ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಐತಿಹಾಸಿಕ ಸಾವಿರ ಕಂಬದ ಬಸದಿಯಲ್ಲಿ ತೀವ್ರ ಬಿರುಕು ಕಾಣಿಸಿಕೊಂಡಿದೆ. ಒಂದು ಪಾಶ್ರ್ವದ ಛಾವಣಿ ಕಲ್ಲು ಕೆಳಬಿದ್ದು ಒಡೆದುಹೋಗಿದೆ. ಮಾನಸ್ಥಂಭದಲ್ಲೂ ಬಿರುಕು ಕಾಣಿಸಿಕೊಂಡಿದೆ. ಮಹಾಧ್ವಾರದ ಮೇಲ್ಭಾಗದಲ್ಲಿ ತೀವ್ರ ಬಿರುಕು ಕಾಣಿಸಿದೆ. ಬಸದಿಯ ಮೇಲಂತಸ್ಥು ಪೂರ್ತಿಯಾಗಿ ಸಡಿಲಗೊಂಡಂತೆ ಭಾಸವಾಗುತ್ತಿದೆ. ಇಷ್ಟೆಲ್ಲಾ ಆದರೂ ಪುರಾತತ್ವ ಇಲಾಖೆಯಾಗಲೀ ಸರಕಾರವಾಗಲೀ ಇತ್ತ ಗಮನ ಹರಿಸಿಲ್ಲ.ಪ್ರವಾಸೋದ್ಯಮ ಇಲಾಖೆಯಾಗಲೀ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯಾಗಲಿ ಗಮನ ಹರಿಸಿಲ್ಲ. ಇದು ಖಂಡನಾರ್ಹ.
ಸಾವಿರ ಕಂಬದ ಬಸದಿಯ ನಿರ್ವಹಣೆಯ ಹೊಣೆ ಇದೀಗ ಇಲ್ಲಿನ ಜೈನಮಠದ್ದಾಗಿದೆ. ಯಾವುದೇ ರೀತಿಯ ಆರ್ಥಿಕ ನೆರವು ಸರಕಾರದಿಂದ ದೊರಕುತ್ತಿಲ್ಲ. ನಾಲ್ಕಾರು ವರುಷಗಳ ಹಿಂದೆ ಸುಮಾರು 60ಲಕ್ಷ ವೆಚ್ಚದಲ್ಲಿ ಬಸದಿಯ ಮೇಲ್ಛಾವಣಿಯ ನಿರ್ವಹಣೆಯನ್ನು ಮಾಡಲಾಗಿತ್ತು.
ಸಾವಿರ ಕಂಬದ ಬಸದಿಯ ಅತ್ಯಂತ ಸುಂದರ ವಾಸ್ತು ವಿನ್ಯಾಸವನ್ನು ಹೊಂದಿದ್ದು ವಿಶ್ವದಲ್ಲೇ ಒಂದು ವೈಶಿಷ್ಟ್ಯಪೂರ್ಣ ಬಸದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಪೂರ್ಣ ಶಿಲೆಯಿಂದಲೇ ಈ ಬಸದಿ ನಿರ್ಮಾಣಗೊಂಡಿದೆ.
ಬಸದಿಯ ಮಹಾಧ್ವಾರ, ಅಲ್ಲಿನ ಕೆತ್ತನೆಗಳು, ಬಾಗಿಲುಗಳಲ್ಲಿರುವ ಪಂಚನಾರೀ ತುರಗ, ನವನಾರೀ ಕುಂಜರ , ಇತರ ಕೆತ್ತನೆಗಳು ಅಚ್ಚರಿ ಮೂಡಿಸುತ್ತವೆ. ಇಲ್ಲಿನ ವಾಸ್ತು ವೈವಿಧ್ಯ ಅಧ್ಯಯನಯೋಗ್ಯವಾದುದು. ಒಂದೊಂದು ಕಂಬದ ಕೆತ್ತನೆಗಳೂ ಬುದ್ದಿಯನ್ನು ಪರೀಕ್ಷಿಸುವಂತಿದೆ. ಆದರೆ ಅಂತಹ ಅದ್ಭುತ ಇಂದು ಕಾಲಗರ್ಭ ಸೇರುವ ಹಂತದಲ್ಲಿದೆ.

