ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಮೂಡಬಿದಿರೆ: ಸ್ವಿಝರ್ಲ್ಯಾಂಡ್ ಬೆಡಗಿ ಭಾರತೀಯ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾಳೆ. ಹೌದು. ರಾಜೀವಗಾಂಧಿ ಆರೋಗ್ಯ ವಿ.ವಿ.ಆಶ್ರಯದಲ್ಲಿರುವ ಮೂಡಬಿದಿರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸ್ವಿಝರ್ ಲ್ಯಾಂಡ್ನ ಕ್ಯಾರೋಲ್ ಝಿನ್ಸೆಲ್ ಎಂಬಾಕೆ ನಾಲ್ಕೂವರೆ ವರುಷಗಳ ಅವಧಿಯ ಆಯುರ್ವೇದ ವೈದ್ಯಕೀಯ ಶಿಕ್ಷಣ (ಬಿ.ಎ.ಎಂ.ಎಸ್.)ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣವಾಗುವ ಮೂಲಕ ಹೊಸತೊಂದು ದಾಖಲೆ ಸೃಷ್ಟಿಸಿದ್ದಾಳೆ.ರಾಜೀವಗಾಂಧಿ ವಿ.ವಿಯಲ್ಲಿ ಮೊತ್ತ ಮೊದಲ ಬಾರಿ ಸ್ವಿಝರ್ ಲ್ಯಾಂಡ್ನ ಯುವತಿಯೋರ್ವಳು ಶಿಕ್ಷಣ ಪಡೆದ ಹೆಗ್ಗಳಿಕೆ ಇದಾಗಿದೆ. ಈ ಹೆಗ್ಗಳಿಕೆಗೆ ಮೂಡಬಿದಿರೆ ಆಳ್ವಾಸ್ ಕಾಲೇಜು ಪಾತ್ರವಾಗಿದೆ.
ಸೆ.28 , 2006ರಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಬಿ.ಎ.ಎಂ.ಎಸ್ ಪದವಿಗಾಗಿ ಕ್ಯಾರೋಲ್ ಸೇರ್ಪಡೆಗೊಂಡಿದ್ದಳು. ಇದೀಗ ನಾಲ್ಕೂವರೆ ವರುಷಗಳ ಬಿ.ಎ.ಎಂ.ಎಸ್ ಪದವಿಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು ಈಕೆಯ ಹೆಗ್ಗಳಿಕೆ. ಶಿಕ್ಷಣದ ಮೇಲಿನ ಈಕೆಯ ಮಮತೆ ಇದನ್ನು ತೋರುಸುತ್ತಿದೆ.

ವಿರಾಸತ್ ಪ್ರೇರಣೆ
ಕ್ಯಾರೋಲ್ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಆಯ್ಕೆಮಾಡಲು ಪ್ರಮುಖ ಕಾರಣ ಆಕೆಯ ತಾಯಿ ಹಾಗೂ ಅವರ ಸಂಬಂಧಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಾಯೋಜಿಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ನ ಸೊಬಗನ್ನು ಕಣ್ಣುತುಂಬಿಸಿಕೊಂಡ ಕ್ಯಾರೋಲ್ನ ಸಂಬಂಧಿ, ವೈದ್ಯರೋರ್ವರು ಈ ಶಿಕ್ಷಣ ಸಂಸ್ಥೆಯ ಬಗ್ಗೆ ಕ್ಯಾರೋಲ್ ಅವರ ತಾಯಿ ಅವರಲ್ಲಿ ವಿಷಯ ಪ್ರಸ್ತಾವಿಸಿದರು. ಈ ಮೊದಲೇ ಆಯುವರ್ೇದದ ಬಗೆಗಿನ ಆಸಕ್ತಿ ಕ್ಯಾರೋಲ್ ನಲ್ಲಿರುವುದನ್ನು ಅರಿತ ತಾಯಿ ಆಕೆಯನ್ನು ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗಕ್ಕಾಗಿ ಕಳುಹಿಸಿದರು.
ಆಳ್ವಾಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿರುವ ಶೋಭಾವನ, ಆಳ್ವಾಸ್ ಫಾರ್ಮಸಿ, ಅತ್ಯಂತ ಸಾಂಪ್ರದಾಯಿಕ ರೀತಿಯ ಔಷಧಿ ತಯಾರಿಕಾ ಘಟಕ, ಶಿಕ್ಷಣದ ಗುಣಮಟ್ಟ, ಶಿಸ್ತುಬದ್ಧ ನಡತೆಗಳು ಕ್ಯಾರೋಲ್ ಅವರ ಕುಟುಂಬಿಕರನ್ನು ಆಳ್ವಾಸ್ ಸಂಸ್ಥೆಯತ್ತ ಆಕರ್ಷಿಸುವಂತೆ ಮಾಡಿತು. ಅದರ ಫಲವೇ ಕ್ಯಾರೋಲ್ ನಾಲ್ಕೂವರೆ ವರುಷದ ಶಿಕ್ಷಣವನ್ನು ಒಂದು ತಪಸ್ಸು ಎಂಬಂತೆ ಪೂರೈಸಿದ್ದಾಳೆ.

