ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಇಂದು ಪ್ರಪಂಚದಾದ್ಯಂತ ಕೃಷಿಗೆ ಸಂಬಂಧಿಸಿದ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ "ಸಾವಯುವ ಕೃಷಿ" ಕೂಡಾ ಒಂದು. ಹಿಂದಿನ ಕಾಲದಲ್ಲಿ ಕೃಷಿಗೆ ಬಳಸುತ್ತಿದ್ದಂತಹ ಸಾವಯುವ ಗೊಬ್ಬರಗಳನ್ನು ಮರೆತು ಇಂದು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದು ಒಂದು ವಿಪರ್ಯಾಸ.
ಆಧುನಿಕ ಯುಗದಲ್ಲಿ ಕಂಡು ಬರುವ ಹೊಸ ಹೊಸ ರೋಗಗಳಿಗೆ ಮುಖ್ಯ ಕಾರಣವೆಂದರೆ, ನಾವು ಬಳಸುತ್ತಿರುವ ಆಹಾರ ಪದಾರ್ಥಗಳು. ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಸಿರುವಂತಹ ತರಕಾರಿ ಬಳಸುವುದರಿಂದ ಹಾನಿಕಾರಕ ರಾಸಾಯನಿಕಗಳು ನಮ್ಮ ದೇಹ ಪ್ರವೇಶಿಸಿ ಕ್ಯಾನ್ಸರ್ ಮೊದಲಾದ ಭಯಾನಕ ರೋಗಗಳಿಗೆ ಕಾರಣವಾಗುತ್ತಿವೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕ್ರಮೇಣವಾಗಿ ನಾಶವಾಗುತ್ತಾ ಬರುತ್ತದೆ. ಮಣ್ಣಿನಲ್ಲಿ ಇರುವಂತಹ ಅನೇಕ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ. ಕೆಲವೊಂದು ರಾಸಾಯನಿಕ ಗೊಬ್ಬರಗಳು ವಾಯು ಮಾಲಿನ್ಯವನ್ನು ಉಂಟು ಮಾಡುತ್ತವೆ.ಇದಲ್ಲದೇ ಇನ್ನು ಅನೇಕ ರೀತಿಯಲ್ಲಿ ರಾಸಾಯನಿಕ ಗೊಬ್ಬರಗಳು ಹಾನಿ ಮಾಡುತ್ತಿವೆ. ಸಾವಯವ ಗೊಬ್ಬರ ಹಾಕಿ ಮಾಡಿದಂತಹ ಕೃಷಿ ಪರಿಸರವನ್ನು ರಕ್ಷಿಸುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೇ ಇಳುವರಿ ಕೂಡಾ ಅಧಿಕವಾಗುತ್ತದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡಿದರೆ ಎಕರೆಗೆ ಸುಮಾರು 2500 ರೂ ವೆಚ್ಚ ತಗಲುತ್ತದೆ. ಅದೇ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿದರೆ ಕೇವಲ 400 ರೂ ವೆಚ್ಚ ತಗಲುತ್ತದೆ ಮತ್ತು ಉತ್ತಮ ಆರೋಗ್ಯ ದೊರೆಯುತ್ತದೆ.

ಸಾವಯವ ಗೊಬ್ಬರಗಳಿಗೆ ಉದಾಹರಣೆ ಎಂದರೆ ಎರೆಹುಳು ಗೊಬ್ಬರ. ಇದೇ ಕಾರಣಕ್ಕಾಗಿಯೋ ಏನೋ ಎರೆಹುಳುವನ್ನು ರೈತನ ಸ್ನೇಹಿತ ಎಂದು ಕರೆಯಲಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುವಲ್ಲಿ ಈ ಹುಳುವಿನ ಪಾತ್ರ ಬಹಳ ಮುಖ್ಯವಾಗಿ ಕಂಡು ಬರುತ್ತದೆ. ಎರೆಹುಳುಗಳನ್ನು ತೊಟ್ಟಿ ಮಾಡಿ ಅದರಲ್ಲಿ ಹಾಕಿ ಬೆಳೆಸಬಹುದು. ನಂತರ ಅದನ್ನು ಸಸ್ಯಗಳ ಬುಡಕ್ಕೆ ಬಿಡುತ್ತಾ ಹೋಗಬೇಕು.
ಇನ್ನೊಂದು ರೀತಿಯ ಸಾವಯವ ಗೊಬ್ಬರ ಎಂದರೆ ಕೊಟ್ಟಿಗೆ ಗೊಬ್ಬರ. ಸಾಮಾನ್ಯವಾಗಿ ಎಲ್ಲಾ ರೈತರೂ ಕೂಡಾ ದನಕರುಗಳನ್ನು ಹೊಂದಿರುತ್ತಾರೆ. ಅವುಗಳು ಪ್ರತಿನಿತ್ಯ ಹಾಕುವಂತಹ ಸಗಣಿಯನ್ನು ಕೂಡಿ ಹಾಕಿ ತಿಪ್ಪೆ ಮಾಡಬೇಕು. ತಿಪ್ಪೆ ಕೊಳೆತ ನಂತರ ಆ ಗೊಬ್ಬರವನ್ನು ಕೃಷಿ ಮಾಡುವ ಸಂದರ್ಭದಲ್ಲಿ ಬಳಸಬಹುದು.

