ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:09 PM

ಸಮಯವೆಲ್ಲಿ

Posted by ekanasu

ಸಾಹಿತ್ಯ

ಪ್ರತಿಯೊಂದು ಸಂತೋಷವಿದೆ ಜನರ ಮಡಿಲಲ್ಲಿ
ಆದರೆ ತುಸು ನಗೆ ಬೀರಲು ಸಮಯವೆಲ್ಲಿ
ಹಗಲು ರಾತ್ರಿ ಓಡುತ್ತಿರುವ ಪ್ರಪಂಚದಲ್ಲಿ
ಸುಖ ಜೀವನಕ್ಕಾಗಿ ಸಮಯವೆಲ್ಲಿ ?ತಾಯಿಯ ಲಾಲಿ ಹಾಡಿನ ಅನುಭವ ನಿಮ್ಮಲ್ಲಿ
ಆದರೆ ತಾಯಿಗೆ ತಾಯಿ ಎಂದು ಕರೆಯುವ ಸಮಯವೆಲ್ಲಿ
ಎಲ್ಲ ಸಂಬಂಧಗಳಂತು ಕೊಚ್ಚಿಯಾಯಿತು ಇಲ್ಲಿ
ಈಗ ಅದನು ಹೂಳಲು ಸಹ ಸಮಯವೆಲ್ಲಿ

ಎಲ್ಲರ ಹೆಸರು ಮೊಬೈಲಿನಲಿ
ಆದರೆ ಸ್ನೇಹಕ್ಕೆ ಸಮಯವೆಲ್ಲಿ
ಬೇರೆಯವರ ವಿಷಯ ಹಾಗಿರಲಿ
ತನ್ನವರಿಗಾಗಿಯೂ ಸಮಯವೆಲ್ಲಿ

ತುಂಬ ನಿದ್ದೆಯಿದೆ ಕಣ್ಣುಗಳಲಿ
ಆದರೆ ಮಲಗುವ ಸಮಯವೆಲ್ಲಿ
ತುಂಬಿದೆ ಮನಸ್ಸು ನೋವುಗಳಲಿ
ಆದರೆ ಅಳಲು ಸಹ ಸಮಯವೆಲ್ಲಿ

ಹಣಕ್ಕಾಗಿ ಓಡಿದೆ ಹಣದ ದಾರಿಯಲಿ
ಆಯಾಸಗೊಂಡು ನಿಲ್ಲಲು ಸಹ ಸಮಯವೆಲ್ಲಿ
ಪರರ ಸಹಾಯಗಳಿಗೆ ಏನು ಬೆಲೆ ಕೊಡಲಿ
ನನ್ನ ಕನಸುಗಳಿಗೆಯೆ ಸಮಯವಿಲ್ಲ ಇಲ್ಲಿ

ಜೀವನವೆ ನೀನೇ ಹೇಳು ಇಲ್ಲಿ
ಯೆನಾಗುವುದು ಇಂಥ ಜೀವನದಲ್ಲಿ
ಪ್ರತಿ ನಿಮಿಷ ಸಾಯುವವರಿಗಿಲ್ಲಿ
ಬದುಕಲು ಸಹ ಸಮಯವೆಲ್ಲಿ

- ಮೂಲ: ಉರ್ದು ಬೆನಾಮಿ ಕವಿತೆ
- ರೂಪಾಂತರ: ಜಬೀವುಲ್ಲಾ ಖಾನ್

0 comments:

Post a Comment