ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:30 PM

ಸರಳ ವ್ಯಾಯಾಮಗಳು

Posted by ekanasu

ಆರೋಗ್ಯ

ಬೆಳಿಗ್ಗೆ ಎದ್ದ ಕೂಡಲೇ ನಮ್ಮ ದೇಹ ಜಡವಾಗಿರುತ್ತದೆ. ಮನಸ್ಸು ಪ್ರಫುಲ್ಲವಾಗಿರುತ್ತದೆ. ಅಂತಹ ಜಡತ್ವ ಹೋಗಿ ಲಘುತ್ವ ಬರಲು (ಲವಲವಿಕೆಗಾಗಿ) ಸರಳ ವ್ಯಾಯಾಮ ಮಾಡಬೇಕು. ಇದರಿಂದ

- ದ್ಯೈಹಿಕ ನಿಲುವು ಮತ್ತು ಚಲನಾ ವ್ಯವಸ್ಥೆ ಸುಗಮವಾಗುವುದು.
- ಹೃದಯ ಕ್ರಿಯೆ ಮತ್ತು ರಕ್ತ ಚಲನೆ ಸುಸೂತ್ರವಾಗುವುದು.
- ಜೀರ್ಣಕ್ರಿಯೆ ಆರೋಗ್ಯಕರವಾಗುವುದು.
- ಶ್ವಾಸಕೋಶಗಳು ಬಲಿಷ್ಠವಾಗುವುವು.
- ವಿಸರ್ಜನಾ ವ್ಯವಸ್ಥೆ ಕ್ರಮಬದ್ಧವಾಗುವುದು.
- ಜ್ಞಾನೇಂದ್ರಿಯಗಳು ಚುರುಕುಗೊಳ್ಳುವುವು, ಕ್ರಿಯಾಶೀಲವಾಗುವುವು.
- ಶರೀರ ಮೃದತ್ವ, ಲಘುತ್ವ ಉಂಟಾಗಿ ಮಾನಸಿಕ ಜಡತ್ವ ಮಾಯವಾಗುವುದು.
- ಯೋಗಾಭ್ಯಾಸ ಮಾಡಲು ಸುಲಭವಾಗುತ್ತದೆ.

1. ನೆಟ್ಟಗೆ ನೇರವಾಗಿ ನಿಂತುಕೊಂಡು ಸೊಂಟಕ್ಕೆ ಕೈಗಳನ್ನು ಕೊಟ್ಟು ಸಮ ಉಸಿರಾಟದೊಂದಿಗೆ ಒಂದೊಂದು ಕಾಲುಗಳನ್ನು ಮೇಳೆ ಕೆಳಗೆ ಸ್ವಲ್ಪ ಹೊತ್ತು ಮಾಡಬೇಕು.
2. ನೆಟ್ಟಗೆ ನೇರವಾಗಿ ನಿಂತುಕೊಂಡು ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಅಗಲ ಮಾಡಬೇಕು. ನಂತರ ಉಸಿರನ್ನು ಬಿರುತ್ತಾ ಮೊದಲ ಸ್ಥಿತಿಗೆ ಬರಬೇಕು. ಸ್ವಲ್ಪ ಹೊತ್ತು ಅಭ್ಯಾಸ ಮಾಬೇಕು.
3. ನೆಟ್ಟಗೆ ನೇರವಾಗಿ ನಿಂತುಕೊಂಡು ಎರಡು ಕೈಗಳನ್ನು ನೇರವಾಗಿ ಮುಂದೆ ಚಾಚಿ ಪರಸ್ಪರ ಬೆರಳುಗಳನ್ನು ಹೆಣೆದುಕೊಂಡು ಉಸಿರನ್ನು ತೆಗೆದುಕೊಳ್ಳುತ್ತಾ ಎದೆ ಹತ್ತಿರ, ಉಸಿರನ್ನು ಬಿಡುತ್ತಾ ದೂರ ಸ್ವಲ್ಪ ಹೊತ್ತು ಅಭ್ಯಾಸ ಮಾಡಬೇಕು.
4. ತಿರುಚಿವಿಕೆಯ ವ್ಯಾಯಾಮ (ಸಮ ಉಸಿರಾಟ)
5. ಉಸಿರನ್ನು ತೆಗದುಕೊಳ್ಳುತ್ತಾ ಎರಡು ಕೈಗಳನ್ನು ನೇರವಾಗಿ ಮೇಲಕ್ಕೆ ಚಾಚಬೇಕು. ಉಸಿರನ್ನು ಬಿಡುತ್ತಾ ಕೈಗಳನ್ನು ಕೆಳಗೆ ತರಬೇಕು.

ಈ ಮೇಲೆ ತಿಳಿಸಿದ ಸರಳ ವ್ಯಾಯಾಮಗಳನ್ನು ಲವಲವಿಕೆಗಾಗಿ ಸುಮಾರು 10 ರಿಂದ 15 ನಿಮಿಷ ಬೆಳಿಗ್ಗೆ ನಿಧಾನವಾಗಿ ಅಭ್ಯಾಸ ನಡೆಸಿದರೆ ಸಾಕು. ಇದು ಬಹಳ ಸುಲಭ ಸರಳ. ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ. ಹಾಗೂ ಸಾಮಾನ್ಯ ಎಲ್ಲರಿಗೂ ಅಭ್ಯಾಸ ಮಾಡಬಹುದಾಗಿದೆ.

- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ


0 comments:

Post a Comment