ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಸಮಸ್ಯೆ ಪರಿಹಾರ ಆಗೋತನಕ ಯುಪಿಸಿಎಲ್ ಬಂದ್ ಮಾಡಿ : ಪೇಜಾವರ ಸ್ವಾಮೀಜಿ
ಯುಒಪಿಸಿಎಲ್ ವಿರುದ್ಧ ಪೇಜಾವರ ಶ್ರೀ ಸಮರ ಸಾರಿದ್ದಾರೆ. ಸಮಸ್ಯೆ ಪರಿಹಾರ ಆಗೋತನಕ ಯುಪಿಸಿಎಲ್ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಪೇಜಾವರ ಶ್ರೀ ಹೋರಾಟ ಹಾಗೂ ಇತರ ವಿಚಾರಗಳ ಒಂದು ಹೈಲೈಟ್ಸ್ ಹೀಗಿದೆ...
*ಯುಒಪಿಸಿಎಲ್ ಬೂದಿ ಹಂಡಕ್ಕೆ ಪೇಜಾವರ ಸ್ವಾಮೀಜಿ ಭೇಟಿ ನೀಡಿ, ಪರಿಶೀಲನೆ.
*ಯಪಿಸಿಎಲ್ ಅಧಿಕಾರಿಗಳಿಂದ ಪೇಜಾವರ ಸ್ವಾಮೀಜಿ ಮನ ಒಲಿಸುವ ಪ್ರಯತ್ನ ವಿಫಲ.
*ಯಪಿಸಿಎಲ್ ಅಧಿಕಾರಿಗಳ ವಿರುದ್ದ ತಿರುಗಿಬಿದ್ದ ಸ್ಥಳೀಯರು, ಮಾತಿನ ಚಕುಮಕಿ.
*ಶಾಲಾ ಮಕ್ಕಳು, ಪರಿಸರ ವಾಸಿಗಳು, ಮಹಿಳೆಯರು ಮತ್ತು ರೈತರಿಂದ ಸ್ವಾಮೀಜಿ ಅವರಿಗೆ ವಿವರಣೆ.
*ಸಮಸ್ಯೆ ಪರಿಹಾರವಾಗೋವರೆಗೆ ಯುಪಿಸಿಎಲ್ ನಿಲುಗಡೆ, ಶನಿವಾರದಿಂದ ಸ್ವಾಮೀಜಿ ಒಪ್ಪತ್ತು ಊಟದ ಪ್ರತಿಭಟನೆ ಶುರು.
*ಪ್ರತಿಭಟನೆಯಲ್ಲಿ ಭಾಗಹವಿಸುವದಿಲ್ಲ. ಧರಣಿ ಪಿಕಿಟಿಂಗ್ ನಡೆದರೆ ಸ್ಥಳಕ್ಕೆ ಹೋಗಿ ಮಾತನಾಡುತ್ತೇನೆ.
*ಕಂಪನಿ ಪರಿಸರದ ಜನರ ವಿಶ್ವಾಸ ಕಳೆದುಕೊಂಡಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಂಪನಿ ಮಾಡಿದ ಕೆಲಸ ತಪ್ಪು.ಉಡುಪಿ : ಯುಪಿಸಿಎಲ್ ಅಧಿಕಾರಿಗಳು ಹೇಳೋದೆಲ್ಲಾ ಸತ್ಯ ಅಂತ ನಂಬೋಕೆ ಆಗೋದಿಲ್ಲ. ಪರಿಸರ ನಿವಾಸಿಗಳ ಆಕ್ರೋಶದ ಹೇಳಿಕೆಯನ್ನೂ ಪೂರ್ಣ ಸತ್ಯ ಅನ್ನೋಕೆ ಬರೋದಿಲ್ಲ. ಆದರೆ ಯುಪಿಎಲ್ ನಿಂದ ಪರಿಸರ ಮಾಲಿನ್ಯ ಆಗುತ್ತಿರೋದು ಸತ್ಯ ಎಂದು ಪೇಜಾವರ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಎರ್ಮಾಳ್ ಯಪಿಸಿಎಲ್ಉಷ್ಣ ವಿದ್ಯುತ್ ಸ್ಥಾವರದ ಕಲ್ಲಿದ್ದಲು ಬೂದಿ ಹೊಂಡ ವೀಕ್ಷಿಸಿದ ನಂತರ ಸ್ವಾಮೀಜಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಯುಪಿಸಿಎಲ್ ಕಂಪನಿ ಪರಿಸರದ ಜನರ ವಿಶ್ವಾಸಗಳಿಸಲು ವಿಫಲವಾಗಿದೆ. ಕಂಪನಿ ಜನರ ವಿಶ್ವಾಸಗಳಿಸದೆ ಕೆಲಸ ಮಾಡಿ ತಪ್ಪು ಮಾಡಿದ. ಜನರು ಪರಿಸರ ಸರಿಯಾಗಿದೆ ಎಂದು ಹೇಳುವವರಗೆ ಉಪವಾಸ ಸತ್ಯಾಗ್ರಹ ನಿಲ್ಲೋದಿಲ್ಲ. ಸ್ವತಃ ಪ್ರತಿಭಟನೆ ಧರಣಿಯಲ್ಲಿ ಭಗವಹಿಸುವುದಿಲ್ಲ ಎಂದ ಸ್ವಾಮೀಜಿ ಧರಣಿ ನಡೆಯುವ ಸ್ಥಳಕ್ಕೆ ಭೇಡಿ, ನೀಡಿ ಮಾತನಾಡಿ ಬರುತ್ತೇನೆ ಎಂದು ಹೇಳಿದರು.

ಹಿಂದೆ ಯಪಿಸಿಎಲ್ ಕಂಪನಿಗೆ ಭೇಟಿ ನೀಡದ ಸಂದರ್ಭದಲ್ಲಿ ಹೇಗಿತ್ತೋ ಇಂದಿಗೂ ಹಾಗೆ ಇದೆ. ಹಿಂದೆ ಬೂದಿ ಹೊಂಡದ ಕೆಳಗಿನ ಕೃಷಿ ಭೂಮಿಯಲ್ಲಿ ನೀರಿರಲಿಲ್ಲ. ಆದರೆ ಈಗ ನೀರು ತುಂಬಿಕೊಂಡಿದೆ.ಇದಕ್ಕೆ ಕಾರಣವೇನು ಎಂದು ಯುಪಿಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಜನರು ನೀರು ಮತ್ತು ಬೆಳೆ ನಾಶವಾಗುತ್ತಿದೆ ಎಂದು ಅವಲತ್ತು ಕೊಳ್ಳುತ್ತಿದ್ದಾರೆ. ದೇವರಿಗೆ ಅಭಿಶೇಕ ಮಾಡುವ ನೀರು ಮಲೀನವಾಗುತ್ತಿದೆ ಎಂದು ದೂರಿಕೊಂಡಿದ್ದಾರೆ. ಜನರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹದಿಂದ ಹಿಂದೆಕ್ಕೆ ಸರಿಯೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹಾರೋ ಬೂದಿ ಮತ್ತು ಪರಿಸರ ಮಾಲಿನ್ಯ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕಂಪನಿ ಜನರ ವಿಶ್ವಾಸಗಳಿಸಬೇಕು. ಕಂಪನಿ ಜನರ ವಿಶ್ವಾಸಗಳಿಸದೆ ಕೆಲಸ ನಡೆಸುತ್ತಿರೋದು ಮೇಲುನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಕಂಪನಿಯ ಸಮಸ್ಯೆ ಪರಿಹಾರವಾಗೋವರಗೆ ಕಂಪನಿ ನಿಲ್ಲಿಸಬೇಕು ಎಂದು ಸ್ವಾಮೀಜಿ ಒತ್ತಿ ಹೇಳಿದರು.
ಶನಿವಾರದಿಂದ ಉಪವಾಸ ಆರಂಭಿಸುತ್ತೇನೆ. ಒಂದು ಹೊತ್ತಿನ ಊಟ ಬಿಟ್ಟು ಹಣ್ಣ, ಹಾಲು ಹಾಗೂ ನೀರನ್ನೂ ಸೇವಿಸೋದಿಲ್ಲ. ಜನಸಾಮಾನ್ಯರಿಗೆ ಒಳಿತಾಗಬೇಕು. ಪರಿಸರದ ನಿವಾಸಿಗಳು ಇನ್ನು ತೊಂದರೆ ಇಲ್ಲ ಎನ್ನೋ ಸರ್ಟಿಫಿಕೇಟ್ ಕೊಟ್ಟಾಗ ಉಪವಾಸ ಸತ್ಯಾಗ್ರಹ ನಿಲ್ಲಿಸುತ್ತೇನೆ ಎಂದು ಸ್ವಾಮೀಜಿ ಹೇಳಿದರು.

