ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹರೀಶ್ ಅವರ ಮುದ್ದಿನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು!. ಬಹುಶಃ ಹರೀಶ್ ಆದೂರು ಅವರಿಗೆ ಹತ್ತು ತಲೆ, ಹತ್ತು ಕೈ, ಹತ್ತು ಮಿದುಳು ಮತ್ತು ದಿನಕ್ಕೆ 48ಗಂಟೆಗಳಿವೆ!... ಹಾಗೆ ನನಗೆ ಆಗಾಗ ಅನಿಸುತ್ತದೆ. ಮೊದಲು ಅವರೊಂದಿಗೆ ಮಾತನಾಡಿದಾಗ ಉತ್ತಮ ಉಪನ್ಯಾಸಕ ಅನಿಸಿತ್ತು. ಅಷ್ಟೊಂದು ವಿಷಯ ಅವರಲ್ಲಿದೆ. ನಂತರ ಬರವಣಿಗೆಗಾಗಿ ಅವರಿಗೆ ಪ್ರಶಸ್ತಿ ದೊರಕಿದ್ದು ಪತ್ರಿಕೆಯೋದಿ ತಿಳಿಯಿತು. ನಾನು ಬರಹವನ್ನೋದಿಗೆ ಉತ್ತಮ ಬರಹಗಾರ ಎಂಬುದನ್ನು ತಿಳಿದುಕೊಂಡೆ...ಅವರ ಫೋಟೋಗ್ರಾಫಿ ಹವ್ಯಾಸಗಳನ್ನು ನೋಡಿದೆ. ಉತ್ತಮ ಛಾಯಾಗ್ರಾಹಕನೆನಿಸಿತು. ಅವರು ಉತ್ತಮ ಉಪನ್ಯಾಸಕ, ಬರಹಗಾರ, ಫೋಟೋಗ್ರಾಫರ್ ಎಂದು ತೀರ್ಮಾನಿಸಿದಾಗಲೇ ಅವರು ನಿರ್ಮಿಸಿದ ಸಾಕ್ಷ್ಯಚಿತ್ರ ನೋಡಿದೆ. ಅವರೋರ್ವ ಉತ್ತಮ ನಿರ್ದೇಶಕರೂ ಹೌದು ಎಂಬ ಸತ್ಯ ತಿಳಿಯಿತು. ಅದಾಗಲೇ ಅವರು ಎ.ಸಿ., ರೆಫ್ರಿಜರೇಟರ್ ರಿಪೇರಿಯನ್ನೂ ಮಾಡಬಲ್ಲರು ಎಂಬುದನ್ನೂ ತಿಳಿದುಕೊಂಡೆ!. ಪರಮಾತ್ಮ ಇನ್ನೂ ಏನೇನು ಪ್ರತಿಭೆ ಅವರಲ್ಲಿ ಅಡಗಿಸಿಟ್ಟಿದ್ದಾನೋ... ತಿಂಗಳಿಗೊಮ್ಮೆಯಂತೆ ಅವರ ಪ್ರತಿಭೆಗಳನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ಇನ್ನೂ ದೊಡ್ಡ ಶಾಕ್ ಅಪ್ಪಳಿಸಿತು...
ಈ ಕನಸು.ಕಾಂ ಎಂಬ ಕನ್ನಡದ ಹೆಮ್ಮೆಯ ಅಂತರ್ಜಾಲ ವಾಹಿನಿಯ ಸಂಪಾದಕರು ಇದೇ ಆದೂರು...!ಅದೂ ಅಲ್ಲದೆ ಮಂಗಳೂರಿನ ಮೊತ್ತ ಮೊದಲ ಕನ್ನಡ ಅಂತರ್ಜಾಲ ತಾಣ ಅದು!. ಇಷ್ಟೆಲ್ಲಾ ಹೇಗೆ ಮಾಡುತ್ತಾರೆ ಹರೀಶ್...? ಈ ಕನಸು.ಕಾಂ ನೋಡಿದವರಿಗೆ ಗೊತ್ತಾಗುತ್ತದೆ ಒಬ್ಬ ತನ್ನ ಎಲ್ಲಾ ಶಕ್ತಿ, ಸಮಯ,ಶ್ರದ್ಧೆ, ಪ್ರತಿಭೆಗಳನ್ನು ಬಳಸಿ ಈ ಕನಸು ತಯಾರಿಸಿದ್ದಾರೆಂಬುದು. ಅವರಿಗೆ ಇಷ್ಟೆಲ್ಲಾ ಮಾಡಿ; ಜೊತೆಗೆ ಪತ್ರಿಕೆಗಳಿಗೆ ಲೇಖನ ಬರೆಯುವ, ಛಾಯಾಚಿತ್ರಗಳನ್ನು ತೆಗೆದುಕಳುಹಿಸುವ,ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುವ, ಚಲನಚಿತ್ರಗಳಲ್ಲಿ ನಟಿಸುವ ಸಾಮರ್ಥ್ಯ,ಪ್ರತಿಭೆ,ಶಕ್ತಿ ಎಲ್ಲಿಂದ ಬಂತು ಎಂಬುದು ಮಾತ್ರ ಯಕ್ಷಪ್ರಶ್ನೆ!
ಈ ಪ್ರಶ್ನೆ ಇರುವುದರಿಂದಲೇ ನನಗೆ ಹರೀಶ್ ಅವರಿಗೆ ಹತ್ತುತಲೆ ಇರಬಹುದೆಂಬ ಅನುಮಾನ ಬರುತ್ತದೆ.
ಹೆಣ್ಣು ನೋಡಲು ಬರುವಾಗ ತಾಯಿ ಹೇಗೆ ಮಗಳನ್ನು ಸಿಂಗರಿಸುತ್ತಾಳೋ ಅಷ್ಟೇ ಮುತುವರ್ಜಿಯಿಂದ ಈ ಕನಸಿಗೆ ಜನ್ಮನೀಡಿ ಪೋಷಿಸುತ್ತಾರೆ ಈ ಹರೀಶ್. ಅಲಂಕಾರದ ಹಿಂದೆ ಕಾಳಜಿ ಇರುವಂತೆ ಇಲ್ಲೂ ಇದೆ. ಈ ಕನಸಿನ ವಿನ್ಯಾಸದ ಕಡೆ ಒಮ್ಮೆ ನೋಡಿ... ಅಲ್ಲಿ ಬಳಸಿರುವ ಚಿತ್ರಗಳನ್ನೇ ನೋಡಿ... ಅಂತಹ ಮುತುವರ್ಜಿ ಅಲ್ಲಿದೆ. "ಫೋಟೋ ಸ್ಪೀಕ್ಸ್" ಎಂಬ ಮಾತು ಈ ಕನಸು ನೋಡಿದವರಿಗೆ ಗೊತ್ತಾಗುತ್ತದೆ. ಇದು ಈ ಕನಸಿನಲ್ಲಿ ಬಳಸಲಾಗಿರುವ ಪ್ರತಿಯೊಂದು ಚಿತ್ರಗಳೂ ಹೇಳುತ್ತಿರುವ ಸತ್ಯ. ಇಷ್ಟೆಲ್ಲಾ ಒಬ್ಬ ಹುಟ್ಟು ಕಲಾವಿದನಿಂದ ಮಾತ್ರ ಸಾಧ್ಯ. ಈ ಕನಸು ಮುಂದೆಯೂ ಬೆಳಗಲಿ.

0 comments:

Post a Comment