ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

"ಛೇ...ಏನ್ ಹವೇರೀ...ರಾತ್ರಿ ಚಳಿ...ಬೆಳಗ್ಗೆ ಬಿಸಿಲು...ಆರೋಗ್ಯಂತೂ ಸರೀಲ್ಲ...; ಅಯ್ಯೋ ಏನ್ ಧೂಳಪ್ಪಾ ಇದು... " ಇದೆಲ್ಲಾ ಮಾತು ಒಂದಷ್ಟು ಹೊರಹೋಗುವಾಗ ಕೇಳಿಬರುವುದು ಸಹಜ. ಯಾಕಂದರೆ ಅಷ್ಟರಮಟ್ಟಿಗೆ ಜನತೆ ಇಂದು ಕಂಗೆಟ್ಟು ಹೋಗಿದ್ದಾರೆ. ಬದಲಾದ ಸಮಾಜ, ಬದಲಾಗುತ್ತಿರುವ ಪ್ರಕೃತಿ, ಹವಾಮಾನಗಳಿಂದ ಮನುಷ್ಯ ನಿರಂತರ ಹತ್ತು ಹಲವು ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಅಲರ್ಜಿ, ಶೀತ, ಕಫ...ಹೀಗೆ ಹತ್ತು ಹಲವು ತೊಂದರೆಗಳು ಬಿಡದೆ ಕಾಡುತ್ತಿರುತ್ತವೆ. ಇವೆಲ್ಲವುಗಳಿಗೂ ರಾಮಬಾಣದಂತೆ ಯೋಗ ಕೆಲಸಮಾಡುತ್ತಿದೆ. ಈ ಯೋಗದ ಪ್ರಯೋಜನ, ಪ್ರಸ್ತುತತೆಯತ್ತ ಬೆಳಕು ಚೆಲ್ಲುವ ವಿಶೇಷ ಲೇಖನ ಈ ಕನಸು.ಕಾಂನ ಓದುಗರಿಗಾಗಿ...ನಮ್ಮ ಮೂಗಿನ ಆರೋಗ್ಯ ರಕ್ಷಣೆಗಾಗಿ ಹಾಗೂ ನೆಮ್ಮದಿಯ ಉಸಿರಾಟವನ್ನು ನಡೆಸುವುದಕ್ಕೆ ಮುಖ್ಯವಾಗಿ ಯೋಗದ 'ಜಲನೇತಿ' ಹಾಗೂ 'ಸೂತ್ರನೇತಿ' ಕ್ರಿಯೆಗಳನ್ನು ಅಭ್ಯಾಸ ಮಾಡಿದರೆ ಮೂಗಿನ ಅಲಜರ್ಿ ಹಾಗೂ ಉಸಿರಾಟದ ತೊಂದರೆಗಳ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

'ಕ್ರಿಯೆ'ಗಳು ಎಂದರೆ ಶುದ್ಧೀಕರಣ ಮಾಡುವುದು ಯಾ ನಿರ್ಮಲಗೊಳಿಸುವುದು. ಸ್ನಾನ ಮಾಡುವುದು, ಹಲ್ಲುಜ್ಜುವುದು, ಮುಖ ತೊಳೆಯುವುದು. . . ಇತ್ಯಾದಿಗಳೆಲ್ಲಾ ದೇಹದ ಶುದ್ಧೀಕರಣ ಕ್ರಿಯೆಗಳಾಗಿವೆ. ಆದರೆ ಯೋಗದ ಕ್ರಿಯೆಗಳೆಲ್ಲಾ ದೇಹದ ಒಳಗಿನ ಅಂಗಾಂಗಳನ್ನು ಶುಚಿಗೊಳಿಸುವುದು. ಯೋಗದೊಂದಿಗೆ ಕ್ರಿಯೆಗಳನ್ನು ಮಾಡುವುದರಿಂದ ಶರೀರದ ವಿವಿಧ ಭಾಗಗಳು, ಪಂಚಕೋಶಗಳೂ ಶುದ್ಧೀಕರಣಗೊಳ್ಳುತ್ತವೆ, ಹಾಗೂ ಪಂಚಪ್ರಾಣಗಳು ಹತೋಟಿಗೆ ಬರುತ್ತವೆ. ದೇಹ ಮತ್ತು ಮನಸ್ಸು ನಿರ್ಮಲವಾಗಿ ಏಕಾಗ್ರತೆಗೆ ಸಹಕಾರಿಯಾಗುತ್ತದೆ. ಅಂಗಗಳ ಶುದ್ಧೀಕರಣಕ್ಕೆ ಆರು ಪ್ರಧಾನ ಕ್ರಿಯೆಗಳಿವೆ. (ಷಟ್ ಕ್ರಿಯೆಗಳು ಎಂದು ಹೆಸರು).

