ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:21 PM

ಸಾಧಕ ಬಾಲಭಾಸ್ಕರ್

Posted by ekanasu

ಆಟ - ಅವಲೋಕನ

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕರಾವಳಿ ಜಿಲ್ಲೆಗಳ ಕ್ರೀಡಾಪಟುಗಳ ಸಾಧನೆಗಳನ್ನು ನಾವು ನೋಡುತ್ತಲೇ ಇದ್ದೇವೆ. ನಮ್ಮ ಜಿಲ್ಲೆಗಳಿಂದ ಅದೆಷ್ಟು ಶ್ರೇಷ್ಟ ಕ್ರೀಡಾಪಟುಗಳನ್ನು ಇಂದು ರಾಷ್ಟ್ರ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಪರಿಚಯಸಿದ್ದು ಮಾತ್ರವಲ್ಲ, ರಾಜ್ಯ, ರಾಷ್ಟ್ರೀಯ, ವಿಶ್ವ ವಿಶ್ವವಿದ್ಯಾಲಯಗಳ ಕ್ರೀಡಾಕೂಟಗಳನ್ನೂ ಸಂಘಟಿಸಿ, ಮಂಗಳೂರು ವಿಶ್ವ ವಿಶ್ವವಿದ್ಯಾಲಯದ ಶ್ರೇಷ್ಠ ಸಂಘನಕಾರರೆಂಬ ಪ್ರಶಸ್ತಿಗೆ ಪಾತ್ರರಾಗಿದ್ದು, ಇದೀಗ ಸುಮಾರು 33 ವರ್ಷಗಳಿಂದ ಉಜಿರೆ ಕಾಲೇಜಿನ ಕ್ರೀಡಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಾಧಕ ಬಾಲಬಾಸ್ಕರ್.ಗ್ರಾಮೀಣ ಪ್ರದೇಶದಲ್ಲಿ ತರಬೇತಿ ಪಡೆದ ರೈಲ್ವೇ ಪ್ರಾಧಿಕಾರದ ಯೇಸುದಾಸ್, ವಿಜಯಲಕ್ಷ್ಮಿ, ಚಂದನ ಕೆ.ಸಿ., ಅನೀಲ್, ಕೆ. ಎಸ್. ಅಶೋಕ್. ಬಿ.ಎಸ್.ಎನ್. ಎಲ್. ನ ಗಣೇಶ ರೈ. ಎಂ. ಇ. ಜಿ. ಯ ಶಂಕರ್ ಮೈತ್ರಿ, ಆಜೀತ್ ಅವರಂತಹ ಅದೆಷ್ಟು ಕ್ರೀಡಾಪಟುಗಳನ್ನು ಹಾಗೂ ಎನ್. ಐ. ಎಸ್. ಗೋಲ್ಢ್ ಮೆಡೆಲಿಸ್ಟ್ ರಾಮಂಚಂದ್ರ ಪಾಟ್ಕರ್, ವೆಂಟೇಶ ಭಟ್ಟ, ಪ್ರವೀಣ ಕುಮಾರ್, ಹಂಸವತಿ, ಅಂತರಾಷ್ಟ್ರೀಯ ಕ್ರೀಡಾ ಪಟುಗಳಾದ ದಾಮೋದರ ಗೌಡರಂತಹ ಉತ್ತಮ ಕ್ರೀಡಾ ತರಬೇತುದಾರರನ್ನು ಗ್ರಾಮೀಣ ಮಟ್ಟದಿಂದ್ದ ರೂಪಿಸಿ ಬೆಳಸಿದ ಕೀರ್ತಿ ಭಾಸ್ಕರ್ ಅವರದ್ದು.

ಇವರು ಶಾರೀರಿಕ ಶಿಕ್ಷಣ ನಿರ್ದೇಶಕರಾಗಿರುವಾಗಲೇ 400 ಮೀ.ಟ್ರ್ಯಾಕನ್ನು ರೂಪಿಸಲಾಗಿದೆ. ತಮ್ಮ ಯೋಜನೆಗಳಂತೆ ಸ್ಪರ್ಧೆಗಳನ್ನು ನಡೆಸಲು, ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಲು ಸಂಸ್ಥೆಯ ಸಹಕಾರ ದೊರೆತಿರುವುದರಿಂದಲ್ಲೆ ಅಂತರ ವಿಶ್ವ ವಿದ್ಯಾಲಯಗಳ ಮಹಿಳಾ ಹಾಗೂ ಪುರುಷರ ವಾಲಿಬಾಲ್ ಪಂದ್ಯವಾಳಿಗಳು, ದಕ್ಷಿಣ ಭಾರತ ವಿಶ್ವ ವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟಗಳಾದಂತಹ ಶ್ರೇಷ್ಠ ಕ್ರೀಡಾಕೂಟಗಳನ್ನು ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ನೆಡೆಸಲು ಸಾಧ್ಯವಾಗಿದೆ ಎಂದು ನೆನಪಿಸಿಕೊಳ್ಳುತ್ತಿದ್ದಾರೆ.- ಜಯಂತ್ ಕುಮಾರ್, ಗಂಗಾವತಿ.

0 comments:

Post a Comment