ಶಿರಾ ಕಲ್ಲು ಬಳಕೆ: ಇದೀಗ ಬಸದಿಯ ಒಂದು ಪಾಶ್ರ್ವದಲ್ಲಿ ಧಾರಾಶಾಹಿಯಾದ ಛಾವಣಿ ನಿರ್ಮಾಣಕ್ಕೆ ಶಿರಾ ಕಲ್ಲನ್ನು ಬಳಸುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ಈ ಕನಸಿಗೆ ಮಾಹಿತಿ ನೀಡಿದ ಜೈನ ಮಠದ ಭಟ್ಟಾರಕ ಸ್ವಾಮೀಜಿಯವರು ಸಾವಿರ ಕಂಬದ ಬಸದಿಯ ಸುತ್ತಲೂ ಹತ್ತು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಸ್ಥಳೀಯಾಡಳಿತ ಮುಂದಾಗಬೇಕೆಂದರು.
ಭೂಮಿಯಲ್ಲಿ ಕಂಪನವಾಗುತ್ತಿದೆ. ಬಸದಿಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ತುಸು ದೂರದಲ್ಲಿ ಬೈಪಾಸ್ ರಸ್ತೆಯಾಗಿ ಪರಿವರ್ತನೆಗೊಳಿಸಬೇಕು ಮತ್ತು ಈಗಿರುವ ಹೆದ್ದಾರಿಯಲ್ಲಿ ಘನವಾಹನ ಸಂಚಾರವನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮಿಜಾರು , ಮರಿಯಾಡಿ,ಕೋಟೆಬಾಗಿಲು , ಇರುವೈಲು,ಬೆಳುವಾಯಿ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಬಾರದು. ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಮಾರಕಗಳಿರುವ ಪ್ರದೇಶದಲ್ಲಿ ಗಣಿಗಾರಿಕೆ, ಸ್ಫೋಟಕಗಳ ಬಳಕೆಯನ್ನು ಖಡ್ಡಾಯವಾಗಿ ನಿಷೇಧಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಪ್ರಾಚೀನ ಸ್ಮಾರಕಗಳ ನಾಡು. ಸಂಸ್ಕೃತಿಯ ಬೀಡು. ಈ ಬಸದಿಯ ಒಂದು ಬದಿಯ ಮೇಲ್ಛಾವಣಿ ಕುಸಿದು ಬಿದ್ದರೂ ಪುರಾತತ್ವ ಇಲಾಖೆ ಭೇಟಿನೀಡಿಲ್ಲ. ಸ್ಥಳೀಯಾಡಳಿತದ ಪರವಾಗಿ ತಹಶೀಲ್ದಾರ್ ಸ್ಥಳಕ್ಕೆ ಭೇಟಿನೀಡಿದ್ದಾರೆ. ಸರಕಾರ ಸೂಕ್ತ ರೀತಿಯ ಸ್ಪಂದನ ನೀಡಬೇಕಾಗಿದೆ. ಕೇಂದ್ರ ಸರಕಾರ ಸಂಬಂಧಿಸಿದ ಇಲಾಖೆಯ ಮೂಲಕ ತಕ್ಷಣಕ್ಕೆ ಈ ಬಸದಿಯ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ. ಬಸದಿಯಲ್ಲಿ ಮಿಂಚು ಬಂಧಕಗಳನ್ನು ಅಳವಡಿಸುವ ಕಾರ್ಯ ಆಗಬೇಕಾಗಿದೆ.

0 comments:

Post a Comment