ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಕಲಾತ್ಮಕ ಚಿತ್ರಗಳನ್ನು ಸೂಕ್ಷ್ಮ ದೃಷ್ಠಿಯಿಂದ ವೀಕ್ಷಿಸಬೇಕಾಗಿದೆ. ಇಂದು ಕಲಾತ್ಮಕ ಚಿತ್ರಗಳನ್ನು ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಯುವಜನತೆ ಕಲಾತ್ಮಕ ಚಿತ್ರಗಳತ್ತ ಆಸಕ್ತಿಹೊಂದಬೇಕಾಗಿದೆ ಎಂದು ಈ ಕನಸು.ಕಾಂ ಅಂಕಣಗಾರ ಅನುಬೆಳ್ಳೆ ಅಭಿಪ್ರಾಯ ಪಟ್ಟಿದ್ದಾರೆ.ಅವರು ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಬೆಳ್ಳಿಸಾಕ್ಷಿ ಚಲನಚಿತ್ರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾನಸ ಆರ್ಟ್ಸ್ ಅರ್ಪಿಸಿದ, ಡಾ.ಅಶೋಕ್ ಪೈ ಅವರ "ಆಘಾತ " ಸಿನೆಮಾವನ್ನು ಪ್ರದರ್ಶಿಸಲಾಯಿತು.ಈ ಕನಸು.ಕಾಂ ಅಂಕಣಗಾರ ಅನು ಬೆಳ್ಳೆ ಮಾತನಾಡುತ್ತಿರುವುದು.


ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗದ ಮೌಲ್ಯ ಬಾಲಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಕನಸು.ಕಾಂ ಸಂಪಾದಕ ಹರೀಶ್ ಕೆ.ಆದೂರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

0 comments:

Post a Comment