ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ : ಕೈಗೆ ಬಂದ ತುತ್ತು ಬಾಯಿಗಿಲ್ಲಾ! ಸರಕಾರ ಕೊಟ್ಟರೂ ಹಿರಿಯ ನಾಗರಿಕರಿಗೆ ಸೌಲಭ್ಯ ಮಾತ್ರ ಕೈಗೆಟುಕದ ಹುಳಿದ್ರಾಕ್ಷಿ. ಅದೇನೋ ಹೇಳ್ತಾರಲ್ಲಾ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಸ್ಥತಿ ಹಿರಿಯ ನಾಗರಿಕರ ಪಾಲಿಗೆ.
ಮೈಸೂರಿನಲ್ಲಿ ನಡೆದ ರಾಜ್ಯ ನಿವೃತ್ತ ನೌಕರರ ಸಂಘ ಮಾಹಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ನಾಗರಿಕರ ಕೆಲ ಬೇಡಿಕೆ ಪೂರೈಸುವ ವಾಗ್ದಾನ ಮಾಡಿದ್ದರು. ಅದರ ಫಲವಾಗಿ ರಾಜ್ಯ ಸರಕಾರ ಹಿರಿಯ ನಿವೃತ್ತ ಸರಕಾರಿ ನೌಕರರಿಗೆ ನಿವೃತ್ತ ವೇತನ ಏರಿಸಿತ್ತು.

ರಾಜ್ಯ ಸರಕಾರ ಆದೇಶ ಹೊರಡಿಸಿ ತಿಂಗಳುಗಳು ಉರುಳುತ್ತಿದ್ದರೂ, ಸಂಬಂಧಪಟ್ಟ ಬ್ಯಾಂಕ್ ಮಾತ್ರ ಹಿರಿಯ ನೌಕರರ ಎಕೌಂಟ್ಗೆ ಇನ್ನೂ ಹಣ ಜಮಾ ಮಾಡಲು ಮೀನಾಮೇಶ ಎಣಿಸುತ್ತಿರೂದು ನಿವೃತ್ತ ನೌಕರರ ಪಾಲಿಗೆ ಬಗಲು ಹುಣ್ಣಾಗಿ ಕಾಡುತ್ತಿದೆ. ಹತ್ತು ಹಲವು ಬಾರಿ ನೌಕರರು ಬ್ಯಾಂಕ್ ಅಧಿಕಾರಿಗಳನ್ನು ಹಣ ಜಮಾ ಮಾಡುವಂತೆ ಬೇಡಿಕೊಂಡರೂ ಅದು ಗೋರ್ಕಲ್ಲ ಮೇಲೆ ಮಳೆ ಬಿದ್ದಂತೆ ಸರ್ವಜ್ಞ ಎಂಬ ಹಾಗಾಗಿದೆ ಎಂಬುದು ನಿವೃತ್ತ ನೌಕರರ ಸಂಘ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ಆರೋಪ.


ನಿವೃತ್ತ ವೇತನ ಹಕೀಕತ್ ಏನು : 1993ನೇ ಜುಲೈ 1ಕ್ಕಿಂತ ಮುಂಚೆ ನಿವೃತ್ತರಾದವರು ಮತ್ತು ಸೇವೆಯಲ್ಲಿರುವಾಗಲೇ ನಿಧನರಾದ ಕುಂಟುಂಬ ನಿವೃತ್ತ ವೇತನ ಪಡೆಯೋರು ಹೆಚ್ಚಿನ ನಿವೃತ್ತಿ ವೇತನ ಪಡೆಯಲು ಅರ್ಹರು. ನಿವೃತ್ತರಾಗಿ 80,85,90 ವರ್ಷ ಪುರ್ಣಗೊಳಿಸಿದ ಹಿರಿಯರು ಈ ಸಲಭ್ಯ ಪಡೆಯಲು ಅಡ್ಡಿಯಿಲ್ಲ.
ನಿವೃತ್ತಿ ವೇತನ ಮತ್ತು ತುಟ್ಟಿಭತ್ಯೆ ಸೌಲಭ್ಯ ನೀಡುವ ಕುರಿತು ಸರಕಾರ ಆದೇಶ ಹೊರಡಿಸಿ ಅಜಮಾಸು ಆರು ತಿಂಗಳಿಗಿಂತಲೂ ಹೆಚ್ಚಿನ ಸಮಯವಾಗಿದೆ. ಅಂದಿನಿಂದ ಇಂದಿನವರೆಗೆ ನಿವೃತ್ತ ವೇತನವಾಗಲೀ ತುಟ್ಟಿಭತ್ಯೆಯಾಗಲೀ ನಿವೃತ್ತ ನೌಕರರ ಬ್ಯಾಂಕ್ ಎಕೌಂಟಿಗೆ ಜಮೆಯಾಗದಿರುವುದು ಅಚ್ಚರಿ ಸಂಗತಿ. ಸರಕಾರವೇನೋ ಹಿರಿಯ ನಾಗರಿಕರ ನೆರವಿಗೆ ಧಾವಿಸಿದೆ. ಆದರೆ ಬ್ಯಾಂಕ್ ಮಾತ್ರ ಅಸಹಕಾರ ತೋರುತ್ತಿದೆ ಎಂದು ಹಿರಿಯ ನೌಕರರು ಅವಲತ್ತು ಕೊಳ್ಳುತ್ತಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಪಷ್ಟೀಕರಣ : ನಿವೃತ್ತ ಹಿರಿಯ ನೌಕರರ ವೇತನ ಮತ್ತು ತುಟ್ಟಿ ಭತ್ಯೆ ಏರಿಕೆ ಹೊರಡಿಸಿದ ನಂತರ ಫಲಾನುಭವಿ ನೌಕರರು ಬ್ಯಾಂಕ್ಗೆ ಎಡತಾಕಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಒಂದೆಲ್ಲಾ ಒಂದು ಕಾರಣ ಹೇಳಿ ಹಿರಿಯ ನಾಗರಿಕರನ್ನು ಬ್ಯಾಂಕ್ನಿಂದ ಹೊರಕ್ಕೆ ಸಾಗಹಾಕಿದ್ದಾರೆ. ಛಲಬಿಡದ ತ್ರಿವಿಕ್ರಮನಂತೆ ನಿವೃತ್ತ ನೌಕರರು ಪುನಃ, ಪುನಃ ಬ್ಯಾಂಕ್ ಮೆಟ್ಟಿಲು ಹತ್ತಿದ್ದಾರೆ. ಆದರೂ ಪ್ರಯೋಜನಕ್ಕೆ ಬರಲಿಲ್ಲ. ಇದರಿಂದ ಬೇಸತ್ತ ನಿವೃತ್ತ ನೌಕರರು ರಾಜ್ಯ ಆರ್ಥಿಕ ಇಲಾಖೆಗೆ ಎಡತಾಕಿದ್ದರು.

