ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ನೀರು ನೈರ್ಮಲ್ಯ ವಿಶ್ವದ ಮುಂದಿರುವ ಬೃಹತ್ ಸವಾಲುಗಳು: ಪ್ರೊ.ಕುರಿಯನ್

ವೇಣೂರು: ಶುದ್ಧ ಜಲ ಹಾಗೂ ಸಮಾಜದ ನೈರ್ಮಲ್ಯ ಇಂದು ವಿಶ್ವದ ಮುಂದಿರುವ ಬೃಹತ್ ಸಮಸ್ಯೆಯಾಗಿದೆ. ಪ್ರತಿಯೊಬ್ಬ ನಾಗರೀಕರೂ ಪರಿಸರದ ಸ್ವಚ್ಛತೆ ಹಾಗೂ ಶುದ್ಧ ಜಲದ ಜಾಗೃತಿಯಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಕರೆನೀಡಿದರು.ಅವರು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಗುರುವಾರ ಆರಂಭಗೊಂಡ ಸಮುದಾಯ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರಿಸರವನ್ನು ಶುಚಿಯಾಗಿಡುವ ಚಿಂತನೆ ಪ್ರತಿಯೊಂದು ಮನೆ , ಮನಗಳಲ್ಲಿ ಮೂಡಬೇಕಾಗಿದೆ. ಆಗ ಮಾತ್ರ ಇಡೀ ಸಮಾಜದ ತನ್ಮೂಲಕ ದೇಶದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.


ವಾರದ ಹಿಂದೆಯಷ್ಟೇ ರಾಜ್ಯ ಸರಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರ ಪಡೆದಂತಹ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾರ್ಚ್ 26ರ ತನಕ ಸಮುದಾಯ ಶಿಬಿರ ನಡೆಯಲಿದೆ. ಹೊಸಂಗಡಿ ಗ್ರಾಮದ ಮೂರನೇ ವಾರ್ಡ್, ಆಳ್ವಾಸ್ ಸಮಾಜಕಾರ್ಯ ಕಾಲೇಜು ಮೂಡಬಿದಿರೆ ಇಲ್ಲಿನ ಬಿ.ಎಸ್.ಡಬ್ಲ್ಯು ವೇದಿಕೆ , ಹೊಸಂಗಡಿ ಫ್ರೆಂಡ್ಸ್ ಕ್ಲಬ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ - ಬಡಕೋಡಿ., ಸ್ವಚ್ಛತಾ ಸಮಿತಿ 3ನೇ ವಾರ್ಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರ ಏರ್ಪಡಿಸಲಾಗಿದೆ.
ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ರಮೇಶ್ ಧ್ವಜಾರೋಹಣ ಗೈಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ.ಜೀವಂಧರ್ ಕುಮಾರ್ ಶಿಬಿರ ಉದ್ಘಾಟಿಸಿದರು.

ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಕೆ.ಜಯಕುಮಾರ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕುಮಾರ್, ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ಭಟ್ ಸಂಪಿಗೆ ಅತಿಥಿಗಳಾಗಿದ್ದರು. ವಿದ್ಯಾರ್ಧಿಗಳಿಂದ ಗ್ರಾಮದ ವಿವಿಧ ಮನೆಗಳಿಗೆ ಭೇಟಿನೀಡಿ ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.

0 comments:

Post a Comment