ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:59 AM

ನಿರೀಕ್ಷೆ...

Posted by ekanasu

ಸಾಹಿತ್ಯ

ಹಳೆಯ ಮಾಮರದಲ್ಲಿ
ಹೊಸ ಚಿಗುರು ಮೂಡೀತು
ಅದ ತಿಂದ ಕೋಗಿಲೆ
ಹೊಸ ರಾಗ ಹಾಡೀತು...



ಹೊಸರಾಗದ ಇಂಪಿಗೆ
ತಳಿರಿನ ಕಂಪಿಗೆ
ಮೈಮರೆತೆನು ನಾನು
ಅಮರವಾಗಲಿ ಈ ದಿನ
ಜೀವನದಿ ಬೇಕಿನ್ನೇನು?

ಪ್ರಕೃತಿಯ ಒಡಲಿನ
ವೈಚಿತ್ರ್ಯವ ಗಮನಿಸುತ
ಪ್ರಕೃತಿಯ ರಸಗವಳನು
ಹೀರಿ ಮಧು ಸೂಸಿತು ಜೇನು...

- ಸೌಮ್ಯ ಸಾಗರ.

0 comments:

Post a Comment