ವಿದ್ಯಾರ್ಥಿಗಳ ಮನವಿ : ಸ್ವಾಮೀಜಿ ಅವರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು ತಮಗಾಗುತ್ತಿರುವ ಸಂಕಷ್ಟ ತೋಡಿಕೊಂಡರು.
ಬೂದಿ ಹೊಂಡಕ್ಕೆ ಲಾರಿಯಲ್ಲಿ ಬೂದಿ ತಂದು ಸುರಿಯಲಾಗುತ್ತದೆ. ದಾರಿಯಲ್ಲಿ ಪ್ರಯಾಣಮಾಡಬೇಕಿದ್ದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳ ಬೇಕಾಗುತ್ತದೆ. ಶಾಲೆಯಲ್ಲಿ ದೂಳಿನ ದಾಂಗಿಡಿಯಂದ ಏಕಾಗ್ರತೆಯಲ್ಲಿ ಪಾಠ ಕೇಳಲಿಕ್ಕೂ ಆಗೋದಿಲ್ಲ . ಇದರಿಂದ ನಮ್ಮನ್ನು ಪಾರು ಮಾಡಿಯೆಂದು 6ನೇ ತರಗತಿ ಕಲಿಯುತ್ತಿರುವ ದೀಕ್ಷತ್ ಮತ್ತು ದಿಕ್ಷಾ, ರಿತೇಶ್, ಅವಿನಾಶ್ ಸ್ವಾಮಿಜಿ ಅವರನ್ನು ವಿನಂತಿಸಿದರು.

ಕಂಪನಿ ಪರವಾಗಿ ಹೇಳಿದ ಮಹಿಳೆಯರು : ಸ್ವಾಮೀಜಿ ಅವರನ್ನು ನಂಬಿಸುವ ಸಲುವಾಗಿ ಯುಪಿಸಿಎಲ್ ಕಂಪನಿ ಅಧಿಕಾರಿಗಳು ತಮ್ಮ ಕಂಪನಿಯಲ್ಲಿ ಕೆಲಸಮಾಡುವ ಮಹಿಳೆಯರನ್ನು ಸ್ಥಳಕ್ಕೆ ವಾಹನದಲ್ಲಿ ಕರೆತಂದು ಹೇಳಿಕೆ ಕೊಡುವ ಪ್ರಯತ್ನ ಮಾಡಿತು.
ಮಹಿಳೆಯರು ಗಿಣಿ ಪಾಠ ಮಾಡಿದಂತೆ ಕಂಪನಿಯಿಂದ ಏನೂ ತೊಂದರೆ ಆಗುತ್ತಿಲ್ಲ ಎಂದು ಉಲಿದರು. ಸುದ್ದಿಗಾರರ ಪುನಃ ಪನಃ ಕೇಳದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದರು. ಮಹಿಳೆಯರ ಹೇಳಿಕೆಯಿಂದ ರೊಚ್ಚಿಗೆದ್ದ ಪರಿಸರ ವಾಸಿಗಳು ಮಾತಿನ ಚಕಮಕಿ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರೀಸ್ಥಿ ನಿಯಂತ್ರಿಸಿದರು.
ಯುಪಿಸಿಎಲ್ ಕಂಪನಿ ಭೇಟಿ ನಂತರ ಸ್ವಾಮೀಜಿ ಪಾದೇಕಲ್ಲಗೆ ಭೇಟಿ ನೀಡಿದರು. ಪರಿಸರ ನಿವಾಸಿಗಳು ಯುಪಿಸಿಎಲ್ ನಿಂದ ಆಗುತ್ತಿರುವ ತೊಂದರೆಗಳನ್ನು ಸ್ವಾಮೀಜಿ ಅವರ ಗಮನಕ್ಕೆ ಎಂದರು.

- ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment