ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡುಬಿದಿರೆ : ಜಗತ್ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ತೀವ್ರ ಬಿರುಕು, ಕುಸಿತ ಉಂಟಾಗಿದೆ. ಇದರಿಂದ ಆಸ್ತಿಕ ಭಕ್ತಾಧಿಗಳಿಗೆ ತೀವ್ರ ಆಘಾತ ಉಂಟಾಗಿದೆ. ವಿಶ್ವಪ್ರಸಿದ್ಧಿಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ಭೈರಾದೇವಿ ಮಂಟಪದ ಮೇಲ್ಛಾವಣಿಯ ಒಂದು ಭಾಗವೇ ಕುಸಿದು ಬಿದ್ದಿದೆ.ಮೂಡಬಿದಿರೆ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಸಿಡಿಮದ್ದು ಸ್ಫೋಟ, ಘನವಾಹನಗಳ ಸಂಚಾರದಿಂದ ಈ ಪ್ರದೇಶದಲ್ಲಿ ಭೂಮಿ ಕಂಪಿಸುತ್ತಿದ್ದು ಇದರಿಂದಾಗಿ ಈ ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ ಎಂಬ ಅಭಿಪ್ರಾಯ ಮೂಡಿದೆ.ಸಾವಿರ ಕಂಬದ ಬಸದಿಯು 1431 ಚೈತ್ರ ಶುಕ್ಲ ಪಂಚಮಿಯಂದು ಪ್ರತಿಷ್ಠಾಪಿಸಲಾಗಿದ್ದು ಕ್ರಿ.ಶ 1462 ರಲ್ಲಿ ಭಟ್ಕಳದ ಭೈರನ ಕೋಟೆಯ ರಾಣಿ ಭೈರಾದೇವಿಯು ಅಂದಿನ ಪೀಠಾಧೀಶರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನ ಹಾಗೂ ಪ್ರೇರಣೆಯೊಂದಿಗೆ ಸುಂದರ ಕಲಾಕೃತಿಗಳಿಂದ ಕಲ್ಲಿನಲ್ಲಿ ರಚಿಸಿದ ಮಂಟಪವೇ ಈ ಭೈರಾದೇವಿ ಮಂಟಪವಾಗಿದೆ.

ತೊಂದರೆ ತಪ್ಪಿದ್ದಲ್ಲ:
ಮೂಡಬಿದಿರೆಯ ಜೈನಪೇಟೆ ಸಮೀಪದಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದೆ. ಈ ಹೆದ್ದಾರಿಯಲ್ಲಿ ದಿನಪೂರ್ತಿ ವಿವಿಧ ರೀತಿಯ ವಾಹನಗಳು, ಘನ ವಾಹನಗಳು ಸಂಚರಿಸುತ್ತಿದೆ. ವಾಹನದ ದಟ್ಟಣೆ , ಪರಿಸರದಲ್ಲಿ ನಿರಂತರವಾದ ಗಣಿಗಾರಿಕೆ, ಸ್ಫೋಟಗಳ ಬಳಕೆಯಿಂದಾಗಿ ಮೂಡಬಿದಿರೆಯ ಅತ್ಯಪೂರ್ವವಾದಂತಹ ನಿರ್ಮಿತಿಗಳಿಗೆ ತೊಂದರೆಯುಂಟಾಗುತ್ತಿದೆ.

ಬಸದಿಯ ಪ್ರವೇಶ ಭಾಗ, ಬೈಕಣತಿಕಾರಿ ಬಸದಿ , ಪಡು ಬಸದಿ , ಕೆರೆ ಬಸದಿ, ವಿಕ್ರಮ ಶೆಟ್ಟಿ ಬಸದಿ, ಗುರು ಬಸದಿ ಭೈರಾದೇವಿ ಮಂಟಪದ ಪ್ರವೇಶ ಧ್ವಾರ ಹಾಗೂ ಸಿಡಿಲಿನ ಹೊಡೆತದಿಂದಾಗಿ ಮಾನಸ್ಥಂಭದಲ್ಲೂ ಬಿರುಕು ಕಾಣಿಸಿಕೊಂಡಿದೆ.
ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗಬೇಕಾಗಿದೆ. ಮೂಡಬಿದಿರೆಯಲ್ಲಿರುವ ಅತ್ಯಪೂರ್ವ ಬಸದಿಗಳ ರಕ್ಷಣೆಯಲ್ಲಿ ಮುಂದಡಿಯಿಡಬೇಕಾಗಿದೆ.

0 comments:

Post a Comment