ಹಿರಿಯ ನಿವೃತ್ತ ನೌಕರರ ಮನವಿಗೆ ಸಂಧಿಸಿದ ರಾಜ್ಯ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಕೇಳಿದ ವಿವರಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು. ಇಲಾಖೆ ನಿವೃತ್ತ ವೇತನ ಕಾರ್ಯಗತ ಮಾಡುವ ಬಗ್ಗೆ ಬ್ಯಾಂಕ್ಗೆ ಸ್ಪಷ್ಟ ಮಾರ್ಗಸೂಚಿ ಬಗ್ಗೆ ತಿಳಿಸಿದ್ದರು. ನಿವೃತ್ತ ನೌಕರರು ಇನ್ನೇನು ಹಣ ಬ್ಯಾಂಕ್ಗೆ ಬಂದು ಬೀಳುತ್ತದೆ ಎಂದು ಹಿರಿಹಿರಿ ಹಿಗ್ಗೆ ನಿವೃತ್ತ ನೌಕರರ ವೇತನ ಹೆಚ್ಚಳಕ್ಕೆ ಮಾಧ್ಯಗಳಲ್ಲಿ ಕೃತಜ್ಞತೆ ಸಲ್ಲಿಸಿ, ಕೃತಾರ್ಥರಾದರು. ಹೆಚ್ಚುವರಿ ಹಣ ಮಾತ್ರ ಜಮೆಯಾಗಲೇ ಇಲ್ಲ. ಇದೆಲ್ಲದರಿಂದ ಬೇಸತ್ತು ನಿವೃತ್ತ ಹಿರಿಯ ನೌಕರರು ಲೋಕಪಾಲರಿಗೆ ದೂರು ನೀಡಿದರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಇಷ್ಟೆಲ್ಲಾ ಆದರೂ ಬ್ಯಾಂಕ್ ಇದೂವರಗೆ ಹಣವನ್ನೂ ಜಮೆ ಮಾಡಿಲ್ಲ ಕಾರಣವನ್ನೂ ನಿವೃತ್ತ ನೌಕರರಿಗೆ ತಿಳಿಸಿಲ್ಲ.

