ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಹೌದು "ಕಾಮಾಲೆ ಕಣ್ಣು ಹೊಂದಿದವರಿಗೆ ಊರೆಲ್ಲಾ ಹಳದಿ ಕಾಣುತ್ತದಂತೆ..." ಹೀಗಿದೆ ಇಂದಿನ ರಾಜ್ಯಪಾಲರ ಸ್ಥಿತಿಗತಿ. .. ಪ್ರಸಕ್ತ ರಾಜ್ಯವನ್ನಾಳುವ ಆಡಳಿತ ಪಕ್ಷ ಬಿಜೆಪಿಯನ್ನು "ಕೋಮುವಾದಿ ಪಕ್ಷ" ಎಂಬ ಪಟ್ಟಕಟ್ಟಿ ಸರಕಾರಕ್ಕೆ ಸಂಕಷ್ಟ ಸೃಷ್ಠಿಗೆ ಕಾರಣವಾಗಿರುವ ಘನಮಾನ್ಯ ರಾಜ್ಯಪಾಲರ ಇತ್ತೀಚಿನ ನಡವಳಿಕೆಗಳು ಪ್ರಜ್ಞಾವಂತರನ್ನು ತಲೆತಗ್ಗಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಇದಕ್ಕೊಂದು ನಿದರ್ಶನ ಚಿ.ಮೂ ಅವರ ಗೌರವ ಡಾಕ್ಟರೇಟ್ ಪದವಿ ಪ್ರದಾನದ ವಿಚಾರ.


"ಕರ್ನಾಟಕದ ರಾಜ್ಯಪಾಲರು ಕಾಂಗ್ರೆಸ್ ಪಕ್ಷದ ಏಜೆಂಟ್ ಎಂಬಂತೆ ಇತ್ತೀಚನ ದಿನಗಳಲ್ಲಿ ವರ್ತಿ ಸುತ್ತಿದ್ದಾರೆ" ಎಂಬ ಪ್ರತಿಪಕ್ಷಗಳ ಆರೋಪಗಳಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಇದೀಗ "ಬುದ್ದಿವಂತ ಸಾಹಿತಿ"ಗಳೂ ಒಪ್ಪುತ್ತಿದ್ದಾರೆ!
ಆದರೆ ಚಿ.ಮೂ ಅವರ ವಿಚಾರದಲ್ಲಿ ರಾಜ್ಯಪಾಲರ ಉದ್ಧಟತನದ ನಿಲುವು ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಮಾಡಿದ ಅಪಮಾನ ಎಂದರೆ ತಪ್ಪಾಗಲಾರದು.
ಬೆಂಗಳೂರಿನಲ್ಲಿ ನಲ್ವತ್ತು ವರುಷಗಳ ನಂತರ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ವಿಚಾರ ತೀವ್ರ ಚರ್ಚೆ ಗೊಳಗಾಗಿತ್ತು ಮಾತ್ರವಲ್ಲದೆ ಸೇರಿದ್ದ ಕನ್ನಡಾಸಕ್ತರು, ಸಾಹಿತ್ಯಾಸಕ್ತರು ರಾಜ್ಯಪಾಲರ ನಿಲುವಿಗೆ ತೀವ್ರ ವಿರೋಧವನ್ನೂ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ನಿರ್ಣಯವೊಂದನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ರಾಜ್ಯಪಾಲರು ನಿಜಕ್ಕೂ ಕಾಂಗ್ರೆಸ್ ಏಜೆಂಟ್ ಹೌದೇ...? ಅವರು ಯಾಕೆ ವಿಚಾರಗಳನ್ನು ಪರಾಂಬರಿಸುತ್ತಿಲ್ಲ...ಅಥವಾ ಅವರಿಗೆ ವಿಚಾರ ತಿಳಿಸುವ ಮಂದಿಯದ್ದೇ ಕುಂದುಕೊರತೆಯೇ...? ರಾಜ್ಯಪಾಲರು ವಿವೇಚಿಸಬೇಕು. ಸಾಕಷ್ಟು ಬಾರಿ ಎಡವಿದ್ದಾರೆ. ಹೆಜ್ಜೆ ಇಡುವ ಮೊದಲು ಎರಡು ಹೆಜ್ಜೆ ಹಿಂದಿಟ್ಟು ಘಟನೆಗಳನ್ನು ಅರ್ಥೈ ಸಿಕೊಳ್ಳಬೇಕೆಂಬುದನ್ನು ಅರಿಯದಷ್ಟು ದಡ್ಡರು ಹನ್ಸರಾಜ್ ಭಾರಧ್ವಾಜ್ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತೂ ಈ ರೀತಿಯ ವರ್ತನೆಗೆ ಕಾರಣವೇನು...?

