ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ - ಅಂತಾರಾಷ್ಟ್ರ

ಕರ್ನಾಟಕದ ಕೊಡಗಿನಲ್ಲಿ ಉದಯಿಸಿದ ಸೂರ್ಯ ಬ್ರಿಟನಿನ ಲಂಡನಿನಲ್ಲಿ ಅಸ್ತಂಗತ.


ಬದುಕೇ ಹಾಗೆ ! ತಾನೊಂದು ಬಗೆದರೆ ದೈವ ವೊಂದು ಬಗೆಯುತ್ತದೆ. ಸುಮಾರು ದಶಕಗಳ ಹಿಂದೆ ಕರ್ನಾಟಕದ ಕೊಡಗಿನಿಂದ ಇಂಗ್ಲೆಂಡಿಗೆ ಬಂದು ,ಶೈಕ್ಷಣಿಕ ,ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಿ ದೈವಾಧೀನರಾದ ಕಿ ಕಿ ತಮ್ಮಯ್ಯ ನವರು ಇಂದು ನಮ್ಮೊಂದಿಗೆ ಇಲ್ಲ ಎನ್ನಲು ಬಹಳ ದುಃಖ ವಾಗುತ್ತದೆ. ಕರ್ನಾಟಕ ರಾಜ್ಯಕ್ಕೆ,ಕೊಡಗಿಗೆ ಹೆಮ್ಮೆ ತರುವಂತಹ ವೀರ ಕನ್ನಡಿಗ, ೨೦೦೦ ಇಸವಿಯಲ್ಲಿ ಪ್ರಪ್ರಥಮ ಭಾರಿಗೆ ಲಂಡನ್ನಿನ ಹ್ಯಾರೋ ಕೌನ್ಸಿಲ್ ಗೆ ಮೇಯರ್.೨೦ ವರುಷಗಳ ಕಾಲ ಲೇಬರ್ ಪಕ್ಷದ ಸೋಲಿಲ್ಲದ ಕೌಂಸಿಲ್ಲರ್,ಇಂಗ್ಲೆಂಡಿನ ಮಾಜಿ ಪ್ರಧಾನಿಗಳಾದ ,ಟೋನಿ ಬ್ಲೇರ್ ಮೊದಲಾದವರೊಂದಿಗೆ ರಾಜಕೀಯ ಒಡನಾಟ,ಬ್ರಿಟನಿನ ರಾಜಮನೆತನದೊಂದಿಗೆ ನಿಕಟ ಸಂಬಂಧ,ಕರ್ನಾಟಕದ ರಾಜಕೀಯ ಮುತ್ತ್ಸದ್ದಿಗಳಾದ ರಾಮಕೃಷ್ಣ ಹೆಗಡೆ,ಎಂ ಪಿ ಪ್ರಕಾಶ್ ರವರ ಸ್ನೇಹಿತ ,ಹತ್ತಾರು ಅಂತರಾಷ್ಟ್ರೀಯ ಸನ್ಮಾನಗಳು ಇಷ್ಟೆಲ್ಲಾ ಅರ್ಹತೆ ಇದ್ದರು ಯಾವುದೇ ಪ್ರಚಾರವನ್ನು ಬಯಸದ,ನಿಗರ್ವಿ,ಸಹೃದಯಿ ಶ್ರೀ ಕಿ ಕಿ ತಮ್ಮಯ್ಯನವರು.ಅವರ ಜೀವ ಇಂದು ನಮ್ಮೊಂದಿಗಿಲ್ಲದಿದ್ದರು ಅವರ ವ್ಯಕ್ತಿತ್ವ ನಮ್ಮೊಂದಿಗಿದೆ. ಎಪ್ಪತ್ತಾರು ವರುಷಗಳ ತಮ್ಮಯ್ಯ ನವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.ಇತ್ತೀಚಿಗೆ ಸಂಗಮ ಸಮಿತಿಯು ವಿಶ್ವ ಕನ್ನಡ ಸಮ್ಮೇಳನ ಯುರೋಪ್-೨೦೧೧ ಲಂಡನ್ನಿನಲ್ಲಿ ಆಯೋಜಿಸಿದ್ದೇವೆ,ನೀವು ಸಂಗಮ ಸಮಿತಿಯ ಅಧ್ಯಕ್ಷರಾಗಿ ನಮ್ಮನ್ನು ನಿರ್ದೇಶಿಸಬೇಕೆಂದು ಕೇಳಿಕೊಂಡಾಗ ಅವರು ಹೇಳಿದ ಮಾತು "ಕನ್ನಡಕ್ಕಾಗಿ ನನ್ನ ತನು ,ಮನ ಧನ ಆದರೆ ಅಂತಹ ದೊಡ್ಡ ಸಾಧನೆಯನ್ನೇನು ನಾನು ಮಾಡಿಲ್ಲ.ನಿಮ್ಮೊಂದಿಗೆ ನಾನು ಅಳಿಲು ಸೇವೆ ಮಾಡುತ್ತೇನೆ.ಅಧ್ಯಕ್ಷರನ್ನಾಗಿ ಬೇರೆಯವರನ್ನು ಮಾಡಿ " ಎಂದು ಸೌಜನ್ಯ ಪೂರ್ವಕವಾಗಿ ಹೇಳಿದ್ದರು.ನಿಮ್ಮ ಹೆಸರೇ ನಮಗೆ ಶ್ರೀ ರಕ್ಷೆ,ಗೌರವ ,ಸ್ಫೂರ್ತಿ ಹಾಗಾಗಿ ನೀವೇ ಅಧ್ಯಕ್ಷರಾಗ ಬೇಕೆಂದು ಹೇಳಿದಾಗ ವಿಶ್ವ ಕನ್ನಡ ಸಮ್ಮೇಳನ ಲಂಡನ್ನಿನಲ್ಲಿ ಆಗಲೇ ಬೇಕಾದ್ದು.ಎಲ್ಲ ಕನ್ನಡಿಗರನ್ನು ಈ ವಯಸ್ಸಿನಲ್ಲಿ ಕಾಣುವ ಯೋಗ ಬಂದಿದೆ.ನಾನು ಅಧ್ಯಕ್ಷನಾಗಿ ಸಹಕರಿಸುತ್ತೇನೆ ಎಂದು ಅನಾರೋಗ್ಯ ಇದ್ದಾಗ್ಯೂ ಒಪ್ಪಿ ಕೊಂಡರು.

