ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:51 PM

ಮುನಿದ ಕಡಲು

Posted by ekanasu

ರಾಜ್ಯ - ರಾಷ್ಟ್ರ
ಜಪಾನ್ ನಲ್ಲಿ ಕಡಲು ಮುನಿಸಿಕೊಂಡಿದೆ. ಭೀಕರ ತ್ಸುನಾಮಿ ಜಪಾನ್ ನ ಹಲವು ಭಾಗಗಳನ್ನು ನುಂಗಿಹಾಕಿದೆ. ಇದರ ಬೆನ್ನಲ್ಲೇ ಕರಾವಳಿಯಾದ್ಯಂತ ಹೈ ಎಲರ್ಟ್ ಘೋಷಣೆಯಾಗಿದೆ. ಕರಾವಳಿ ಕರ್ನಾಟಕದಲ್ಲೂ ಕಡಲು ಮುನಿಸಿಕೊಂಡಿದೆ. ಮಂಗಳೂರು ಸೇರಿದಂತೆ ಮಲ್ಪೆ ಕಡಲ ಕಿನಾರೆಗಳಲ್ಲಿ ಕಡಲಬ್ಬರ ಅಧಿಕಗೊಂಡಿದೆ. ಅಲೆಗಳು ತಮ್ಮ ಆರ್ಭಟ ಪ್ರದರ್ಶಿಸುತ್ತಿದೆ. ಮಾಮೂಲಿಗಿಂತ ಕಡಲ ನೋಟ ಭಿನ್ನವಾಗಿದೆ. ಗಾಳಿ ಒತ್ತಡ ಕರಾವಳಿಯ ಕಡಲಭಾಗದಲ್ಲಿ ಅಧಿಕವಾಗುತ್ತಿದೆ. ಮೀನುಗಾರರು ಮೀನುಗಾರಿಕೆಯನ್ನು ಅರ್ಧಕ್ಕೆಮೊಟಕುಗೊಳಿಸಿ ತೀರಕ್ಕಾಮಿಸಿದ್ದಾರೆ.ಒಟ್ಟಾರೆಯಾಗಿ ಏನೋ ಒಂದು ಬದಲಾವಣೆ ಕಾಣತೊಡಗಿದೆ.

0 comments:

Post a Comment