ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಾರ್ಚ್ 24ರಂದು ಶಿಬಿರದ ಉದ್ಘಾಟನೆ

ವೇಣೂರು: ವಾರದ ಹಿಂದೆಯಷ್ಟೇ ರಾಜ್ಯ ಸರಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರ ಪಡೆದಂತಹ ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲೀಗ ನಿರಂತರ ಕಾರ್ಯಚಟುವಟಿಕೆ. ಹೊಸಂಗಡಿ ಗ್ರಾಮದ ಮೂರನೇ ವಾರ್ಡು, ಆಳ್ವಾಸ್ ಸಮಾಜಕಾರ್ಯ ಕಾಲೇಜು ಮೂಡಬಿದಿರೆ ಇಲ್ಲಿನ ಬಿ.ಎಸ್.ಡಬ್ಲ್ಯು ವೇದಿಕೆ , ಹೊಸಂಗಡಿ ಫ್ರೆಂಡ್ಸ್ ಕ್ಲಬ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ - ಬಡಕೋಡಿ., ಸ್ವಚ್ಛತಾ ಸಮಿತಿ 3ನೇ ವಾರ್ಡು ಇವುಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್ 24ರಿಂದ 26ರ ತನಕ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರ ನಡೆಯಲಿದೆ. ಮಾ.24ರಂದು ಬೆಳಗ್ಗೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ರಮೇಶ್ ಧ್ವಜಾರೋಹಣ ಗೈಯಲಿದ್ದಾರೆ. ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ.ಜೀವಂಧರ್ ಕುಮಾರ್ ಶಿಬಿರದ ಉದ್ಘಾಟನೆ ನಡೆಸಲಿದ್ದಾರೆ.ಆಳ್ವಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ , ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಕೆ.ಜಯಕುಮಾರ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕುಮಾರ್, ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ಭಟ್ ಸಂಪಿಗೆ ಭಾಗವಹಿಸುವರು. ಮಾ.25ರಂದು ಕೆ.ಚಂದ್ರಶೇಖರ್ ಭಟ್ ಧ್ವಜಾರೋಹಣ ಗೈಯಲಿದ್ದಾರೆ. ತದನಂತರ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಮಣ್ಣಿನ ಮಾದರಿ ಸಂಗ್ರಹ ನಡೆಯಲಿದೆ. ಅಪರಾಹ್ನ ವೇಣೂರು ಪ್ರಾಥಮಿಕ ಆರೋಗ್ಯಕೇಂದ್ರದ ಸಹಯೋಗದೊಂದಿಗೆ ಉಚಿತ ರಕ್ತಪರೀಕ್ಷೆ ನಡೆಯಲಿದೆ. ಸಂಜೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಮಾ.26ರಂದು ಬೆಳಗ್ಗೆ ಮೂರನೇ ವಾರ್ಡ್ ಸ್ವಚ್ಛತಾ ಸಮಿತಿ ಅಧ್ಯಕ್ಷ ರಾಜೇಶ್ ಕೊಳ್ಕೆಬೈಲು ಧ್ವಜಾರೋಹಣ ಗೈಯಲಿದ್ದಾರೆ. "ಆಳ್ವಾಸ್ ರೀಚ್ - 2011"ರ ಉದ್ಘಾಟನೆ ಈ ಸಂದರ್ಭ ನಡೆಯಲಿದೆ. ನಾರಾವಿ ಕ್ಷೇತ್ರದ ಜಿಲ್ಲಾಪಂಚಾಯತ್ ಸದಸ್ಯೆ ಸಿ.ಕೆ.ಚಂದ್ರಕಲಾ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕುರಿಯನ್ ವಹಿಸುವರು. ಅತಿಥಿಗಳಾಗಿ ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪೆರಿಂಜೆ ಶಾಖೆಯ ಶಾಖಾಧಿಕಾರಿ ಶೇಖ್ ಲತೀಫ್ ಭಾಗವಹಿಸುವರು.
ಸಾಯಂಕಾಲ 5.30ಕ್ಕೆ ಸಮಾರೋಪ ಸಮಾರಂಭ, ಮಾದರಿ ಮನೆ ಸುಸ್ಥಿರ ಸ್ವಾವಲಂಬೀ ಸಮುದಾಯ ಯೋಜನೆ ಕಾರ್ಯಕ್ರಮದ ಅರ್ಹ ಕುಟುಂಬಗಳಿಗೆ ಮಾನ್ಯತಾ ಪತ್ರ ಪ್ರದಾನ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದ ಮಾಧ್ಯಮ ಸಹಭಾಗಿತ್ವವನ್ನು ಈ ಕನಸು.ಕಾಂ ವಹಿಸಿದೆ.

0 comments:

Post a Comment