ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:05 PM

ಆಂತರ್ಯ

Posted by ekanasu

ಸಾಹಿತ್ಯ

ಶೃತಿಯಿಲ್ಲದ ಕೊರಳಿನಿಂದ
ಆವಗಾನವ ಪಾಡಿದರೇನು
ಕಾಗೆ ಕರೆವ ಗಾಯನದಂತೆ
ಕಿವಿಗೆ ಕರ್ಕಶವಲ್ಲವೇ...ಭಾವಹೀನ ಮನಸಿನಿಂದ
ಆವ ನೃತ್ಯ ಮಾಡಿದರೇನು
ಕೋಡಂಗಿಯ ಕುಣಿತದಂತೆ
ಎಲ್ಲ ವ್ಯರ್ಥವಲ್ಲವೇ..

ಭಕ್ತಿಹೀನ ಹೃದಯದಿಂದ
ಆವ ದೇವನ ಪೂಜಿಸಿದರೇನು
ಕಲ್ಲು ಕಲ್ಲಿನೊಡನೆ
ಭಾವ ಬೆಸೆಯಬಲ್ಲದೇ...?

- ಸೌಮ್ಯ ಸಾಗರ.

0 comments:

Post a Comment