ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

* ಆಳ್ವಾಸ್ ಪ್ರಗತಿ 2011 *4000 ಹುದ್ದೆಗಳಿಗೆ ಬೃಹತ್ ಸಂದರ್ಶನ

ಮಂಗಳೂರು: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೂರು ದಿನಗಳ ಬೃಹತ್ ಉದ್ಯೋಗಮೇಳ "ಆಳ್ವಾಸ್ ಪ್ರಗತಿ - 2011" ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಏಪ್ರಿಲ್ 9,10 ಮತ್ತು 11ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿಂಗ್, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಪಿ.ಒ, ಕೆ.ಪಿ.ಒ, ಐ.ಟಿ, ಇನ್ಶೂರೆನ್ಸ್, ಅಟೋಮೊಬೈಲ್ ಸೇಲ್ಸ್ ಸೇರಿದಂತೆ ವಿವಿಧ ಸ್ತರದ ಹುದ್ದೆಗಳಿಗೆ ಈ ಉದ್ಯೋಗಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ.ವೊಕಾರ್ಡ್, ಅಪೋಲೋ, ಯು.ಎ.ಇ.ಎಕ್ಸ್ಚೇಂಜ್, ಇನ್ಫೋಸಿಸ್, ದಿಯಾಟೆಕ್, ಕೊಟಕ್ ಮಹೀಂದ್ರಾ, ಆಕ್ಸಸ್ ಬ್ಯಾಂಕ್, ಬಯೋಕಾನ್,ಎಂ.ಸಿ.ಎಫ್, ತಾಜ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ಸೇರಿದಂತೆ 150 ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದೆ. ಒಟ್ಟು 4000ಕ್ಕೂ ಮಿಕ್ಕಿದ ಉದ್ಯೋಗಾವಕಾಶ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗಲಿದೆ.
ಇದೊಂದು ಬೃಹತ್ ಉದ್ಯೋಗಮೇಳವಾಗಿದ್ದು ಮೂಡಬಿದಿರೆ ಪರಿಸರದಲ್ಲಿ ಈ ಮಟ್ಟದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಮೇಳ ಆಯೋಜಿಸಲಾಗುತ್ತಿದೆ.

20 ಸಾವಿರ ಉದ್ಯೋಗಾಕಾಂಕ್ಷಿಗಳು

ಆಳ್ವಾಸ್ ಪ್ರಗತಿ 2011ರಲ್ಲಿ ರಾಜ್ಯದ 20ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮಂಗಳೂರು ವಿ.ವಿ, ಕುವೆಂಪು ವಿ.ವಿ., ಧಾರಾವಾಡ ವಿ.ವಿ.ವಿಶ್ವೇಶ್ವರ ಟೆಕ್ನಾಲಜೀಸ್ ಆಫ್ ಯುನಿವರ್ಸಿಟಿ ಮತ್ತು ರಾಜೀವಗಾಂಧಿ ವಿ.ವಿ.ಗಳ ಆಶ್ರಯದಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸುವರು. ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಇತರ ವಿದ್ಯಾರ್ಥಿಗಳಿಗೆ ಈಗಾಗಲೇ ಸಂದರ್ಶನ, ಸಂದರ್ಶನ ತಯಾರಿ ವಿಶೇಷ ತರಬೇತಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಸಿದ್ಧಪಡಿಸಲಾಗಿದೆ.

