ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಮಾರ್ಚ್ ತಿಂಗಳಲ್ಲಿ ವಿಶ್ವದಲ್ಲೊಂದು ಗಂಢಾಂತರ ಉಂಟಾಗಲಿದೆ. ಇದು ವಿಶ್ವದ ಅಂತ್ಯಕ್ಕೆ ಮುನ್ಸೂಚನೆಯೇ? ಅಥವಾ 2012ರ ಪ್ರಳಯಕ್ಕೆ ನಾಂದಿಯೇ...? ಇದು ಇಂದು ನಿನ್ನೆಯ ಮಾತಲ್ಲ... ಅನೇಕ ವರುಷಗಳ ಹಿಂದೆಯೇ ಈ ವಿಚಾರ ಜಾಹೀರುಗೊಂಡಿತ್ತು. ವಿಜ್ಞಾನಿಗಳಿಗೂ ಇದು ಗಮನಕ್ಕೆ ಬಂದಿತ್ತು. ಆದರೆ ಅಸಡ್ಡೆಯೇ...ಅಥವಾ ಪ್ರಕೃತಿಯ ಇಚ್ಛೆಯೆದುರು ಕುಬ್ಜಮಾನವ ಪ್ರಭಾವ ನಡೆಯಲಾರದೆಂಬ ಸತ್ಯದ ಹಿನ್ನಲೆಯೋ...ಗೊತ್ತಿಲ್ಲ...ಆದರೆ ಆ ದಾಖಲೆಗಳೆಲ್ಲವೂ ಇಂದು ಒಂದೊಂದು ಸತ್ಯಗಳನ್ನು ಬಿಚ್ಚಿಡುತ್ತಿದೆ. ಅಂದು ದಾಖಲಾಗಿದ್ದ ಮಾಹಿತಿಗಳು ಇಂದಿನ ಘಟನೆಗಳನ್ನು ತಿಳಿಹೇಳುತ್ತಿವೆ! ಏನೊಂದು ಅಚ್ಚರಿ...ಹೌದು ವಿಚಿತ್ರವಾದರೂ ಸತ್ಯವೇ ಹೌದು...


ಏನದು ಆ ಸತ್ಯ! ಎಲ್ಲಿಯ ಸತ್ಯ...ಎಲ್ಲಿಯ ದಾಖಲೆ...ಎಷ್ಟೋ ವರುಷಗಳ ಹಿಂದೆಯೇ ಈ ದಿನದ ಭವಿಷ್ಯ ಬರೆದಾಗಿತ್ತೇ...? ಎಲ್ಲವೂ ಹೌದು...


