ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಚಂಗ ಗಾಮ್ ಎಂಬ ಹಳ್ಳಿ ಅಂತರ್ಜಾಲದಲ್ಲಿ ಸುದ್ದಿಯದಾಗ...

"ಚಂಗ ಗಾಮ್'' ಇದು ಗುಜರಾತ್ ರಾಜ್ಯದ ಹಳ್ಳಿಯೊಂದರ ಹೆಸರು. ರಾಜಧಾನಿ ಅಹಮದಾಬಾದಿನಿಂದ ಎಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಈಗ ಈ ಹಳ್ಳಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿ ಮಾಡಿದೆ ಕಾರಣ ಇಷ್ಟೇ ಈ ಹಳ್ಳಿಯಲ್ಲಿ ವೆಬ್ಸೈಟ್ ಒಂದು ಕಾರ್ಯನಿರ್ವಹಿಸುತ್ತಿದೆ !. ಈ ವೆಬ್ಸೈಟ್ ಆರಂಬಿಸಿದ್ದು ಯಾರೋ ಹೊರಗಿನವರಲ್ಲ. ಬದಲಾಗಿ ಅದೇ ಹಳ್ಳಿಯಲ್ಲಿ ಹುಟ್ಟಿ ಮುಂದೆ ಕಷ್ಟಪಟ್ಟು ಓದಿ ಜವಳಿ ಕ್ಷೇತ್ರದಲ್ಲಿ ಎಂಜಿನಿಯರಾಗಿ ಕೆಲಸ ನಿರ್ವಹಿಸಿದವರು. ಅವರೇ ವಿಜಯ್ ಪಾಟೀಲ್.

ಸದ್ಯಕ್ಕಿವರು ತಮ್ಮ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ.ತಮ್ಮ ಹಳ್ಳಿ ಅಭಿವೃದ್ಧಿ ಆಗಬೇಕೆಂಬ ಮಹಾದಾಸೆ ಹೊಂದಿದವರು. ನನ್ನಿಂದ ಏನಾದರೂ ನನ್ನ ಹಳ್ಳಿಗೆ ಸಹಾಯ ಮಾಡಬೇಕು ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದರು. ಸಹಾಯ ಮಾಡುವ ದಿನಗಳು ಹತ್ತಿರ ಬಂದೆ ಬಿಟ್ಟಿತ್ತು !ಅವರ ಮನಸ್ಸಿಗೆ ಹೊಳೆದದ್ದೇ ವೆಬ್ಸೈಟ್ ಆರಂಭಿಸಬೇಕೆಂಬ ಬಯಕೆ. ವೆಬ್ ಸೈಟಿನಿಂದ ಅನೇಕ ಉಪಯೋಗಳನ್ನು ಅರಿತು ವಿಚಾರವಿನಿಮಯದ ಜೊತೆಗೆ ಯಾವುದೇ ಖರ್ಚುವೆಚ್ಚ ಇಲದ್ಲೇ ಅಂತರ್ಜಾಲ ವ್ಯವಸ್ಥೆಯನ್ನು ಇಡೀ ಹಳ್ಳಿಯ ಜನರಿಗೆ ಪರಿಚಯ ಮಾಡಿಸಿದಂತಾಗುತ್ತದೆಂದು ಅಂದು ಕೊಂಡು ಮುನ್ನಡೆದರು.

ತಮ್ಮ ಹಳ್ಳಿಯ ಜನರ ಸಹಾಯದೊಂದಿಗೆ ವಿಜಯ್ ಪಾಟೀಲ್ ವೆಬ್ಸೈಟ್ ಒಂದನ್ನು ಆರಂಭಿಸಿಯೇ ಬಿಟ್ಟರು. ಪ್ರಾರಂಭದಲ್ಲಿ ಹಳ್ಳಿಯ ಜನರನ್ನೆಲ್ಲಾ ಒಟ್ಟು ಸೇರಿಸಿ ಅಂತರ್ಜಾಲದ ಬಗ್ಗೆ ಮಾಹಿತಿ ನೀಡಿದರು. ಇವರು ವೆಬ್ ಸೈಟ್ ಆರಂಭಿಸಿದ್ದು ಜನರಿಗೆ ಕೃಷಿ ಕುರಿತು ಮಾಹಿತಿ ಕಲೆ ಹಾಕುವುದಕ್ಕಾಗಿ ಮತ್ತು ಪಂಚಾಯತ್ತಿಗೆ ಉತ್ತಮ ಆಡಳಿತ ನಡೆಸುವುದಕ್ಕಾಗಿ ಎಂಬ ಸೂತ್ರವನ್ನಿಟ್ಟುಕೊಂಡು ಬೇರೆ ಸ್ಥಳಗಳಿಂದ, ರಾಜ್ಯಗಳಿಂದ ಮತ್ತು ರಾಷ್ಟ್ರಗಳಿಂದ ತಜ್ಞರಿಂದ ಸಲಹೆ ಮಾಹಿತಿ ಪಡೆದು ಜಾರಿಗೆ ತರುವುದಕ್ಕಾಗಿ ಜೊತೆಗೆ ಅದೆಷ್ಟೊ ವರ್ಷಗಳಿಂದ ಚಂಗ ಗಾಮ್ ಊರು ಬಿಟ್ಟು ಹೋಗಿರುವವರನ್ನು ಮತ್ತೆ ಸಂಪರ್ಕದಲ್ಲಿರುವಂತೆ ಮಾಡುವ ಉದ್ದೇಶಕ್ಕಾಗಿಯೆಂದು ತಮ್ಮ ಹಳ್ಳಿಯ ಜನರಿಗೆ ವಿಜಯ್ ಪಾಟೀಲ್ ಮನದಟ್ಟು ಮಾಡುವುದರಲ್ಲಿ ಯಶಸ್ವಿಯಾದರು.