ಹಿರಿಯ ನಾಗರಿಕರಿಗೆ ಸಿಕ್ಕಿ ಉತ್ತರವೇನು : ನಿವೃತ್ತ ವೇತನ, ಕುಟುಂಬ ನಿವೃತ್ತ ಫಲಾನುಭವಿಗಳು ಬ್ಯಾಂಕ್ಗೆ ಹೋಗಿ ನಮ್ಮದು ಕತೆ ಯಂತೂ ಅಂತ ವಿಚಾರಿಸಿದ್ದಾರೆ. ಬ್ಯಾಂಕ್ಗೆ ಹೋಗಲಾಗದವರು ಅವರ ಸಂಬಂಧಿಕರನ್ನು ಬ್ಯಾಂಕ್ಗೆ ಅಟ್ಟಿ ವಿಷಯ ಏನೂ ಅಂತ ವಿಚಾರಿಸಿದ್ದಾರೆ. ಇದೂವರಗೆ ಪ್ರಾಬ್ಲಂ ಏನೂ ಅಂತ ನಿವೃತ್ತ ನೌಕರರಿಗೆಗೊತ್ತೇ ಆಗಿಲ್ಲ!
ಫಲಾನುಭವಿ ನಿವೃತ್ತ ನೌಕರರು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದರೆ ನಿವೃತ್ತ ವೇತನ ಪಾವತಿ ಆದೇಶ ಪುಸ್ತಕ ಖಜಾನೆಯಲ್ಲಿದೆ. ಹೀಗೆ ಹೋಗಿ, ಹಾಗೆ ತೆಗೆದುಕೊಂಡು ಬನ್ನಿ ಅಂತ ನಿವೃತ್ತರಿಗೆ ಬೋಧಿಸಿದ್ದಾರೆ.

ಇನ್ನು ಎಂಥಾ ಮಾಡೋದು ಅಂತ ಖಜಾನೆ ಮೆಟ್ಟಿಲೇರಿ ಅದೇಶ ಪುಸ್ತತ ಕೊಡಿ ಮಾರಾಯ್ರೆ ಅಂತ ಖಜಾನೆ ಅಧಿಕಾರಿಗಳನ್ನು ಕೇಳಿದರೆ, ನಿಮಗೆಗೊತ್ತಿಲ್ವಾ? ಬ್ಯಾಂಕ್ನವರು ಬಂದು ನಿವೃತ್ತ ವೇತನಕ್ಕೆ ಸಂಬಂಧಿಸಿದ ಪುಸ್ತಕ ತಗೆದುಕೊಂಡು ಹೋಗಿಯಾಗಿದೆ ಅಂತ ಉತ್ತರಿಸುತ್ತಾರೆ. ನಿವೃತ್ತ ನೌಕರರಿಗೆ ಬ್ಯಾಂಕ್ನವರು ಹೇಳೋದು ಸತ್ಯವಾ? ಇಲ್ಲಾ ಖಜಾನೆ ಅಧಿಕಾರಿಗಳು ಹೇಳೋದು ನಿಜವಾ? ಸತ್ಯಯಾವುದು, ಸುಳ್ಳಾವುದು ತಿಳಿಯದೆ ಕಂಗಾಲು.
ತಿರುಗಿ ಬೀಳುತ್ತೇವೆ :ಬ್ಯಾಂಕ್ ಮತ್ತು ಮನೆ ಹಾಗೂ ಖಜಾನೆ ಅಲೆದು ಅಲೆದು ಸುಸ್ತೆದ್ದ ನಿವೃತ್ತರು ಸಿಟ್ಟುಗೊಂಡಿದ್ದಾರೆ. ತಿರುಗಿಬೀಳುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುತ್ತದೆ.
ಸರಕಾರ ಹೊರಡಿಸಿದ ಅದೇಶದ ಪ್ರಕಾರ ಫಲನುಭವಿ ನಿವೃತ್ತರಿಗೆ ಬ್ಯಾಂಕ್ ಸೌಲಭ್ಯ ನೀಡಲಿ. ಬ್ಯಾಂಕ್ ವಿಳಂಭ ಮಾಡಿದರೆ ಸೌಲಭ್ಯ ಪಡೆದವರು ಬ್ಯಾಂಕ್ ಶಾಖೆಯ ಹೆಸರು, ಖಾತೆ ವಿವರ ನಮೂದಿಸಿ ಕರ್ನಾಟಕ ಬ್ಯಾಂಕ್ಗಳ ಲೋಕಪಾಲಕರಿಗೆ (ಓಂಬಡ್ಸ್ಮ್ಯಾನ್) ದೂರು ನೀಡುವುದಾಗಿ ಆವಾಜ್ ಹಾಕಿದ್ದಾರೆ. ನಿವೃತ್ತ ನೌಕರರ ಸಭೆಯಲ್ಲೂ ಇಂಥಹ ತೀರ್ಮಾನಕ್ಕೆ ಬರಲಾಗಿದ್ದು, ಸದಸ್ಯರಿಗೆ ಲೋಕಪಾಲಕರಿಗೆ ದೂರು ನೀಡುವಂತೆ ತಿಳಿಸಲಾಗಿದೆ. ಪಾಪ ಹಿರಿಯ ನಾಗರಿಕರು ಸಿಕ್ಕ ಸೌಲಭ್ಯ ಪಡೆಯಲು ಇಷ್ಟೆಲ್ಲಾ ಹೋರಾಟ ಮಾಡಬೇಕಾ. ಹಿರಿಯ ನಿವೃತ್ತ ನೌಕರರನ್ನು ಕಂಡರೆ ಅಯ್ಯೊ ಪಾಪ ಎನಿಸುತ್ತದೆ.

-ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment