ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:05 PM

ಹರುಷ...

Posted by ekanasu

ಸಾಹಿತ್ಯ

ವಸಂತಾಗಮನದ ಓಲೆ ಓದಿ
ಹರುಷದಿ ಮತ್ತೆ ಹಾಡಿತು ಕೋಗಿಲೆ..

ವಸಂತಾಗಮನಕ್ಕೆ
ತಳಿರು ಸೂಸಿತು ಮಾಮರ
ಮೆಲ್ಲ ಸುಳಿಗಾಗಿ ಬೀಸಿತು ಚಾಮರ..
ವಸಂತಾಗಮ ಸಂಭ್ರಮ
ನೋಡಿ ಮಿನುಮಿನುಗಿತು ತಾರೆ...
ನಲ್ಲನ ಸವಿ ನೆನಪಿನಲ್ಲಿ...
ನಸು ನಾಚಿ ನಕ್ಕಳು ನೀರಿ...

ವಸಂತನ ನೋಡಲು
ರವಿಕಿರಣ ಬೀರಿತು ಪ್ರಖರ..
ಹೊಳೆಯಿತು ಸಂತಸದಿ
ಹಿಮಾಲಯ ಶಿಖರ...

ವಸಂತಾಗಮನ ಓಲೆ..
ಓದಿ ಹರುಷದಿ
ಮತ್ತೆ ಹಾಡಿತು ಕೋಗಿಲೆ..


- ಸೌಮ್ಯ ಸಾಗರ.

0 comments:

Post a Comment