ್ ಅವರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಈಗಾಗಲೇ ಎಂಡೋ ಸಲ್ಫಾನ್ ಪೀಡಿತ 232 ಜನರಿಗೆ ತಲಾ 50,000 ರೂಗಳಂತೆ ಪರಿಹಾರ ವಿತರಿಸಲಾಗಿದೆ.ಸುಮಾರು 70 ಸಂತ್ರಸ್ಥರಿಗೆ ತಲಾ ರೂ.1000ದಂತೆ ಮಾಸಾಶನ ನೀಡಲಾಗುತ್ತಿದೆ.ಇದಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಗೆ ರೂ.25 ಲಕ್ಷಗಳನ್ನು ವೈದ್ಯಕೀಯ ವೆಚ್ಚಗಳಿಗಾಗಿ ನೀಡಲಾಗಿದೆ.ಆದರೆ ನೆರೆ ರಾಜ್ಯ ಕೇರಳ ಸರ್ಕಾರ ಎಂಡೋಸಲ್ಫಾನ್ ಪೀಡಿತರಿಗೆ ರೂ.2000 ಮಾಸಾಶನ ,ರೂ 2 ರ ದರದಲ್ಲಿ ಅಕ್ಕಿ,ಕೃಷಿ ಜಮೀನು ,ಮನೆ ಮುಂತಾದ ಸೌಲಭ್ಯಗಳನ್ನು ಒದಗಿಸಿರುವಂತೆ ಬೆಳ್ತಂಗಡಿ ಎಂಡೋಸಲ್ಫಾನ್ ಪೀಡಿತರಿಗೂ ದೊರೆಯುವಂತೆ ಸಚಿವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ.

0 comments:

Post a Comment