ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ 8 ಕಿ. ಮೀ ದೂರದಲ್ಲಿದೆ ಐತಿಹಾಸಿಕ ಗ್ರಾಮ ಕಮ್ಮಾರಗಟ್ಟೆ. ಪುರಾಣ ಪ್ರಸಿದ್ದ ಆಂಜನೇಯ ಸ್ವಾಮಿ ದೇವಾಲಯದ ಪಕ್ಕ ಇರುವಂತಹ ಈ ಹುಣಸೇ ಮರ ನಿಜಕ್ಕೂ ಕೂಡ ಒಂದು ವಿಸ್ಮಯಕಾರಿ ಮರವೇ ಹೌದು. ಈ ಮರದಲ್ಲಿನ ವೈಶಿಷ್ಟ್ಯತೆ ಎಂದರೆ ಮರದ ಬೇರು ಮೇಲಾಗಿ ಅದರ ಕಾಂಡ ಹಾಗೂ ಉಳಿದ ಭಾಗ ಕೆಳಗೆ ಆಗಿ ಬೆಳದಿರುವುದು. ಸಾಮಾನ್ಯವಾಗಿ ಹುಣಸೇಮರಗಳು ಈ ರೀತಿ ಇರುವುದಿಲ್ಲ. ಇದಕ್ಕೆ ಐತಿಹಾಸಿಕ ಕಾರಣ ಕೊಡುತ್ತಾರೆ ಈ ಭಾಗದ ಜನ.

ಹಿನ್ನಲೆ


ಹಿಂದೆ ರಾಮಾಯಣದ ಕಾಲದಲ್ಲಿ ರಾಮ ಲಕ್ಷ್ಮಣರು ವನವಾಸಕ್ಕೆ ಬಂದಾಗ, ಈ ಊರಿಗೂ ಬಂದಿದ್ದರಂತೆ. ಆ ಸಂದರ್ಭ ಸೀತಾ ಮಾತೆ ಅಡುಗೆ ಮಾಡುವಾಗ ಹುಣಸೇ ಹಣ್ಣನ್ನು ಹಾಕುವುದು ಮರೆತೇ ಬಿಟ್ಟಳಂತೆ. ನಂತರ ಆಂಜನೇಯನಿಗೆ ಹುಣಸೇ ಹಣ್ಣನ್ನು ತರಲು ಹೇಳಿದರೆ ಆತ ಇಡೀ ಮರವನ್ನೇ ಹೊತ್ತು ತಂದನಂತೆ. ಸೀತಾ ಮಾತೆ ತನಗೆ ಎಷ್ಟು ಬೇಕೋ ಅಷ್ಟು ಹಣ್ಣು ತೆಗೆದುಕೊಂಡು ಮರವನ್ನು ಬೀಸಾಡಿದಳಂತೆ. ಅದು ಬೇರು ಮೇಲಾಗಿ ಉಳಿದ ಭಾಗ ಕೆಳಗಾಗಿ ಬೆಳೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಕದಲ್ಲಿ ಆಂಜನೇಯ ದೇವಾಲಯವಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ತರು.

ಪ್ರತೀತಿ

ಈ ಮರ ಪ್ರತಿನಿತ್ಯ ಅನೇಕ ಜನರಿಂದ ಪೂಜಿಸಲ್ಪಡುತ್ತದೆ. ಮಕ್ಕಳಾಗದಿದ್ದವರು, ರೋಗಗ್ರಸ್ತರು, ಅವಿವಾಹಿತರು ಈ ಮರವನ್ನು ಪೂಜಿಸಿದರೆ ಕಷ್ಟಗಳು ದೂರವಾಗುತ್ತವೆ ಎಂಬುದು ಇಲ್ಲಿನ ಪ್ರತೀತಿ.
ಈ ವಿಸ್ಮಯಕಾರಿ ಮರ ಇನ್ನು ಅನೇಕ ವಿಶೇಷತೆಗಳನ್ನು ಹೊಂದಿದೆ. ಈ ಮರದಲ್ಲಿನ ಕೆಲವು ರೆಂಬೆ ಕೊಂಬೆಗಳು ತಲೆಗೆ ಕಟ್ಟುವ ತುರುಬಿನ ಆಕಾರದಲ್ಲಿ ಕಾಣ ಸಿಗುತ್ತವೆ, ಇವಕ್ಕೆ ಸೀತೆ ತುರುಬು ಎಂದು ಹೆಸರು. ಅಂತೆಯೇ ಅಂತೆಯೇ ಆಂಜನೇಯನ ಆಕಾರವುಳ್ಳುವ ಹೊಲುವ ಆಕೃತಿ ಈ ಮರದಲ್ಲಿ ಇದೆ.

ಈ ಮರದ ಬಗ್ಗೆ ಅನೇಕರು ಸಂಶೋದನೆ ನಡೆಸಿದ್ದಾರೆ. ಜೀವಶಾಸ್ತ್ರ ಸಂಶೋಧಕರ ಪ್ರಕಾರ ಇದು ಸಾಮಾನ್ಯ ಒಂದು ಮರ. ಸಸ್ಯಶಾಸ್ತ್ರದಲ್ಲಿ ಈ ತರದ ಉದಾಹರಣೆಗಳು ಸಾಕಷ್ಟು ಇವೆ. ಆದರೆ ವಾಸ್ತವಕ್ಕೆ ಬಂದಾಗ ಬಹಳ ವಿರಳ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇನ್ನು ಉತ್ಖನಕಾರರು, ಇತಿಹಾಸ ತಜ್ಞರು ಇದಕ್ಕೆ ಐತಿಹಾಸಿಕ ಕಾರಣವನ್ನು ಕೊಡುತ್ತಾರೆ. ಒಟ್ಟಾರೆ ನೋಡಿದರೆ ಈ ವಿಸ್ಮಯಕಾರಿ ಮರ ಇಲ್ಲಿನವರ ಪ್ರತಿನಿತ್ಯದ ಆರಾಧ್ಯ ದೈವವಾಗಿದೆ.

-ದರ್ಶನ್ ಎಂ, ಕಮ್ಮಾರಗಟ್ಟೆ,
ಪ್ರಥಮ ಪತ್ರಿಕೋದ್ಯಮ,ಆಳ್ವಾಸ್ ಕಾಲೇಜು,
ಮೂಡುಬಿದಿರೆ.

4 comments:

Anonymous said...

thumba chennagide.. Nange kuda nodbeku a maravanna.. Adre kanditha nodthini..

Anonymous said...

thumba chennagide.. Nange kuda nodbeku a maravanna.. Adre kanditha nodthini..

Anonymous said...

very nice article.. good.. aneka vismayaglu ive emdu torisiddira...

Anonymous said...

u written the article in a good way....... not a bad one ,,,,,, keep writing

Post a Comment