ನ್ಯಾಸ್ಟ್ರೋಡಾಮಸ್ ಈ ಬಗ್ಗೆ ಅಂದೇ ದಾಖಲಿಸಿದ್ದ...ಹೌದು ವಿಶ್ವಕ್ಕೆ ಗಂಢಾಂತರ ಕಾದಿದೆ ಎಂಬ ಭವಿಷ್ಯವನ್ನು ನ್ಯಾಸ್ಟ್ರೋಡಾಮಸ್ ಹೇಳಿದ್ದ. ಅದೆಲ್ಲವೂ ಇಂದು ಹೌದು ಎಂಬಂತಾಗುತ್ತಿದೆ. ಪ್ರತಿಯೊಂದು ವಿಚಾರಗಳೂ ಆತನ ದಾಖಲೆಗೂ ಇಂದಿನ ವಾಸ್ತವ ಸ್ಥಿತಿಗೂ ತಾಳೆಯಾಗುತ್ತಿದೆ. ಅದೇ ನೋಡಿ ವಿಚಿತ್ರ.ಹಿಂದಿನವರ ಚಿಂತನೆಗೆ ಇದೊಂದು ಕೈಗನ್ನಡಿ ಎಂದರೆ ತಪ್ಪಾಗಲಾರದು.
ನ್ಯಾಸ್ಟ್ರೋಡಾಮಸ್ ಹೇಳಿಂದಂತಹ ಘಟನಾವಳಿಗಳು ಇಂದು ಒಂದೊಂದಾಗಿ ಸಂಭವಿಸುತ್ತಿದೆ. ಆತ ಹೇಳಿದಂತೆ 2011ರ ಮಾರ್ಚ್ ತಿಂಗಳಲ್ಲಿ ಜಪಾನ್ ದೇಶದಲ್ಲಾಗುವ ದುರಂತದ ಭವಿಷ್ಯ ಸತ್ಯವಾಗಿದೆ. ಜಪಾನ್ ದುರಂತ ಅದೊಂದು ಊಹಿಸಲಾರದ ದುರಂತವೆಂಬಂತಹ ಮಾತುಗಳು ನ್ಯಾಸ್ಟ್ರೋಡಾಮಸ್ ದಾಖಲೆಗಳತ್ತ ಹೆಚ್ಚು ಗಮನಹರಿಸಲು ಮಹತ್ವ ಪಡೆಯಲು ಸಾಧ್ಯವಾಗುವಂತಾಗಿದೆ.
2011ರ ಮಾರ್ಚ್ ತಿಂಗಳಲ್ಲಿ ಭೀಕರ ಪ್ರಾಕೃತಿಕ ವಿಕೋಪ ಸಂಭವಿಸುತ್ತದೆಂಬ ನ್ಯಾಸ್ಟ್ರೋಡಾಮಸ್ ಅವರ ಮಾತು ಸ್ಪಷ್ಟವಾಗಿದೆ. ಅದು ಸತ್ಯವಾಗಿದೆ. ಆಗಸ್ಟ್ ನಲ್ಲಿ ಜಗತ್ತಿನ ಮತ್ತೆರಡು ಭಾಗಗಳಲ್ಲಿ ಭೀಕರ ದುರಂತ ಸಂಭವಿಸಲಿದೆ ಎಂದು ಆತ ಹೇಳಿದ್ದಾನೆ. ಆಗ್ನೇಯ ಏಷ್ಯಾ, ಚಿಲಿ ಯಲ್ಲಿ ಭೀಕರ ಭೂಕಂಪ ಆತಂಕಗಳು ಉಂಟಾಗಲಿವೆ ಎಂಬ ಅಂಶವನ್ನು ಆತ ಬಹಿರಂಗ ಪಡಿಸಿದ್ದಾನೆ. ಕೊಲ್ಲಿ ರಾಷ್ಟ್ರಗಳು ತೀವ್ರ ಕ್ಷೋಬೆಯಿಂದ ತತ್ತರಿಸಲಿದೆ ಎಂಬ ನ್ಯಾಸ್ಟ್ರೋಡಾಮಸ್ ಮಾತು ಇಂದು ಸತ್ಯವಾಗಿದೆ. ಒಟ್ಟಿನಲ್ಲಿ ಮನುಕುಲದ ಅಂತ್ಯ ಉಂಟಾಗಲಿದೆಯೇ...? ಜಗತ್ಪ್ರಳಯ ನಿಜವೇ ಎಂಬ ಆತಂಕ ಇಂದು ಮನೆಮಾಡಿದೆ...ಜನತೆ ತೀವ್ರ ಭೀತಿಯನ್ನೆದುರಿಸುತ್ತಿದ್ದಾರೆ...ಜಪಾನ್ ಭೂಕಂಪ, ಸುನಾಮಿಗಳು ಸೂಪರ್ ಮೂನ್ ಘಟನೆಗಳ ಪ್ರಭಾವ ಎಂಬ ಮಾತು ದಟ್ಟವಾಗಿದೆ. ಈ ಸೂಪರ್ ಮೂನ್ ಘಟನೆ ನಿಜಕ್ಕೂ ವಿಶ್ವದ ಅಂತ್ಯಕ್ಕೊಂದು ನಾಂದಿ ಹಾಡುತ್ತಿದೆಯೇ...?ಎಂಬ ಗುಮಾನಿಯನ್ನೂ ಹುಟ್ಟಿಸಿದೆ. ಜಪಾನ್ ಘಟನೆಯ ನಂತರ ಸೂಪರ್ ಮೂನ್ ವಿಚಾರ ಸೂಪರ್ ಹಿಟ್ ಆಗುತ್ತಿದೆ.ಮಾಧ್ಯಮಗಳು, ವಿಜ್ಞಾನಿಗಳು, ಸಂಶೋಧಕರು ಸೂಪರ್ ಮೂನ್ ಘಟನೆಯ ಕುರಿತಾದ ವಿಶೇಷ ಅಧ್ಯಯನಗಳನ್ನು ಕೈಗೊಳ್ಳುತ್ತಿದ್ದಾರೆ.

ಇದೇ 19ರಂದು ತೀವ್ರ ನೈಸರ್ಗಿಕ ವಿಕೋಪಗಳು ಉಂಟಾಗುವ ಬಗ್ಗೆ ಊಹಾಪೋಹಗಳಿವೆ. ಅದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕಾದುನೋಡಬೇಕಾಗಿದೆ. 19ರಂದು ಚಂದ್ರ ಭೂಮಿಗೆ ಅತ್ಯಂತ ಸಮೀಪವಾಗಲಿದ್ದಾನೆ . ಇದರಿಂದಾಗಿ ಭೂಮಿಯಲ್ಲಿ ತೀವ್ರ ವಿಕೋಪಗಳು ಕಂಡುಬರಲಿವೆ ಎಂಬ ಬಗ್ಗೆ ಅನೇಕ ಸಂಶೋಧಕರು, ವಿಜ್ಞಾನಿಗಳು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. 1955, 1974,1992 ಇತ್ತೀಚೆಗೆ ಅಂದರೆ 2005ರಲ್ಲಿ ಇದೇ ರೀತಿ ಚಂದ್ರ ಭೂಮಿಗೆ ಸಮೀಪವಾಗಿದ್ದ.ಆದರೆ ಹೇಳುವಂತಹ ರೀತಿಯ ವಿಕೋಪಗಳು ಈ ಸಂದರ್ಭದಲ್ಲಿ ಉಂಟಾಗಿರಲಿಲ್ಲ.ಆದರೆ ಇತ್ತೀಚಿನ ಘಟನೆಗಳು , ಈ ಊಹಾಪೋಹಗಳನ್ನು ತಾಳೆಹಾಕುವಾಗ ಇವೆಲ್ಲವೂ ಸೂಪರ್ ಮೂನ್ ಪ್ರಭಾವವೇ ಎಂಬ ದಟ್ಟ ಗುಮಾನಿ ಉಂಟಾಗುತ್ತಿದೆ.

- ನಾಡೋಡಿ.

0 comments:

Post a Comment