ಮುಂದೆ ಇವರ ವೆಬ್ ಸೈಟಲ್ಲಿ ಚಂಗ ಗಾಮ್ ಹಳ್ಳಿಯ ಮಾಹಿತಿ ಮತ್ತು ಮೂಲಭೂತ ಸೌಕರ್ಯಗಳ ಮಾಹಿತಿಗಳನ್ನು ವ್ಯವಸ್ಥಿತವಾಗಿ ಅಪ್ ಲೋಡ್ ಮಾಡುತ್ತಿದ್ದರು ಜೊತೆಗೆ ಹಳ್ಳಿಯಲ್ಲಿ ಆಗುವ ಕಾರ್ಯಕ್ರಮ ಜೊತೆಗೆ ಯಾರದರೂ ಸತ್ತರೆ ಅದರ ಮಾಹಿತಿಯು ವೆಬ್ ಸೈಟ್ ನಲ್ಲಿ ಲಭ್ಯವಾಗುವಂತೆ ಮಾಡಿದರು, ಈ ಹಳ್ಳಿಗಳಲ್ಲಿಗ ಹದಿನೈದು ಜನರ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸರ್ವಿಸ್ ಲಭ್ಯವಿದೆ. ಇನ್ನು ಕೆಲವರು ತಮ್ಮ ಮೊಬೈಲ್ ಮೂಲಕ ವೆಬ್ಸೈಟ್ ಅಪ್ ಲೋಡ್ ಮಾಡುತ್ತಾರೆ.

ಇವರು ಆರಂಭಿಸಿದ ಕೆಲವೇ ದಿನಗಳಲ್ಲಿ ಜನರು ಕೃಷಿ ಮತ್ತು ಆಡಳಿತದ ಕುರಿತು ಹೊರ ದೇಶಗಳಿಂದಲು ಜನರು ಉಪಯುಕ್ತ ಮಾಹಿತಿ ನೀಡಿ ಸ್ಪಂದಿಸಿದರು.ಇವರು ಏನೇ ಕಾರ್ಯ ಮಾಡುವ ಮುನ್ನ ಹಳ್ಳಿಯ ಜನರು ಒಟ್ಟು ಸೇರಿ ಚರ್ಚೆ ನಡೆಸುತ್ತಿದ್ದರು ನಂತರ ಒಂದು ನಿರ್ಧಾರಕ್ಕೆ ಬರುತ್ತಿದ್ದರು ಇದರ ಪರಿಣಾಮವಾಗಿ ಚಂಗ ಗಾಮ್ ಯಾವುದೇ ಸರಕಾರದ ಸಹಾಯವಿಲ್ಲದೇ ತನ್ನ ಕಾಲ ಮೇಲೆ ನಿಂತು ಅಭಿವೃದ್ಧಿಯತ್ತ ಸಾಗುತ್ತಿದೆ.