ಇಷ್ಟಲ್ಲದೇ ಕೋಳಿ ಹಿಕ್ಕೆ ಗೊಬ್ಬರಗಳು, ಕಟ್ಟಿಗೆ ಬಿರಿದ ನಂತರ ಬೂದಿಯನ್ನು ಎಸೆಯದೆ ಸಸ್ಯಗಳಿಗೆ ಹಾಕುವದು, ಸೂಟು ಮಣ್ಣು, ಸೋಗೆ ಹಾಳೆ ಇತರೆ ಕಸಗಳನ್ನು ಬಳಸಿ ತಯಾರಿಸುವಂತಹ ಸಾವಯವ ಗೊಬ್ಬರ ಹೆಚ್ಚು ಫಲದಾಯಕವಾಗಿರುತ್ತದೆ.
ಜಪಾನಿನ ಶ್ರೇಷ್ಠ ಕೃಷಿ ತಜ್ಞ ಪುಕುವೋಕ ನೈಸರ್ಗಿಕವಾಗಿ ಸಾವಯವ ಕೃಷಿ ಮಾಡಿ ರಾಸಾಯನಿಕ ಗೊಬ್ಬರ ಹಾಕಿದ ಕ್ಷೇತ್ರಗಳಿಗಿಂತಲೂ ಅಧಿಕ ಇಳುವರಿಯನ್ನು ಪಡೆಯುವಲ್ಲಿ ಸಫಲರಾದರು. ಸಾವಯವ ಗೊಬ್ಬರ ಹಾಕಿ ಬೆಳೆದ ತರಕಾರಿ, ಹಣ್ಣುಗಳು ರುಚಿಕರ ಹಾಗು ಪೌಷ್ಠಿಕಾಂಶವುಳ್ಳವಾಗಿರುತ್ತವೆ. ರಾಸಾಯನಿಕ ಗೊಬ್ಬರ ತಯಾರಿಕೆಯ ಕಾರ್ಖಾನೆಗಳಿಂದ ಬರುವ ತ್ಯಾಜ್ಯಗಳನ್ನು ತಡೆದು ಪರಿಸರ ಸಂರಕ್ಷಣೆ ಮಾಡಬಹುದು. ಭೂಮಿಯ ಫಲವತ್ತತೆ ನಾಶವಾವುದನ್ನು ತಡೆಯಬಹುದು. ಕೃಷಿಯ ಬಗ್ಗೆ ಸಾವಯವ ಗೊಬ್ಬರದಲ್ಲಿ ಪ್ರಾಯೋಗಿಕ ಅನುಭವವಾಗೊತ್ತದೆ.- ದರ್ಶನ್ ಎಂ, ಕಮ್ಮಾರಗಟ್ಟೆ,
ಪ್ರಥಮ ಪತ್ರಿಕೋದ್ಯಮ,ಆಳ್ವಾಸ್ ಕಾಲೇಜು,
ಮೂಡುಬಿದಿರೆ.

2 comments:

Anonymous said...

future will not be good in modern readymade technology but, will be good in self preparations
. Good keep it up.
AVEEN:-):-):-):-):-):-):)

Abhirama Hegde said...

ದರ್ಶನ್,
ಒಳ್ಳೆಯ ಪ್ರಯತ್ನ..ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಧನಾತ್ಮಕ ಭಾವನೆ ರೂಪಿಸುವಲ್ಲಿ ನಿಮ್ಮ ಲೇಖನ ಸಹಾಯಕ ವಾಗಲೆಂದು ಹಾರೈಸುತ್ತಾ..
ನಿಮ್ಮವ- ಅಭಿ

Post a Comment