ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಕನಸು ಬರಹಗಾರರಿಗೆ ಒಂದು ಉತ್ತಮ ವೇದಿಕೆ.ಇತ್ತೀಚಿನ ದಿನಗಳಲ್ಲಿ, ಮತ್ತು ಮುಂಬರುವ ದಿನಗಳಿಗೆ ಈ ರೀತಿಯ ಅಂತರ್ಜಾಲ ಪತ್ರಿಕೆಯು ಬಹಳ ಉತ್ತಮ. ರಾಜ್ಯ, ರಾಷ್ಟ್ರ ಮಟ್ಟದ ಸುದ್ದಿಗಳನ್ನೂ ಹೊಂದಿ, ಕಲೆ, ಸಿನಿಮಾ ಮುಂತಾದುವುಗಳನ್ನೂ ಒಳಗೊಂಡ ಈ ಕನಸು ಮುದ್ರಣದ ಖರ್ಚನ್ನು ಉಳಿಸಿವುದರೊಂದಿಗೆ, ಓದುಗ ಇಷ್ಟಪಡುವ ಎಲ್ಲಾ ಬಗೆಯ ವಿಷಯಗಳನ್ನೂ ನೀಡುತ್ತದೆ.


ಮುಂದೊಂದು ದಿನ ಕಾಗದಗಳ ತಯಾರಿಯು ಬಹಳ ದುಬಾರಿ ಆದಾಗ, ಮನೆ ಮನೆಗಳಲ್ಲಿ ಕಂಪ್ಯೂಟರ್ ನೊಂದಿಗೆ ಇಂಟರ್ ನೆಟ್ ಸೇವೆಗಳು ಆರಂಭವಾದಾಗ ಬಹುಷಃ ಇತರ ಪತ್ರಿಕೆಗಳೂ ಅಂತರ್ಜಾಲ ಮಾಧ್ಯಮದಲ್ಲೇ ಪತ್ರಿಕೆಗಳನ್ನು ಪ್ರಕಟಿಸುವುದಕ್ಕೆ ಆರಂಭಿಸಿಯಾವು. ಅಂಥ ಸಂದರ್ಭದಲ್ಲಿ ಈ ಕನಸು ಅವರೆಲ್ಲರಿಗಿಂತ ಮುಂದೆ ನಿಂತಿರುತ್ತದೆ. ಈ ಕನಸಿಗೆ ಮೂರು ವರ್ಷದ ಸಂಭ್ರಮದ ಸಂದರ್ಭದಲ್ಲಿ, ನನ್ನ ಕನಸನ್ನೂ ಸೇರಿಸಿದ್ದೇನೆ. ಇದು ಇನ್ನೂ ಹೆಚ್ಚಿನ ಬರಹಗಾರರಿಗೆ ವೇದಿಕೆಯಾಗಲಿ ಎಂದು ಹಾರೈಸುತ್ತೆನೆ.

ಅಕ್ಷರ , ಸುಳ್ಯ.

0 comments:

Post a Comment