ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನವದೆಹಲಿ: ಮೂವತ್ತೆಂಟು ವರುಷಗಳಿಂದ ಮುಂಬಯಿಯ ಕಿಂಗ್ಸ್ ಎಡ್ವರ್ಡ್ ಆಸ್ಪತ್ರೆಯ ಹಾಸಿಗೆಯೊಂದರಲ್ಲಿ ನಿಸ್ತೇಜವಾಗಿ ಮಲಗಿಕೊಂಡಿರುವ ಉತ್ತರ ಕನ್ನಡದ ಅರುಣಾ ಶ್ಯಾನ್ಬಾಗ್ ಅವರ ಖಾಯಿಲೆ ಗುಣಮುಖವಾಗುವಂತದ್ದಲ್ಲ. ಅವರಿಗೆ ದಯಾಮರಣವನ್ನು ನೀಡಿ ಆಕೆಯನ್ನು ಈ ನರಕ ಸದೃಶ್ಯ ಬದುಕಿನಿಂದ ಮುಕ್ತವಾಗಿಸಬೇಕೆಂದು ಅರುಣಾ ಅವರ ಮಿತ್ರೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ಜಸ್ಟಿಸ್ ಮಾರ್ಕಾಂಡೇಯ ಕಾತ್ಜು ಹಾಗೂ ಜ್ಞಾನ ಸುಧಾ ಮಿಶ್ರಾ ಅವರನ್ನೊಳಗೊಂಡ ಪೀಠವು ಇಂದು ಬೆಳಗ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿ ಅರ್ಜಿಯನ್ನು ತಿರಸ್ಕರಿಸುವ ನಿರ್ಧಾರ ತಳೆಯಿತು. ದಯಾ ಮರಣ ಭಾರತ ದೇಶದಲ್ಲಿ ಅಸ್ತಿತ್ವದಲ್ಲಿರದ ಕಾರಣ ಅರುಣಾ ಅವರಿಗೆ ಅದನ್ನು ನೀಡಲು ಸಾಧ್ಯವಿಲ್ಲ. ರೋಗಿಯು ತೀರಾ ಯಾತನೆಯನ್ನು ಅನುಭವಿಸುತ್ತಿರುವ ಅಪರೂಪದ ಪ್ರಕರಣಗಳಲ್ಲಷ್ಟೇ ಅದನ್ನು ನೀಡುವ ಕುರಿತು ಯೋಚಿಸಬಹುದೆಂದು ಪೀಠವು ತಿಳಿಸಿತು.ಕೋಮಾ ಸ್ಥಿತಿಯಲ್ಲಿ ಶ್ಯಾನುಭಾಗ್

ಅರುಣಾ ಶ್ಯಾನ್ ಬಾಗ್ ಉತ್ತರ ಕನ್ನಡದವರಾಗಿದ್ದು 1973ರಲ್ಲಿ ಮುಂಬಯಿಯ ಎಡ್ವರ್ಡ್ ಕಿಂಗ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆಸ್ಪತ್ರೆ ಖ್ಯಾತ ವೈದ್ಯ ಡಾ. ಸಂದಿಪ್ ಸರ್ದೇಸಾಯ್ ಅವರೊಂದಿಗೆ ಅರುಣಾ ಅವರ ವಿವಾಹ ನಿಶ್ಚಯವಾಗಿತ್ತು. ಅದೇ ವರುಷದ ನವಂಬರ್ 27ರಂದು ಈಕೆ ತನ್ನ ಕೊಠಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಮಯ ಆಸ್ಪತ್ರೆಯ ವಾರ್ಡ್ ಬಾಯ್ ಸೋಹಾನ ಲಾಲ್ ಬಾರ್ತಾ ವಾಲ್ಮೀಕಿ ಈಕೆಯನ್ನು ಸರಪಳಿಯಲ್ಲಿ ಬಂಧಿಸಿ ಅತ್ಯಾಚಾರವೆಸಗಿದ್ದ.

ಅತ್ಯಾಚಾರದ ಸಂದರ್ಭ ಮಾನಸಿಕವಾಗಿ ಆಘಾತಕ್ಕೊಳಗಾದ ಈಕೆ ಮತ್ತೆಂದೂ ಚೇತರಿಸಲಿಲ್ಲ. ಮಿದುಳಿಗೆ ಆಮ್ಲಜನಕವನ್ನು ಪೂರೈಸುವ ನರ ಹಾನಿಗೊಂಡಿದ್ದು ಕಳೆದ ಮೂವತ್ತೆಂಟು ವರುಷಗಳಿಂದ ಅರುಣಾ ಅದೇ ಆಸ್ಪತ್ರೆಯಲ್ಲಿ ಜೀವಂತ ಶವವಾಗಿ ಸಾವನ್ನು ಎದುರು ನೋಡುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಕಳೆದ ಹಲವಾರು ವರುಷಗಳಿಂದ ಈಕೆಯ ಯೊಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ. ವರುಷಗಳಿಂದ ಹಾಸಿಗೆಯಲ್ಲಿ ಯಾತನೆಯನ್ನು ಅನುಭವಿಸುತ್ತಿರುವ ಅರುಣಾರ ಮಿದುಳು ಈಗಾಗಲೇ ನಿಷ್ಕ್ರಿಯಗೊಂಡಿರುವುದರಿಂದ ಆಕೆ ಗುಣಮುಖಳಾಗುವ ಸಾಧ್ಯತೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಅರುಣಾರಿಗೆ ದಯಾಮರಣವನ್ನು ನೀಡಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ನ ತೀರ್ಪು ದೇಶದೆಲ್ಲೆಡೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.


0 comments:

Post a Comment