ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:49 AM

ಬಕಾಸನ

Posted by ekanasu

ಆರೋಗ್ಯ
ಬಕ ಎಂದರೆ ಕೊಕ್ಕರೆ. ಈ ಆಸನವು ಕೊಕ್ಕರೆಯ ರೂಪವನ್ನು ಹೋಲುವುದರಿಂದ ಈ ಆಸನಕ್ಕೆ ಬಕಾಸನ ಎಂದು ಹೆಸರು. ಈ ಆಸನವು ಕ್ಲಿಷ್ಟಕರ ಆಸನವಾಗಿದೆ. ಆರಂಬದಲ್ಲಿ ಗುರುಮುಖೇನ ಈ ಆಸನ ಅಭ್ಯಾಸ ಮಾಡಬೇಕು.

ಅಭ್ಯಾಸ ಕ್ರಮ

ಮೊದಲು ಕಾಲಿನ ಪಾದಗಳನ್ನು ಜೋಡಿಸಿ ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಅಂಗಾಲು ಹಿಮ್ಮಡಿಗಳನ್ನು ನೆಲದ ಮೇಲೆ ಗಟ್ಟಿಯಾಗಿ ಊರಬೇಕು. ಅನಂತರ ಮೊಣಕಾಲುಗಳನ್ನು ಅಗಲಿಸಿ ತಲೆಯನ್ನು ಮುಂದೆ ತರಬೇಕು. ಆ ಮೇಲೆ ಉಸಿರು ಹೊರಕ್ಕೆ ಬಿಟ್ಟು ಕಾಲುಗಳನ್ನು ತೋಳುಗಳಿಂದ ಬಳಸಿ, ಕೈಗಳನ್ನು ನೆಲದ ಮೇಲೆ ಇಟ್ಟು ಮೊಣ ಕೈಗಳನ್ನು ಬಗ್ಗಿಸಿ ಹಿಮ್ಮಡಿಗಳನ್ನು ನೆಲದಿಂದ ಮೇಲೆ ಎತ್ತಬೇಕು.ಮೊಣಕಾಲುಗಳು ಕಂಕುಳದ ಹತ್ತಿರ ಒರಗಿಸಿಡಬೇಕು. ಕಾಲು ಬೆರಳುಗಳು ನೆಲದಿಂದ ಮೇಲೆತ್ತಬೇಕು. ಇಡೀ ದೇಹವನ್ನು ಕೈಗಳ ಮೇಲೆ ಸಮತೋಲದಲ್ಲಿರಿಸಬೇಕು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷ ಇರಬೇಕು. ಅನಂತರ ನೆಲದ ಮೇಲೆ ವಿಶ್ರಾಂತಿ ಪಡೆಯಬೇಕು.

ಉಪಯೋಗಗಳು

ಈ ಆಸನದಿಂದ ತೋಳುಗಳು ಬಲಯುತವಾಗುವುವು. ಕಿಬ್ಬೊಟ್ಟೆಯ ಮಾಂಸ ಖಂಡಗಳು ಚೆನ್ನಾಗಿ ಬಲಿಷ್ಟವಾಗುತ್ತವೆ. ಕರುಗಳುಗಳು ಶಕ್ತಿಯನ್ನು ಪಡೆಯುತ್ತವೆ. ಸಮತೋಲನ ಸ್ಥಿತಿಯನ್ನು ಕಾಪಾಡಲು ಸಹಕಾರಿಯಾಗುತ್ತದೆ.

'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment