ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿಉಡುಪಿ : ಕಾರ್ಯನಿರತ ಪತ್ರಕರ್ತರ ಹೊರತಾಗಿ ಜಿಲ್ಲೆಯಲ್ಲಿ ಸಂಚರಿಸುವ ಅನೇಕ ವಾಹನಗಳು `ಪ್ರೆಸ್' ಫಲಕ ಬಳಸಿ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಮಾಧ್ಯಮ ಕ್ಷೇತ್ರದಲ್ಲಿ ಇರದವರು `ಪ್ರೆಸ್' ಫಲಕ ಬಳಸುವುದು ಕಾನೂನುಬಾಹಿರಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾಡಳಿತ ಜಂಟಿಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಬಳಸುವ ವಾಹನಗಳಿಗೆ ಮಾತ್ರ ಬಳಸುವ ಅಧಿಕೃತ ಸ್ಟಿಕ್ಕರ್ ಸಿದ್ಧಪಡಿಸಿದೆ. ಈ ಸ್ಟಿಕ್ಕರ್ನ್ನು ಹೊರತುಪಡಿಸಿ ಉಳಿದ `ಪ್ರೆಸ್' ಸ್ಟಿಕ್ಕರ್ ಬಳಸುವ ವಾಹನಗಳ ತಪಾಸಣೆ ನಡೆಸುವ ಅಧಿಕಾರ ಪೊಲೀಸರಿಗಿದೆ.

ಅಧಿಕೃತ ಸ್ವಿಕ್ಕರ್ ಬಿಡುಗಡೆ ಮಾ. 30ರ ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಪಿ. ಹೇಮಲತಾ ಪೊನ್ನುರಾಜ್, ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕುಮಾರ್ ವೈ. ಎಸ್. ಹಾಗೂ ಮಣಿಪಾಲ ಡಿಜಿಗೋ ವಿಭಾಗ ಮುಖ್ಯಸ್ಥ ಸತೀಶ್ಚಂದ್ರ ಎಸ್. ಎಸ್. ಅಭ್ಯಾಗತರಾಗಿ ಆಗಮಿಸುವರು ಸಂಘದ ಕಾರ್ಯದರ್ಶಿ ಕಿರಣ್ ಮಂಜನಬೈಲು ತಿಳಿಸಿದ್ದಾರೆ.

1 comments:

Anonymous said...

ಉತ್ತಮವಾದ ಪ್ರಯತ್ನ. ಜಿಲ್ಲಾಧಿಕಾರಿಗಳಿಗೆ ಹಾಗೂ ಪತ್ರಕರ್ತ ಸಂಘದವರಿಗೆ ಧನ್ಯವಾದಗಳು.. ದರ್ಶನ್ ಎಂ.ಕಮ್ಮಾರಗಟ್ಟೆ.

Post a Comment