ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಲ್ಕಿ : ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಮೀನುಗಾರಿಕಾ ಕಿರು ಬಂದರಿಗೆ ಸೋಮವಾರ ಭೇಟಿ ನೀಡಿದ ಕೇಂದ್ರ ಹಾಗೂ ರಾಜ್ಯದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಂಸದ ಡಿ.ವಿ ಸದಾನಂದ ಗೌಡ ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಮಗ್ರ ಪರಿಶೀಲನೆ ನಡೆಸಿದರು.ಶಾಸಕ ಲಾಲಾಜಿ ಆರ್ ಮೆಂಡನ್, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ ನಾಗರಾಜ ಶೆಟ್ಟಿ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮತ್ತಿತರ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸ್ಥಳೀಯ ಮೀನುಗಾರರೊಡನೆ ಚರ್ಚೆ ನಡೆಸಿದ ಬಂದರು ಇಲಾಖಾ ಉನ್ನತ ಅಧಿಕಾರಿಗಳು ಮಾಹಿತಿ ಕ್ರೋಢೀಕರಿಸಿದ ಬಳಿಕ ಬಂದರು ಪ್ರದೇಶದ ನದಿ ಹಾಗೂ ಸಮುದ್ರದಲ್ಲಿ ದೋಣಿಗಳಲ್ಲಿ ಸಂಚರಿಸಿ ಸ್ಥಳವನ್ನು ಸಮಗ್ರವಾಗಿ ಪರಿಶೀಲಿಸಿದರು.

ಮೀನುಗಾರರನ್ನುದ್ದೇಶಿಸಿ ಮಾತನಾಡಿದ ಸದಾನಂದ ಗೌಡರು, ಈಗಾಗಲೇ ಹೆಜಮಾಡಿ ಬಂದರು ಹೂಳೆತ್ತಲು ಮೀಸಲಿರಿಸಿದ 2 ಕೋಟಿ ರೂ. ಹಣದಲ್ಲಿ ಡ್ರೆಜ್ಜಿಂಗ್ ನಡೆಸುವ ಕಾರ್ಯವನ್ನು ಬಹುಬೇಗನೆ ಕೈಗೆತ್ತಿಕೊಳ್ಳಲಾಗುವುದು. ಕರಾವಳಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರವೂ 500 ಕೋಟಿರೂ. ಮೀಸಲಿರಿಸಿದೆ. ಈ ಎಲ್ಲಾ ಹಣವನ್ನು ಕ್ರೋಢೀಕರಿಸಿ ಹೆಜಮಾಡಿ ಬಂದರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇಷ್ಟರವರೆಗೆ ಈ ಬಂದರಿಗೆ ಕೇಂದ್ರದ ಉನ್ನತ ಅಧಿಕಾರಿಗಳು ಭೇಟಿ ನೀಡದ ಕಾರಣ ಇಲ್ಲಿನ ವಾಸ್ತವ ಅವರಿಗೆ ಅರಿವಿರಲಿಲ್ಲ. ಇನ್ನು ಬಂದರು ಶೀಘ್ರವಾಗಿ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.
ಈ ಸಂದರ್ಭ ಸ್ಥಳೀಯ ಮೀನುಗಾರ ಮುಖಂಡರುಗಳು ರಾಜಕೀಯ ನೇತಾರರು ಮತ್ತು ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.
ರಾಜ್ಯ ಮೀನುಗಾರಿಕಾ ಮತ್ತು ಬಂದರು ಸಚಿವರಾಗಿ ಬಿ ನಾಗರಾಜ ಶೆಟ್ಟಿಯವರು ಭೇಟಿ ನೀಡಿ ವಿವಿಧ ಆಶ್ವಾಸನೆಗಳ ಮಹಾಪೂರವನ್ನೇ ಅಂದು ಹರಿಸಿದ್ದರು ಬಳಿಕ ಯಾವುದೇ ಯಾರ್ಯ ನಡೆಯದೆ ಯೋಜನೆ ನೆನೆಗುದಿಗೆ ಬಿದ್ದಿತ್ತು ಇದೀಗ ಡಿವಿಯವರ ಸರದಿ ಮುಂದೇನಾಗುವುದೊ ಎಂದು ಕಾದುನೋಡುವ ಸರದಿ ನೆರದ ಪತ್ರಕರ್ತರು ಮತ್ತು ಸಾರ್ವಜನಿಕರದ್ದಾಗಿದೆ.
ಚಿತ್ರ - ವರದಿ : ಭಾಗ್ಯವಾನ್ ಮುಲ್ಕಿ.

0 comments:

Post a Comment