ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:28 PM

ಅರಿವು

Posted by ekanasu

ಸಾಹಿತ್ಯ
ಶೂನ್ಯಕ್ಕೆ ಮುಖ ಒತ್ತಿದಾಗ...
ಭಾವ ತೀವ್ರತೆಯ ರಸ ಒಸರುತ್ತದೆ...
ಕಡೆದಂತೆ ಅಗಾಧ ಕಡಲು
ಮೊದಲು ನಂಜನ್ನು ಉಂಡು


ಅಮೃತತೆಯ ರುಚಿ ಸವಿದಂತೆ
ಒಣ ಬೀಜ ಬಿತ್ತಿ
ಹಸಿರ ಹೊನ್ನ ಬೆಳೆದಂತೆ
ತಮದ ಜ್ವರ ಬಿಟ್ಟು
ಜ್ಞಾನದ ಚೇತರಿಕೆ ಪಡೆದಂತೆ
ಶೂನ್ಯಕ್ಕೆ ತಲೆಕೊಟ್ಟು
ಶೂನ್ಯವನ್ನು ಅರಿಯುವಂತೆ...
- ಸೌಮ್ಯ ಸಾಗರ.
(ಬರಹಗಾರರು ಮೂಲತಃ ಸಾಗರದವರು. ಪ್ರಸ್ತುತ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕಿ.ಚಿತ್ರಕಲೆ, ಲೇಖನ,ಬರಹ,ಯಕ್ಷಗಾನ ಇವರ ಹವ್ಯಾಸ.ಸರಳ,ಸಜ್ಜನ ಆತ್ಮೀಯ ವ್ಯಕ್ತಿತ್ವ.ಇಂದಿನಿಂದ ಪ್ರತಿದಿನ ಈ ಕನಸಿನ ಸಾಹಿತ್ಯ ಅಂಕಣದಲ್ಲಿ ದಿನಕ್ಕೊಂದು ಕವನ ನೀಡಲಿದ್ದಾರೆ. ಓದಿ ಅಭಿಪ್ರಾಯಿಸಿ. - ಸಂ.)

0 comments:

Post a Comment