ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಮಹಿಳಾ ಸಬಲೀಕರಣ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ರಾಜ್ಯ ವಾರ್ತಾ ಇಲಾಖೆ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಫೆಬ್ರವರಿ 18 ಮತ್ತು 19ರಂದು ಆಯೋಜಿಸಿದೆ. ಕಾರ್ಯಾಗಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಅವರು ಉದ್ಘಾಟಿಸುವರು. ಮಂಗಳೂರಿನ ಮಹಾಪೌರರಾದ ರಜನಿ ದುಗ್ಗಣ್ಣ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ದನ ಅವರು ಪಾಲ್ಗೊಳ್ಳುವರು. ಹಂಪಿಯ ಸಿರಿಗನ್ನಡ ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ಹೆಚ್. ನಾಗವೇಣಿ ಅವರು ಆಶಯ ನುಡಿಗಳನ್ನಾಡುವರು.


ಫೆಬ್ರವರಿ 19ರಂದು ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಸಮಾರೋಪ ನುಡಿಯನ್ನಾಡುವರು ಹಾಗೂ ಪ್ರಶಸ್ತಿ ಪತ್ರ ವಿತರಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ರೋಹಿಣಿ ಕಟೋಚ ಅವರು ಭಾಗವಹಿಸುವರು. ಎರಡು ದಿನದ ಕಾರ್ಯಾಗಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಲಾ ಇಬ್ಬರಂತೆ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಳ್ಳುವರು. ಎರಡು ದಿನಗಳಲ್ಲಿ ನಾಲ್ಕು ಅಧಿವೇಶನಗಳಿದ್ದು, ಪ್ರಥಮ ಅಧಿವೇಶನ ಮಹಿಳಾ ಸಬಲೀಕರಣದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ವಿಷಯದ ಬಗ್ಗೆ ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕರಾದ ಎನ್ ಎ ಎಂ ಇಸ್ಮಾಯಿಲ್ ಅವರು ವಿಷಯ ಮಂಡಿಸುವರು. ಅಪರಾಹ್ನ ಮೀನುಗಾರ ಮಹಿಳೆಯರ ಕಾರ್ಯಕ್ಷೇತ್ರ ಭೇಟಿ ಹಾಗೂ ಬೋಳೂರಿನ ಅಕ್ಷರ ಸದನದಲ್ಲಿ ಸಮೂಹ ಚರ್ಚೆ ಏರ್ಪಡಿಸಲಾಗಿದೆ.

19ರಂದು ಬೆಳಗ್ಗೆ ಶಿಬಿರದ ನಿರ್ದೇಶಕರಾದ ಬೆಂಗಳೂರು ವಿಶ್ವವಿದ್ಯಾಲಯ ಕೋಲಾರ ಪಿ.ಜಿ. ಕೇಂದ್ರದ
ಸಹಪ್ರಾಧ್ಯಾಪಕರಾದ ಡಾ ಡಾಮಿನಿಕ್ ಡಿ ಅವರು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸುವರು. ಬಳಿಕ ಆಕಾಶವಾಣಿ ಮೈಸೂರಿನ ಕೃಷಿರಂಗ ವಿಭಾಗದ ಪ್ರಸಾರ ನಿರ್ವಾಹಕರಾದ ಎನ್ ಕೇಶವಮೂರ್ತಿ ಮಹಿಳಾ ಸ್ವಾವಲಂಬನೆ ಹಾಗೂ ಕೃಷಿ ಕುರಿತು ವಿಷಯ ಮಂಡಿಸುವರು.
ನಾಲ್ಕನೇ ಅಧಿವೇಶನ ಮಹಿಳಾ ಸಬಲೀಕರಣದಲ್ಲಿ ಮಹಿಳಾ ಮೀಸಲಾತಿ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿದ್ಯಾ ಅವರು ಮಾತನಾಡುವರು.

0 comments:

Post a Comment