ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:26 PM

ಬರುವಿರೇನು...

Posted by ekanasu

ಸಾಹಿತ್ಯ

ಬರುವಿರೇನು ಈ ಭಾವದೂರಿಗೆ
ದೂರದೂರಿಗೆ,
ಚಂದ - ತಾರೆ; ಮೇಘಗಳು
ಬಯಸಿ ಕರೆಯುವ ತಾಣಕೆ
ಮೋಡದಂಚಲಿ ವಯಸ
ಮರೆತು ಜಗವ ತೊರೆದು


ನಲಿ - ಕುಣಿದಾಡುವುದಕೆ
ಸುಳ್ಳು ಮೋಸ ನೋವು ಮರೆತು
ಕಾಣಲಾರದ ಜಾಗಕೆ
ಸತ್ಯ ಪ್ರೀತಿ ಪ್ರೇಮ ಕರುಣೆ ಸ್ಮರಣೆ
ಬೆಲೆ ಇರುವ ವಿಶ್ವಕೆ
ಬೆಲೆ ಕಟ್ಟಲಾರದ ಜಾಗಕೆ...

- ಸೌಮ್ಯ ಸಾಗರ

0 comments:

Post a Comment