1. ಕಪಾಲಭಾತಿ - (ಶ್ವಾಸ ಮಾರ್ಗ)
2. ತ್ರಾಟಕ - (ಕಣ್ಣುಗಳಿಗೆ)
3. ನೇತಿ - (ಮೂಗಿನಿಂದ ಗಂಟಲಿನ ತನಕ)
4. ಧೌತಿ - (ಜಠರ ಅನ್ನನಾಳ)
5. ನೌಳಿ - (ಹೊಟ್ಟೆಯ ಸ್ನಾಯುಗಳಿಗೆ)
6. ಬಸ್ತಿ - (ಮಲ ಶೋಧನ ಕ್ರಿಯೆ)

ನೇತಿಯಲ್ಲಿ ಹಲವು ವಿಧಾನಗಳಿವೆ. ಅವುಗಳು ಜಲನೇತಿ, ಸೂತ್ರನೇತಿ, ದುಗ್ಧ ನೇತಿ, ಮಧುನೇತಿ ಮತ್ತು ಘೃತನೇತಿ.

ಜಲನೇತಿ: ನೇತಿ ಪಾತ್ರೆಗೆ ಉಗುರು ಬಿಸಿನೀರು ಮತ್ತು ಚಿಟಿಕೆ ಉಪ್ಪು ಹಾಕಬೇಕು. ಶರೀರವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ತಲೆಯನ್ನು ಸ್ವಲ್ಪ ಓರೆಮಾಡಿ ಬಲ ಮೂಗಿನಿಂದ ನೇತಿ ಪಾತ್ರೆಯ ಮೂಲಕ ನೀರನ್ನು ಹಾಕಿ ಎಡ ಮೂಗಿನ ಮುಖಾಂತರ ಈ ನೀರನ್ನು ಹೊರ ತರಬೇಕು. ಈ ಸಂದರ್ಭದಲ್ಲಿ ಉಸಿರಾಟವನ್ನು ಬಾಯಿಯಲ್ಲಿ ನಡೆಸಬೇಕು. ಜಲನೇತಿ ಮಾಡುವಾಗ ಗಮನವೆಲ್ಲಾ ಉಸಿರಾಟದಲ್ಲಿರಬೇಕು. ಹಾಗೆಯೇ ಮೂಗಿನ ಎಡ ಬದಿಯಲ್ಲಿಯೂ ಅಭ್ಯಾಸ ಮಾಡಬೇಕು. ಜಲನೇತಿಯನ್ನು ಸಾಮಾನ್ಯವಾಗಿ ಕನಿಷ್ಟ ವಾರಕ್ಕೆ 3 ಯಾ 4 ಬಾರಿ ಮಾಡಬಹುದು. ಇದನ್ನು ಅಭ್ಯಾಸ ಮಾಡುವುದರಿಂದ ಮೂಗಿನ ಅಲಜರ್ಿ, ಸಯಿನಸೈಟಿಸ್, ಸಾಮಾನ್ಯವಾದ ನೆಗಡಿ ಮತ್ತು ಮೂಗಿನ ತೊಂದರೆಗಳನ್ನು ಸುಲಭವಾಗಿ ಸರಿಪಡಿಸಬಹುದಾಗಿದೆ.

ಗಮನಿಸಿ, ಜಲನೇತಿಯನ್ನು ಯಾರೂ ತಮ್ಮಷ್ಟಕ್ಕೆ ಅಭ್ಯಾಸ ಮಾಡಬೇಡಿ. ಮೂಗಿನೊಳಕ್ಕೆ ನೀರು ಹೋಗಿ ಹೆಚ್ಚು ಕಡಿಮೆ ಆಗಿ ತೊಂದರೆ ಆದೀತು. ಆದುದರಿಂದ ಇವನ್ನೆಲ್ಲಾ ಯೋಗ್ಯ ಗುರುಗಳ ಮುಖೇನ ಕಲಿಯಬೇಕು.


ಸೂತ್ರನೇತಿ: ಸ್ವಚ್ಛವಾದ ನೂಲನ್ನು ಅಥವಾ ಸಪೂರವಾದ ರಬ್ಬರ್ ನಳಿಕೆಯನ್ನು ಒಂದು ಮೂಗಿನ ಹೊಳ್ಳೆಯ ಮೂಲಕ ತುರುಕಿಸಿ ಬಾಯಿಗೆ ಬರುವಂತೆ ಮಾಡಿ, ಮೂಗಿನ ಮಾರ್ಗ, ಗಂಟಲು ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಇನ್ನೊಂದು ಬದಿಯಲ್ಲಿ ಅಭ್ಯಾಸ ಮಾಡಬೇಕು. ಈ ಸೂತ್ರನೇತಿ ಕ್ರಿಯೆಯನ್ನು ನಿಧಾನವಾಗಿ, ಬಹಳ ಜಾಗರೂಕತೆಯಿಂದ ಗುರುಮುಖೇನ ಕಲಿತು ಅಭ್ಯಾಸ ಮಾಡಬೇಕು. ಪ್ರಾರಂಭದಲ್ಲಿ ರಬ್ಬರ್ ನಳಿಕೆಯನ್ನು ಮೂಗಿನೊಳಕ್ಕೆ ತೂರಿಸುವಾಗ ಸ್ವಲ್ಪ ನೋವು ಬರುತ್ತದೆ, ಸ್ವಲ್ಪ ಧೈರ್ಯ ತೆಗೆದುಕೊಂಡು ನಿಧಾನವಾಗಿ ರಬ್ಬರ್ ನಳಿಕೆಯನ್ನು ಮೂಗಿನೊಳ ಭಾಗಕ್ಕೆ ತೂರಿಸಬೇಕು. ಕೈಯ ತೋರು ಬೆರಳು ಮತ್ತು ಹೆಬ್ಬೆರಳಿನ ಸಹಾಯದಿಂದ ಆ ರಬ್ಬರ್ ನಳಿಕೆಯನ್ನು ಗಂಟಲಿನಿಂದ ಬಾಯಿಯ ಮೂಲಕ ಹೊರತೆಗೆಯಬೇಕು.

ಈ ಲೇಖನದಲ್ಲಿ ತಿಳಿಸಿದ ಈ ಯೋಗ ಕ್ರಿಯೆಗಳು ಕೇವಲ ಮಾಹಿತಿಗೆ ಮತ್ತು ಅರಿವನ್ನು ಮೂಡಿಸಲು ಮಾತ್ರ. ಈ ನೇತಿ ಕ್ರಿಯೆಗಳನ್ನು ಸಮರ್ಪಕವಾಗಿ ವಾರಕ್ಕೆ 3 ಯಾ 4 ಬಾರಿ ಅಭ್ಯಾಸ ಮಾಡುವುದರಿಂದ ಮೂಗಿಗೆ ಸಂಬಂಧಪಟ್ಟಂತಹ ದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಲೇಖಕರ ವಿಳಾಸ: 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್
ಫೋನ್ ನಂ. : 9448394987


0 comments:

Post a Comment