ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಂಗಳೂರು/ಬೆಂಗಳೂರು:ಮಾರ್ಚ್ 19ರಂದು ಏನೋ ಒಂದು ಸಂಭವಿಸಿಯೇ ಸಂಭವಿಸುತ್ತದೆ...ಈ ಭಯ ನಡುಕ ಎಲ್ಲರ ಮನೆ ಮನದಲ್ಲಿತ್ತು. ಈ ಆತಂಕದ ನಡುವೆ ಸೂಪರ್ ಮೂನ್ ಸಂಭವಿಸಿದೆ. ಚಂದ್ರ ಪ್ರಕಾಶಮಾನವಾಗಿ ಆಗಸದಲ್ಲಿ ನಗುನಗುತ್ತಾ ಗೋಚರಿಸಿದ್ದಾನೆ...ಬೆಳದಿಂಗಳ ಚೆಲ್ಲಿ...

"ಸೂಪರ್ ಮೂನ್" ಸೂಪರ್ ಆಗಿ ಗೋಚರಿಸಿದ್ದಾನೆ. ಈ ಹುಣ್ಣಿಮೆ ಚಂದ್ರ ಭೂಮಿಗೆ ಅತೀ ಸಮೀಪ ಬಂದ ಹಿನ್ನಲೆಯಲ್ಲಿ ಬರೀ ಕಣ್ಣಿಗೂ ಮಾಮೂಲಿಗಿಂತ ಒಂದಷ್ಟು ಭಿನ್ನವಾಗಿ ಸೂಕ್ಷ್ಮವಾಗಿ ಚಂದ್ರ ತನ್ನ ಮೈ ಪ್ರದರ್ಶಿಸಿದ್ದ.ಚಂದ್ರನಲ್ಲಿನ ಕುಳಿಗಳು ಒಂದಷ್ಟು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಬಹಳಷ್ಟು ಮಂದಿ ಸೂಪರ್ ಮೂನ್ ವೀಕ್ಷಿಸಿ ತಣ್ಣನೆ ನಿದ್ರೆಗೆ ಜಾರಿದ್ದಾರೆ. ಅಂತೂ ನಿರಾತಂಕವಾಗಿ ಸೂಪರ್ ಮೂನ್ ಗೋಚರಿಸಿದ್ದಾನೆ...!

1 comments:

KODAKKAL SHIVAPRASAD said...

ಶಿವಮೊಗ್ಗದಲ್ಲಿ ನಾನು ಸಹ ಚಂದಿರ ನೋಡಿದೆ, ಆದರೆ ಹಾಗೇನೂ ವಿಶೇಷ ಕಾಣಲಿಲ್ಲ, ಎಲ್ಲಿ ಜಪಾನಿಗೆ ಆದ ಹಾಗೆ ಆಗುತ್ತಾ ಅಂತ ಗಾಬರಿ ಇತ್ತು, ನಮ್ಮ ಪುಣ್ಯ ಻ಲ್ಲವಾ ?

Post a Comment