ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಅದು ಸುಮಾರು ಬೆಳಗ್ಗೆ 9.30 ರ ಸಮಯ ಶಿರಸಿ ಸಮೀಪದ ಮತ್ತಿಘಟ್ಟದ ಕೆಳಗಿನಕೇರಿ ತಲುಪಿದ್ದೆವು.ಈ ಕನಸು.ಕಾಂ ಏರ್ಪಡಿಸುತ್ತಿರುವ ವಿದ್ಯಾರ್ಥಿ ವಾರ್ಷಿಕ ಅವಾರ್ಡ್ ಗಾಗಿ ಒಂದಿಲ್ಲೊಂದು ವಿಶೇಷ ವರದಿ ಹುಡುಕುವ ಕಾತರ...ಆಗ ಹೊಳೆದದ್ದು ಸಿದ್ದಿ ಜನಾಂಗ!.ಆ ಸಿದ್ದಿ ಜನಾಂಗದ ಭೇಟಿಗಾಗಿ ಕಾಡೊಳಗೊಂದು ಅಲೆತ...ಅದರ ಅನುಭವ ಕಥನ..ಇಲ್ಲಿದೆ. ಇದು ನಿಮಗಾಗಿ...ಅದಾಗ ನಮ್ಮ ನೆರವಿಗೆ ಸಿಕ್ಕಿದ್ದು ದಾಮೋದರ ಸಿದ್ದಿ. ಅವರ ಜೊತೆ ಸಿದ್ದಿಗಳ ಕೇರಿ ನೋಡಲು ಹೊರಟೆವು. ಸಿದ್ದಿಗಳು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಈ ಊರಿನಲ್ಲಿ ಸುಮಾರು ಹನ್ನೊಂದು ಸಿದ್ದಿ ಸಂಸಾರಗಳು ಇವೆ. ಅವರ ಆಚಾರ, ವಿಚಾರ, ಕಾಡಿನ ಜೀವನದನುಭವವನ್ನು ತಿಳಿಯಲು ಕಾಡ ತೊರೆಯ ಜಾಡುಗಳನ್ನು ಹಿಡಿದು ನಡೆಯುತ್ತಾ ಹೋದೆವು. ಎರಡು ಕಿಲೋ ಮೀಟರ್ ದೂರ ಇದೆ ಎಂದು ಹೇಳಿದ್ದ ದಾಮೋದರ ಸಿದ್ದಿ ನಮ್ಮನ್ನು ಐದಾರು ಕಿಲೋ ಮೀಟರ್ ನಡೆಸಿಕೊಂಡು ಹೋದರು. ಕಾಡಿನ ಕಿರಿದಾದ ಕಾಲು ದಾರಿಯಲ್ಲಿ ನಡೆದುಕೊಂಡು ಅನೇಕ ತೊರೆಗಳು, ಕಾಡ ಗಿಡಗಂಟಿಗಳನ್ನು ದಾಟಿಕೊಂಡು ಕೊನೆಗೆ ದಾಮೋದರ ಸಿದ್ದಿಯ ಮನೆ ತಲುಪಿದೆವು.ಅಲ್ಲಿನ ಅವರ ಜೀವನ ವ್ಯವಸ್ಥೆಯನ್ನು ನೋಡಿದಾಗ ಅವರು ಸಾಮಾಜಿಕವಾಗಿ ಮುಂದುವರೆದಿದ್ದಾರೆ ಎನಿಸಿತು. ಪಕ್ಕಾ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಟಿ.ವಿ, ಡಿಶ್, ಮೊಬೈಲ್ ಫೋನ್ಗಳು ಅವರ ಪ್ರತಿನಿತ್ಯದ ಜೀವನದಲ್ಲಿ ಬೆರೆತು ಹೋಗಿವೆ. ಅಂತರ್ಜಾತಿಯ ಪ್ರೇಮ ವಿವಾಹಗಳು ಅವರಲ್ಲಿ ನಡೆದಿವೆ ಇಂದಿಗೂ ಕೂಡ ನಡೆಯುತ್ತಿವೆ. ಇಷ್ಟೆಲ್ಲಾ ನಾಗರೀಕರಾಗಿದ್ದರೂ ಕೂಡ ಅವರು ಸಮಾಜದಿಂದ ದೂರ ಇದ್ದಾರೆ. ಎಲ್ಲೋ ಆ ಕಾಡಿನ ಮಧ್ಯದಲ್ಲಿ ಜನಜೀವನ ನಡೆಸಿಕೊಂಡು ಸಾಗುತ್ತಿದ್ದಾರೆ. ಇಂದು ಅವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ. ಅಲ್ಲಿನ ಜನ ಅವರೇ ರಚಿಸಿದಂತಹ "ಸಂಗ್ಯಾಬಾಳ್ಯಾ" ದ ಕವಿತೆಗಳನ್ನು ನಮ್ಮ ಮುಂದೆ ಹಾಡಿದ್ದಾರೆ.