ಇದೆಲ್ಲಾ ನೋಡಿದಾಗ ನಮ್ಮ ಸುತ್ತ ಮುತ್ತಲಿನ ಹಳ್ಳಿಗಳು ನೆನಪಾಗುತ್ತವೆ ನಮ್ಮ ಹಳ್ಳಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಇದ್ದವೋ ಈಗಲೂ ಹಾಗೇ ಇವೇ ಎನ್ನುವುದ್ದೇ ದುರಂತ. ನಮ್ಮ ಹಳ್ಳಿಗಳು ಮೂಲಭೂತ ಸೌಕರ್ಯಗಳಿಲ್ಲದೆ ಚಡಪಡಿಸುತ್ತಿವೆ, ನಮ್ಮ ಜನಪ್ರತಿನಿಧಿಗಳು ಅಭಿವೃದ್ಧಿ ಮಂತ್ರ ಜಪಿಸುತ್ತಾರೆ ಹೊರತು ಜಾರಿಗೆ ತರಲು ಮೀನ ಮೇಷ ಎಣಿಸುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಹಳ್ಳಿಗಳ ಕಡೆ ತಲೆ ಹಾಕಿಯು ಮಲಗುವುದಿಲ್ಲ. ನಮ್ಮ ಹಳ್ಳಿಗಳಲ್ಲಿ ದಿನದಂದ ದಿನಕ್ಕೆ ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಜನ ಪ್ರತಿನಿಧಿಗಳಂತು ಗಮನ ಕೊಡುವುದಿಲ್ಲ ಸರಿ ಅದರೆ ಒಂದು ಮಾತು ಸತ್ಯ. ಅದೇನೆಂದರೆ ಎಲ್ಲದಕ್ಕೂ ಸರಕಾರವನ್ನು ಅವಲಂಬಿಸಬಾರದು. ಕೆಲವು ಸಲ ಯಾರ ಸಹಾಯವಿಲ್ಲದೇ ಮಾಡಬಹುದಾದ ಕೆಲಸವನ್ನು ಮಾಡಿಕೊಳ್ಳಬಹುದಲ್ಲವೇ..? ಅಂತರ್ಜಾಲ ಎನ್ನುವಂಥದ್ದು ಎಲ್ಲರ ಕೈಗೆ ಸಿಗುವ ಈ ಪರಿಣಾಮಕಾರಿ ಮಾಧ್ಯಮವಾಗಿದೆ, ನಮ್ಮ ದೇಶ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಏನೊ ಸಾಧನೆ ಮಾಡಿದೆ ಸರಿ. ಆದರೆ ಅಂತರ್ಜಾಲ ಎನ್ನುವಂಥದ್ದು ಬರೀ ಶ್ರೀಮಂತರಿಗೆ ಮತ್ತು ನಗರವಾಸಿಗಳಿಗೆ ಎಂದಾಗಿಬಿಟ್ಟಿದೆ. ಬಹುಶಃ ಈ ಎಲ್ಲಾ ವ್ಯವಸ್ಥೆಯನ್ನು ನೋಡಿಯೊ ಏನೋ ಎಂಜಿನಿಯರ್ ವಿಜಯ್ ಪಾಟೀಲ್ ಅಂತಹವರು ನಮ್ಮ ಅಭಿವೃದ್ಧಿಯನ್ನು ನಾವೇ ಮಾಡಿಕೊಳ್ಳಬೇಕು ಅಂದುಕೊಂಡರೋ ಏನೋ ?

ನೋಡಿ ಒಂದು ವೆಬ್ಸೈಟ್ ಇಡೀ ಹಳ್ಳಿ ಜೀವನವನೇ ಬದಲಾಯಿಸುತ್ತಿದೆ ಎಂದರೆ ವಿಜಯ್ ಪಾಟೀಲನಂಥ ಒಬ್ಬರು ನಮ್ಮ ಹಳ್ಳಿ ಹಳ್ಳಿಗಳಲ್ಲು ಇರಬೇಕೆಂಬ ಅನಿಸುದಿಲ್ಲವೇ? ಅಂತರ್ಜಾಲ ಎನ್ನುವುದು ವಿದ್ಯಾವಂತರಿಗೆ ಮಾತ್ರ ಎನ್ನುವ ಮೈಲಿಗೆಯನ್ನು ದೂರವಿಟ್ಟ ವಿಜಯ್ ಪಾಟೀಲ್ ಅಲ್ ದಿ ಬೆಸ್ಟ್ ಹೇಳೋಣ ಅಲ್ಲವೇ


ಚೇತನ್ ಎಂ.ಸಿ ಉಜಿರೆ
ದ್ವಿತೀಯ ಸ್ನಾತಕೋತರ ಪದವಿ

1 comments:

Abhirama Hegde said...

ಅಂತರ್ಜಲವಾಗಿದ್ದ ಅಂತರ್ಜಾಲವನ್ನು ಪುಟ್ಟ ಜಗತ್ತಿಗೆ ಹರಿಬಿಟ್ಟ ಅಭಿನವ ಭಗೀರತ..

Post a Comment