ಮುಂಗಡ ತಿಳಿಸುವಂತೆ ವಿನಂತಿ


ಉದ್ಯೋಗಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಭಾವಚಿತ್ರ,ಸ್ವ ವಿವರ,ಸೂಕ್ತ ದಾಖಲೆಗಳೊಂದಿಗೆ ಸ್ಥಳದಲ್ಲೇ ನೋಂದಾವಣೆ ಮಾಡಬಹುದು. ಆನ್ ಲೈನ್, ಎಸ್.ಎಂ.ಎಸ್ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಪದವಿ ಪೂರೈಸಿದ, ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ, ಐ.ಟಿ.ಐ, ಪಾಲಿಟೆಕ್ನಿಕ್, ಇತರೆ ಡಿಪ್ಲೋಮಾ ಪದವಿ ಪೂರೈಸಿದ, ಹಾಗೂ ಅಂತಿಮವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.ಭಾಗವಹಿಸುವ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮುಂಗಡವಾಗಿ ಸಂಸ್ಥೆಯನ್ನು ಸಂಪರ್ಕಿಸಿ ಹೆಸರು ನೋಂದಾವಣೆ ಮಾಡುವುದರಿಂದ ಕಾರ್ಯಕ್ರಮದ ಯಶಸ್ವಿಗೆ ಸಹಕಾರವಾಗುತ್ತದೆ.

ಆಳ್ವಾಸ್ ಎಜುಕೇಷನ್ ಫೌಂಡೇಷನ್ ಶಿಕ್ಷಣ ,ಸಾಹಿತ್ಯ,ಕಲೆ,ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್ ಮೂಲಕ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಈ ಸಂಸ್ಥೆ ಇದೀಗ ಶಿಕ್ಷಣಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡುವ ನಿಟ್ಟಿನಲ್ಲಿ "ಉದ್ಯೋಗಮೇಳ"ವನ್ನು ಆಯೋಜಿಸುತ್ತಿರುವುದು ಗಮನಾರ್ಹ.
ಆಳ್ವಾಸ್ ಎಜುಕೇಷನ್ ಫೌಂಡೇಷನ್ 2009 -10ರ ಸಾಲಿನಲ್ಲಿ ಮೊದಲ ಬಾರಿಗೆ ಮೂಡಬಿದಿರೆಯಲ್ಲಿ ಪ್ರಗತಿ ಉದ್ಯೋಗಮೇಳವನ್ನು ಆಯೋಜಿಸಿತು. ಸುಮಾರು 38ಕಂಪೆನಿಗಳು ಭಾಗವಹಿಸಿದ್ದು 1500 ಹುದ್ದೆಗಳಿಗೆ ಆಯ್ಕೆನಡೆದಿತ್ತು. ಸಂಸ್ಥೆಯ 300ವಿದ್ಯಾರ್ಥಿಗಳು ಈ ಮೇಳದಲ್ಲಿ ಉದ್ಯೋಗಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸುಮಾರು 3,500ವಿದ್ಯಾರ್ಥಿಗಳು ವಿವಿಧೆಡೆಗಳಿಂದ ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದಿದ್ದರು. ಈ ಮೇಳದ ಯಶಸ್ಸಿನ ಬೆನ್ನಲ್ಲೇ ಈ ಬಾರಿ ದೊಡ್ಡ ಮಟ್ಟದಲ್ಲಿ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ, ಸಂಪೂರ್ಣ ಉಚಿತವಾಗಿ ಈ ಮೇಳ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳ ಆಯ್ಕೆಗನುಗುಣವಾದಂತಹ ಉದ್ಯೋಗ ಕಲ್ಪಿಸುವ ಕಾರ್ಯಕ್ರಮ ಇದಾಗಲಿದೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಸಂಸ್ಥೆಯ ಪತ್ರಿಕೋದ್ಯಮ ಉಪನ್ಯಾಸಕ ಹಾಗೂ ಹರೀಶ್ ಕೆ.ಆದೂರು, ಉದ್ಯೋಗಾಧಿಕಾರಿ ಅಮಿತ್ ಶೆಟ್ಟಿ ಉಪಸ್ಥಿತರಿದ್ದರು.
ಈ ಕನಸು.ಕಾಂ ಮಾಧ್ಯಮ ಪ್ರಾಯೋಜಕರಾಗಿದ್ದಾರೆ.

1 comments:

Anonymous said...

very nice

Post a Comment