ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:31 PM

ನಾನು...!?

Posted by ekanasu

ಸಾಹಿತ್ಯ





ಸುತ್ತ ಹತ್ತು ಜನವಿದ್ದು
ಏಕಾಂಗಿ ನಾನು...
ಬೋಳು ಮರದ ಮೇಲೆ ಕುಳಿತು..
ಹುಯಿಲಿಡುವ ಕಾಗೆಯಂತೆ..

ಎತ್ತ ನೋಡಿದರೂ ಮರಳುಗಾಡೇ...
ಓಯಸಿಸ್ ನ ಸುಳಿವಿಲ್ಲ
ಗುರಿಯಿರದ ಕಡೆ ಪಯಣದಲ್ಲಿ

ಸಹಚರರ ಹೆಜ್ಜೆಯಿಲ್ಲ
ಸುತ್ತ ನಾಲ್ಕು ಜನವಿದ್ದು
ಮೌನಾಂಗಿ ನಾನು
ಚಿತೆಯ ಮೇಲೆ ಚಿವಿಗುಟ್ಟುವ
ಬೆಂಕಿ ಜ್ವಾಲೆಯಂತೆ...!


- ಸೌಮ್ಯ ಸಾಗರ

2 comments:

~: rathna :~ said...

Simple and Good one..

ಸುಷ್ಮಾ.. said...

good one....

Post a Comment