" ಭಾರತ ದೇಶದ ಸಂಪ್ರದಾಯ, ದೇಶೀಯತೆ, ಭಾಷಾ ವೈವಿಧ್ಯತೆ, ಉಡುಗೆ ತೊಡುಗೆ, ಸಂಸ್ಕೃತಿಯ ಬಗೆಗೆ ನನಗೆ ಅಪಾರವಾದ ಅಭಿಮಾನವಿದೆ. ಇಲ್ಲಿನ ಶಿಕ್ಷಣದ ಗುಣಮಟ್ಟವೂ ಅತ್ಯಂತ ಉತ್ಕೃಷ್ಠವಾದುದು. ಈ ಕಾರಣಕ್ಕೆ ನಾನು ಭಾರತವನ್ನು ಶಿಕ್ಷಣಕ್ಕಾಗಿ ಆಯ್ಕೆಗೊಳಿಸಿದೆ. ಅದರಲ್ಲೂ ಮೂಡಬಿದಿರೆಯೆಂಬ ಒಂದು ಪುಟ್ಟ ಪ್ರದೇಶ ಅದ್ಭುತವಾದ ಗುಣಲಕ್ಷಣವನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ಕ್ರಿಯೆಗಳು ಸಹ ವಿಶೇಷವಾದುದು. ಇಲ್ಲಿ ಶಿಕ್ಷಣ ಪಡೆಯುವ ಭಾಗ್ಯ ನನಗೆ ದೊರಕಿದ್ದು ನನ್ನ ಪುಣ್ಯ " ಈ ಅಂತರಾಳದ ಮಾತುಗಳನ್ನು ಕ್ಯಾರೋಲ್ ಹೇಳುತ್ತಿದ್ದಾರೆ.
ಆಯುರ್ವೇದದ ಇತಿಹಾಸ, ಸಂಸ್ಕೃತ ಭಾಷೆ ಇವೆಲ್ಲವುಗಳ ಅಧ್ಯಯನ ಆಕೆಗೆ ಯಾವುದೇ ತೊಡಕನ್ನುಂಟುಮಾಡಿಲ್ಲ. ಇತರ ವಿದ್ಯಾರ್ಥಿಗಳಂತೆಯೇ ಅತ್ಯಂತ ಲವಲವಿಕೆಯಿಂದಲೇ ಈ ಎಲ್ಲಾ ವಿಚಾರಗಳ ಸೂಕ್ಷ್ಮಾಧ್ಯಯನವನ್ನು ಅತ್ಯಂತ ಕಾಳಜಿಯಿಂದ , ಮುತುವರ್ಜಿಯಿಂದ ಕ್ಯಾರೋಲ್ ಪೂರೈಸಿದ್ದಾಳೆ.

ಈ ಭಾಗದ ಎಲ್ಲಾ ತೊಂದರೆಗಳ ಬಗ್ಗೆ ನನಗೇನೂ ಬೇಸರವಾಗಿಲ್ಲ. ನನಗೆ ಬೇಕೆಂದು ಇಲ್ಲಿನ ಹವಾಮಾನದ ಬದಲಾವಣೆಯೂ ಸಾಧ್ಯವಿಲ್ಲ. ಇವೆಲ್ಲವುಗಳನ್ನು ಒಪ್ಪಿ ನಾನು ಈ ದೇಶಕ್ಕೆ ಬಂದಿದ್ದೇನೆ. ಹೊಂದಿಕೊಂಡು ಹೋಗುವುದು ನನ್ನ ಕರ್ತವ್ಯ ಎಂಬ ಆಕೆಯ ನುಡಿಗಳು ಆಕೆಯ ಬದ್ಧತೆಗೆ ಒಂದು ನಿದರ್ಶನವಾಗಿತ್ತು.
ಕರ್ನಾಟಕದಲ್ಲೇ ಸ್ನಾತಕೋತ್ತರ ಪದವಿಯನ್ನು ಪಂಚಕರ್ಮ ಅಥವಾ ಕಾಯಚಿಕಿತ್ಸೆ ವಿಷಯದಲ್ಲಿ ಪಡೆಯಬೇಕೆಂಬುದು ಈ ಬೆಡಗಿಯ ಆಸೆಯಾಗಿದೆ.

ವಿಶೇಷ ವರದಿ: ಹರೀಶ್ ಕೆ.ಆದೂರು

5 comments:

Prof.M.S.Thimmappa said...

ಪರಿಚಯಿಸಿದ್ದು ಶ್ಲಾಘನೀಯ. ನಮ್ಮ ಪರಂಪರೆಯ ಹಿರಿಮೆಗೆ ಇಂತಹ ಸುದ್ದಿ ಮೆರಗು ತರುವಂತಹದು. ಅಭಿನಂದನೆಗಳು. ಧನ್ಯವಾದಗಳು.

BENAKA..ADKATHIMAR said...

ನಮಗೆಲ್ಲ ಹೆಮ್ಮೆ ತರುವ ವಿಶಯವನ್ನುತಿಳಿಸಿದ್ದೀರಿ ಧನ್ಯವಾದಗಳು...

sudhakarbyatroy said...

it is good to learn that our old ancient traditional medicininal system ayurveda being appreciated by the rest of the world............

˙·٠•●✿ಹೃದಯದಿಂದ ಸತೀಶ್✿●•٠·˙ said...

ಈ ವಿಚಾರ ತಿಳಿದು ಸಂತೋಷವಾಯಿತು.. ನಮ್ಮ ಕನ್ನಡನಾಡ ಸೊಗಡು ವಿಶ್ವದೆಲ್ಲೆಡೆ ಪಸರಿಸಲಿ........... ಸತೀಶ್ ಕನ್ನಡಿಗ... ಮಸ್ಕಟ್ ..

ಮೌನೇಶ ವಿಶ್ವಕರ್ಮ said...

idu navellarooo hemme paduva vichaaraa... santasada vicharavannu prasara madi santasa hachikondaddakkagi danyavada...

Post a Comment