ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:17 PM

ಕಾರ್ಯಾಗಾರ

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು :ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯ ಜನಗಣತಿ ಕಾರ್ಯಕ್ಕೆ ಪೂರ್ವಬಾವಿಯಾಗಿ ಗಣತಿದಾರರಿಗೆ ತರಬೇತಿ ಕಾರ್ಯಗಾರವನ್ನು ದಿನಾಂಕ 31, 1 ಹಾಗೂ 3 ರಂದು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯ ಗಾರದಲ್ಲಿ ಜನಗಣತಿ ಕಾರ್ಯದಬಗ್ಗೆ ಕೇಳಿಕೊಳ್ಳುವ ಮಾಹಿತಿ, ಹಾಗೂ ಅವುಗಳನ್ನು ಅನುಸೂಚಿಗಳಲ್ಲಿ ದಾಖಲಿಸುವ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಯಿತು. ಪ್ರಧಾನ ಜನಗಣತಿ ಅಧಿಕಾರಿಗಳವರಾದ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ.ವಿಜಯಪ್ರಕಾಶ್ ರವರು ಕಾರ್ಯಗಾರದಲ್ಲಿ ಹಾಜರಿದ್ದು ಎಲ್ಲಾ ಗಣತಿದಾರರಿಗೆ ಶುಭ ಹಾರೈಸಿ ಜನಗಣತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ನಗರ ಜನಗಣತಿ ಅಧಿಕಾರಿಗಳವರಾದ ಮೇಘನ ಕಂದಾಯಾಧಿಕಾರಿ ಮ.ನ.ಪಾ., ಹಾಗೂ ಎಲ್ಲಾ ತರಬೇತಿದಾರರು ಕಾರ್ಯಗಾರದಲ್ಲಿ ಹಾಜರಿದ್ದು ಗಣತಿದಾರರಿಗೆ ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಯಿತು.ದಿನಾಂಕ 7-2-2011 ರಿಂದ 5-3-2011 ವರೆಗೆ ಜನಗಣತಿ ಸಮಯದಲ್ಲಿ ತಮ್ಮ ಮನೆಗಳಿಗೆ ಬರುವ ಗಣತಿದಾರರಿಗೆ ಅವರು ಕೇಳುವ ಎಲ್ಲಾ ಮಾಹಿತಿಗಳಿಗೆ ಸರಿಯಾದ ಉತ್ತರಗಳನ್ನು ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಪ್ರಧಾನ ಜನಗಣತಿ ಅಧಿಕಾರಿಗಳವರಾದ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ.ವಿಜಯಪ್ರಕಾಶ್ ರವರು ವಿನಂತಿಸಿರುತ್ತಾರೆ.

0 comments:

Post a Comment