ಆ ಮನೆಯ ಚಿಕ್ಕ ಹುಡುಗಿ ಸುನಿತಾ "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" ಎಂಬ ಹಾಡನ್ನು ಇಂದಿನ ಯಾವ ಸಂಗೀತಗಾರರು ನಾಚುವಂತೆ ಹಾಡಿದ್ದು ವಿಶೇಷ.


ಇಷ್ಟೆಲ್ಲಾ ಅವರು ಮುಂದುವರೆದಿದ್ದರೂ ಕೂಡ ಅನೇಕ ಅನಾನುಕೂಲಗಳು ಅವರಿಗೆ ಕಾಡುತ್ತಿವೆ. ಸರಿಯಾದ ರಸ್ತೆಗಳು ಇಲ್ಲ. ಅಲ್ಲಿನ ತೊರೆಗಳಿಗೆ ಸೇತುವೆಗಳು ಇಲ್ಲ. ರೋಗಿಗಳನ್ನ ಕಂಬಳಿಯಲ್ಲಿ ಹೊತ್ತುಕೊಂಡು ತೊರೆಗಳನ್ನು ದಾಟಬೇಕು. ಅಲ್ಲಿನ ಶಾಲೆಗೆ ಹೊಗುವ ಮಕ್ಕಳು ಪ್ರತಿನಿತ್ಯ 8 ಕಿಲೋ ಮೀಟರ್ ನಡೆಯಬೇಕು. ಹೀಗೆ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಾ ಕಾಲಚಕ್ರದೊಂದಿಗೆ ಸಾಗುತ್ತಿದ್ದಾರೆ.


ಏನೇ ಆದರೂ ಕೂಡಾ ಅವರ ಸಂಸ್ಕೃತಿಯನ್ನು ಬಿಟ್ಟಿಲ್ಲ, ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಅವರಲ್ಲಿ ವಧುದಕ್ಷಿಣೆ ಪದ್ದತಿ ಜಾರಿಯಲ್ಲಿದೆ. ಅನೇಕ ಆಚಾರ-ವಿಚಾರ, ರೂಢಿ ಸಂಪ್ರದಾಯಗಳು ಅವರಲ್ಲಿ ಇಂದಿಗೂ ಇರುವಂತಹ ವಿಷಯ ಶ್ಲಾಘನೀಯವಾಗಿದೆ..

- ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ

4 comments:

BIDIRE said...

ಉತ್ತಮ ಪ್ರಯತ್ನ.......ಸಿದ್ಧಿ ಜನಾ೦ಗದ ಸಮಸ್ಯೆಗಳ ಬಗ್ಗೆ ವಿವರವಾದ ಮಾಹಿತಿ ಬೇಕಿತ್ತು........

Anonymous said...

ಸುಂದರವಾದ ಪ್ರವಾಸ ಕಥನ...

Anonymous said...

ಸುಂದರವಾದ ಪ್ರವಾಸ ಕಥನ..
Deepak.

Abhirama Hegde said...

As usual nice writeup.. keep it up..
it seems you are going to be winner this time!!
ALL THE BEST

Post a Comment