ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ




ಮಂಗಳೂರು : ಕರ್ನಾಟಕ ಪ್ರವಾಸೋದ್ಯಮ ಇಲಾಖೆ,ರಾಜ್ಯ ಪ್ರವಾ ಸೋದ್ಯಮ ಅಭಿ ವೃದ್ಧಿ ನಿಗಮ ನಿಯಮಿತ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಯುಕ್ತವಾಗಿ ವಿಜಯ ನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವ ರಾಯರ ಪಟ್ಟಾಭಿಷೇಕದ 500 ನೇ ವರ್ಷದ ಸ್ಮರಣಾರ್ಥ ನಗರದ ನೆಹರು ಮೈದಾನದಲ್ಲಿ ಮಾರ್ಚ್ 5 ಮತ್ತು 6 ರಂದು ಸಂಜೆ 7 ಗಂಟೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಿದೆ.ಈ ಸಂಬಂಧ ಜಿಲ್ಲಾ ಪಂಚಾ ಯತ್ ಕಚೇರಿ ಯಲ್ಲಿ ಏರ್ಪಡಿಸಲಾದಪತ್ರಿಕಾ ಗೋಷ್ಠಿಯಲ್ಲಿ ಸವಿವರ ಮಾಹಿತಿ ನೀಡಿದ ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ ಅವರು, ಸರ್ವ ರಿಗೂ ಸಮಾರಂಭಕ್ಕೆ ಉಚಿತ ಪ್ರವೇಶವಿದೆ ಎಂದರು.

ಶಾಲಾ ಮಕ್ಕಳಿ ಗೋಸ್ಕರ ಮಾರ್ಚ್ 4 ರಂದು ಅಪರಾಹ್ನ 4 ಗಂಟೆಯಿಂದ ಸಂಜೆ 5 ರವರೆಗೆ ಮತ್ತು ಮಾರ್ಚ್ 5 ರಂದು ಪೂರ್ವಾಹ್ನ 8 ಗಂಟೆ ಯಿಂದ ಸಂಜೆ 5 ರವರೆಗೆ ಕೃತಕವಾಗಿ ನಿರ್ಮಿಸಲಾದ ಹಂಪಿಯ ವಿಜಯ ನಗರ ಸಾಮ್ರಾಜ್ಯದ ಸ್ಮಾರಕ ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹತ್ತಿರ ದಿಂದ ವೀಕ್ಷಿ ಸಲು ಅವಕಾಶವಿದೆ. ಸುಮಾರು ಒಂದು ಗಂಟೆ ಕಾಲದ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ಕೃಷ್ಣ ದೇವರಾಯ ಜನ್ಮ, ಪಟ್ಟಾಭಿಷೇಕ, ವಿವಾಹ, ಬ್ರಿಟಿಷರ ಸ್ನೇಹ, ಕಲ್ಲಿನ ರಥ, ಉಗ್ರ ನರಸಿಂಹ, ವಿಠ್ಠಲನ ದೇವಸ್ಥಾನ, ಕಮಲ್ ಮಹಲ್, ಕಡಲೇ ಕಾಳು ಗಣೇಶ, ಸಾಸಿವೆ ಕಾಳು ಗಣೇಶ, ವಿರೂಪಾಕ್ಷ ದೇವಾಲಯ, ಹಂಪಿ ಬಜಾರ್, ಆನೆಗಳ ಬಾಯಿ, ಆಂಜ ನೇಯ ಬೆಟ್ಟ, ಅಕ್ಕ ತಂಗಿ ಬಂಡೆ, ಸ್ಮಾರಕಗಳ ಬಗ್ಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವಿದೆ.

ಮಾರ್ಚ್ 5 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್ ನೆರವೇರಿಸಲಿರುವರು. ಆಯ್ದ 20 ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಸಂಬಂಧ ಪೂರ್ವ ತಯಾರಿಗೆ 300 ಜನ ಕಲಾವಿದರು, 3 ತಿಂಗಳು ದುಡಿದಿದ್ದಾರೆ ಎಂದು ಗೋಷ್ಠಿಯಲ್ಲಿ ಉಪಸ್ಥಿತರಿದ್ದಪ್ರಸ್ತುತ ಯೋಜನೆಯ ಸಹಾಯಕ ನಿರ್ದೇಶಕರಾದ ಎಂ. ಕೆ. ಮಠ ಅವರು ವಿವರಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ಉಪಸ್ಥಿತರಿದ್ದರು.

0 comments:

Post a Comment