ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:42 PM

ವಾರ್ಷಿಕ ಸಂಭ್ರಮ

Posted by ekanasu

ಪ್ರಾದೇಶಿಕ ಸುದ್ದಿ
ಬೆಂಗಳೂರು: ನೂಪುರ ಭ್ರಮರಿ -ನೃತ್ಯ ದ್ವೈಮಾಸಿಕದ 4ನೇ ಮತ್ತು ಚೈತ್ರರಶ್ಮಿ ಮಾಸಿಕದ 6ನೇ ವಾರ್ಷಿಕ ಸಂಭ್ರಮ ಬೆಂಗಳೂರಿನ'ನಯನ ಸಭಾಂಗಣ ದಲ್ಲಿ ನಡೆಯಿತು. ಪ್ರಧಾನ ಅತಿಥಿಗಳಾಗಿ ಪ್ರಧಾನ್ ಗುರುದತ್, ಅಧ್ಯಕ್ಷರು, ಕರ್ನಾಟಕ ಅನುವಾದ ಅಕಾಡೆಮಿ, ಡಾ. ಶಂಕರ್, ಮನಶಾಸ್ತ್ರಜ್ಞರು ಮತ್ತು ಅಷ್ಟಾವಧಾನಿಗಳು, ಡಾ||ಜಿ.ಬಿ. ಹರೀಶ್, ವಿಮರ್ಶಕರು ಹಾಗೂ ಪ್ರಾಧ್ಯಾಪಕರು, ತುಮಕೂರು ವಿ.ವಿ, ಮುರಳೀಧರ್ ರಾವ್, ಹಿರಿಯ ನಾಟ್ಯಾಚಾರ್ಯ, ಮಂಗಳೂರು, ಹಾಗೂ ದಿವಾಕರ ಹೆಗಡೆ, ಯಕ್ಷಗಾನ ಸಾಹಿತಿ ಮತ್ತು ಕವಿಗಳು ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ನೂಪುರ ಭ್ರಮರಿಯ ಸಂಪಾದಕಿ, ಕಲಾವಿದೆ ಮನೋರಮಾ ಬಿ. ಎನ್ ಅವರ 'ನೃತ್ಯ ಮಾರ್ಗ ಮುಕುರ' - ಭರತನಾಟ್ಯದ ಐತಿಹಾಸಿಕ ಬೆಳವಣಿಗೆಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣಗೊಂಡಿತು.


ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿಯನ್ನು ಕರ್ನಾಟಕದಲ್ಲಿ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸಿದ್ದು ಈ ಪ್ರಶಸ್ತಿಗೆ ಮೊದಲು ಭಾಜನರಾದವರು ಪ್ರಿಯಾ ರಾಮನ್. ಅವರು ಅನನ್ಯ ಕಲಾಸಿಂಚನ, ನರ್ತನಂ ಮತ್ತು ನರ್ತಕಿ ನಿಯತಕಾಲಿಕಗಳಲ್ಲಿ ಬರೆದ ಮೂರು ವಿಮರ್ಶೆಗಳನ್ನಾಧರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಇದೇ ಸಂದರ್ಭ ಚೈತ್ರರಶ್ಮಿ ಕಥಾಸಂಕಲನ 'ಕನ್ನಡಿ ಬಿಂಬದ ನೆರಳು' ಬಿಡುಗಡೆಗೊಂಡಿತು. ರಾಘವೇಂದ್ರ ಅನ್ವೇಕರ್, ಅಂತರಾಷ್ಟ್ರೀಯ ಈಜು ಕ್ರೀಡಾಪಟು, ವಿಶೇಷ ಚೇತನ ಸಾಧಕರು ಮತ್ತು ನಾಗರಾಜ ನಾವುಂದ, ಹಿರಿಯ ಸಂಘಟಕರು ಮತ್ತು ಸೃಷ್ಟಿ ಸಂಪನ್ಮೂಲ ಕೇಂದ್ರದ ನಿರ್ದೇಶಕರಿಗೆ ಗೌರವಾರ್ಪಣೆಯು ನಡೆಯಿತು. ಕಾರ್ಯಕ್ರಮವು ನೂಪುರ ಭ್ರಮರಿಯ 56 ಪುಟಗಳ ವಿಶೇಷ ಸಂಚಿಕೆ ಅನಾವರಣ ಮತ್ತು ಬಳಗದ ಹೆಮ್ಮೆಯ ಸಾಧಕರಿಗೆ ಮತ್ತು ಶ್ರಮಿಕರಿಗೆ ಅಭಿವಂದನಾ ಕಾರ್ಯಕ್ರಮವನ್ನೂ ಒಳಗೊಂಡಿತ್ತು. ಗುರು ಮುರಳೀಧರ ರಾ ವ್ ಮತ್ತು ದಿವಾಕರ ಹೆಗಡೆಯವರನ್ನು ಅಭಿವಂದಿಸಲಾಯಿತು. ವಿದುಷಿ ಐಶ್ವರ್ಯಾ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಭರತನಾಟ್ಯ ಕಾರ್ಯಕ್ರಮವೂ ಈ ಸಂದರ್ಭ ಜರುಗಿತು. ಈ ಸಂದರ್ಭ ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್, ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ ಬಿ.ಜಿ.ನಾರಾಯಣ ಭಟ್, ಚೈತ್ರರಶ್ಮಿ ಪತ್ರಿಕೆಯ ಸಂಪಾದಕ ರಾಮಚಂದ್ರ ಹೆಗಡೆ ಉಪಸ್ಥ್ತಿತರಿದ್ದರು.

ವರದಿ: ಮನೋರಮಾ ಬಿ.ಎನ್

0 comments:

Post a Comment