ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:30 PM

ನೀರು

Posted by ekanasu

ಸಾಹಿತ್ಯ

ಪ್ರಕೃತಿದತ್ತ ಪೃಥ್ವಿಯ ಸುತ್ತ
ಪೃಥ್ವಿಯ ಮೇಲೆ
ಪೃಥ್ವಿಯ ಒಳಗೂ ನೀರು
ಸಕಲ ಜೀವಜಂತುಗಳ
ಪಶುಪಕ್ಷಿಗಳ ಜೀವ ನೀರು
ಮಳೆಯಿಲ್ಲದೆಕೆರೆ ಬಾವಿ ನದಿಗಳು ಬತ್ತಿ
ನೀರಿಗೆ ಬಂದಿತು ಬರ
ಆಗ ತಿಳಿಯಿತು
ನೀರು ದೇವರ ವರ.
ನೀರಿಲ್ಲದೆ ಬೆಳೆ ಬೆಳೆಯಲ್ಲ
ದಾಹ ತೀರದೆ ಜೀವ ಉಳಿಯಲ್ಲ
ಅಮೃತವಾಯಿತು ನೀರು
ನೀರಿಗಾಗಿ ಪರದಾಟ
ಬಿಂದಿಗೆ ಬಾಟಳಿಗಳಲ್ಲಿ ಮಾರಾಟ
ನೀರಿಲ್ಲದೆ ಏನೂ ಇಲ್ಲ
ನೀರೇ ಎಲ್ಲಾ
ಕಾಡು ಬೆಳೆಸಿ ಮಳೆರಾಯನಿಗೆ ಕರೆಸಿ
ನಾಡು ಉಳಿಸಿ
ನೀರಿನ ಮಹಿಮೆ ತಿಳಿದು
ಮಿತವಾಗಿ ನೀರು ಬಳಸಿ.

- ಜಬೀವುಲ್ಲಾ ಖಾನ್

0 comments:

Post a Comment