"ಇದು ವರೆಗೆ ಯಾರುಯಾರಿಗೆಲ್ಲ ಡಾಕ್ಟರೇಟ್ ನೀಡಲಾಗಿದೆಯೋ ಅದನ್ನೆಲ್ಲ ಪರಿಶೀಲಿಸಬೇಕು. ಈ ನಾಡಿನಲ್ಲಿ ಡಾಕ್ಟರೇಟ್ ಗೌರವವನ್ನು ಬೇಕಾಬಿಟ್ಟಿಯಾಗಿ ಹಂಚಲಾಗಿದೆ "ಎಂದು ಸಾಹಿತಿ ಎಲ್. ಹನುಮಂತಯ್ಯ ಹೇಳುವ ಮಾತು ಕೂಡಾ ಅಷ್ಟೇ ಪ್ರಾಮುಖ್ಯ.
ಚಿದಾನಂದ ಮೂರ್ತಿಯವರು ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನ. ಕನ್ನಡ ಸಾರಸ್ವತ ಲೋಕಕ್ಕೆ ಅನಘ್ರ್ಯ ಸೇವೆ ಸಲ್ಲಿಸಿದ ಚಿದಾನಂದ ಮೂರ್ತಿಯವರನ್ನು ರಾಜ್ಯದ ಘನವೆತ್ತ ರಾಜ್ಯಪಾಲರು "ಕೋಮುವಾದಿ" ಎಂಬ ತೀರ್ಮಾನ ಹೂಡಿ ಗೌರವ ಡಾಕ್ಟರೇಟ್ ಪದವಿ ನೀಡಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಕೈಗೊಂಡಿದ್ದ ನಿರ್ಣಯದಂತೆ ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿತ್ತು.
ಕಾಂಗ್ರೆಸ್ ಪಕ್ಷದವರಿಗೆ, ಅಥವಾ ಎಡಪಂಥೀಯ ನಿಲುವುಳ್ಳವರಿಗೆ, ಕಾಂಗ್ರೆಸ್ ಪಕ್ಷಕ್ಕೆ ನಿರಂತರ ಪ್ರೋತ್ಸಾಹ ನೀಡುವ ಮಂದಿಗೆ, ಸೋನಿಯಾ ಗಾಂಧಿಯವರ ಕೃಪಾಕಟಾಕ್ಷಕ್ಕೆ ಪಾತ್ರರಾದವರಿಗೆ , ಅಥವಾ ಉಳ್ಳವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವುದಾಗಿದ್ದರೆ ಘನಮಾನ್ಯ ರಾಜ್ಯಪಾಲರು ಚರಾವೆತ್ತುತ್ತಿರಲಿಲ್ಲವೇನೋ...
ಇನ್ನಾದರೂ ರಾಜ್ಯಪಾಲರು ಕ್ಷುಲ್ಲಕ ರಾಜಕೀಯ ಮಾಡುವುದನ್ನು ಬಿಡಬೇಕಾಗಿದೆ. ವಯಸ್ಸಿಗೆ ಅನುಗುಣವಾದಂತಹ ಯೋಚನೆಗಳೂ ಬರಬೇಕಾಗಿದೆ. ಉತ್ತಮ ಕಾರ್ಯಗಳನ್ನು ಗೌರವಿಸುವ, ಉತ್ತಮ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಗುಣವನ್ನು ರೂಢಿಸಿಕೊಳ್ಳುವುದು ಉಚಿತ.

- ನಾಡೋಡಿ.

0 comments:

Post a Comment