ಮೊದಲನೇ ಮೀಟಿಂಗ್ ನಮ್ಮ ಮನೆಯಲ್ಲೇ ನಡೆಯಲಿ ಎಂದು ಮಾರ್ಚ್ ೨೭,ಭಾನುವಾರ ಸಂಜೆ ಮೂರು ಘಂಟೆಗೆ ಎಲ್ಲರನ್ನು ಬಹಳ ಆದರದಿಂದ ಬರಮಾಡಿಕೊಂಡು,ನಮ್ಮೊಂದಿಗೆ ಮೂರು ಘಂಟೆಗಳ ಕಾಲ ಬೆರೆತು,ಚರ್ಚಿಸಿ ನಮ್ಮನ್ನು ಹುರಿದುಂಬಿಸಿ ಇಂದು ನಮ್ಮನ್ನು ಬಿಟ್ಟು ಹೋಗಿ ಅನಾಥರನ್ನಾಗಿ ಮಾಡಿದ್ದಾರೆ.ಅವರ ಆತ್ಮಕ್ಕೆ ಭಗವಂತನು ಮೋಕ್ಷವನ್ನು ಕರುಣಿಸಲಿ,ಅವರ ಕುಟುಂಬಕ್ಕೆ ದುಃಖ ವನ್ನು ತಡೆಯುವ ಶಕ್ತಿ ದೇವರು ಕರುಣಿಸಲಿ.ಅವರ ಆಶಯಗಳನ್ನು ಪೂರೈಸುವ ಶಕ್ತಿ ಸಂಗಮಕ್ಕೆ ದೇವೆರು ಕೊಡಲಿ ಎಂದು ಪ್ರಾರ್ಥಿಸೋಣ

ವಿಶ್ವ ಕನ್ನಡಿಗರ ಹೃದಯದಲ್ಲಿ ಶ್ರೀ ತಮ್ಮಯ್ಯನವರ ವ್ಯಕ್ತಿತ್ವ ಸಂಗಮವಾಗಲಿ.ವಿಶ್ವ ಕನ್ನಡಿಗನ ಭಾವಪೂರ್ಣ ಶ್ರದ್ಧಾಂಜಲಿ ಭಗವಂತನ ಪದಕಮಲದಲ್ಲಿ ಸಂಗಮ ವಾಗಲಿ.ತಮ್ಮಯ್ಯನವರ ಆಶಯದಂತೆ ವಿಶ್ವ ಕನ್ನಡಿಗರ ಹೃದಯ ಸಂಗಮ ವಾಗಲಿ.ವಿಶ್ವ ಕನ್ನಡಿಗನ ಆಶಯದಂತೆ ತಮ್ಮಯ್ಯನವರ ಆತ್ಮ ಪರಮಾತ್ಮನಲ್ಲಿ ಸಂಗಮವಾಗಲಿ.

ಕೊಡಗಿನ ಕಾವೇರಿಗೆ ಜನಿಸಿದ ತಮ್ಮಯ್ಯ ಲಂಡನಿನ ಥೇಮ್ಸ್ ನದಿಯಲ್ಲಿ ಸಂಗಮಿಸಿದ
ಜಾತಸ್ಯ ಹಿ ಮರಣಂ ಧ್ರುವಂ ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರಪಂಚದಲ್ಲಿ ದೈಹಿಕವಾಗಿ ಇಲ್ಲದಿದ್ದರೂ ಎಲ್ಲರ ಮನಸ್ಸಿನಲ್ಲೂ ಜಿವನ್ತವಾಗಿರುತ್ತಾರೆ .ಅಂತಹ ಒಂದು ಉತ್ತಮರ ಸಾಲಿಗೆ ಸೇರಿದ ಶ್ರೀ ತಮ್ಮಯ್ಯನವರನ್ನು ಕರ್ನಾಟಕ ಸರಕಾರ ಗುರುತಿಸದೆ ಹೋದದ್ದು ಖೇದನೀಯ.ಇನ್ನಾದರೂ ಕರ್ನಾಟಕ ಸರಕಾರ ಮರಣೋತ್ತರವಾಗಿ ಗೌರವಿಸ ಬೇಕು.

-ಕುಮಾರ್ ಕುಂಟಿಕಾನಮಠ , ಲಂಡನ್

0 comments:

Post a Comment