ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ನಿಲುಗಡೆಗೆ ಪಾಜಾವರ ಸ್ವಾಮೀಜಿ ತಾಕೀತು

ಉಡುಪಿ : ಪಡುಬಿದ್ರೆ ಎರ್ಮಾಳಿನಲ್ಲಿರುವ ಯಪಿಸಿಎಲ್ ಉಷ್ಣವಿದ್ಯುತ್ ಸ್ಥಾವರದ ಅಪಸೌವ್ಯಗಳು ಸರಿಯಾಗುವ ತನಕ ನಿಲುಗಡೆ ಮಾಡುವಂತೆ ಪೇಜಾರ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಂಗಳವಾರ ಉಡುಪಿ ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲ ನಿಕೇತನದಲ್ಲಿ ನಡೆದ ಸತ್ಯಶೋಧನಾ ಸಭೆಯಲ್ಲಿ ಅವರು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ಶನಿವಾರ ದಿಂದ ಇಪ್ಪತ್ನಾಲ್ಕು ಗಂಟೆ ಅನಿರ್ದಿಷ್ಠಾವದಿ ಉಪವಾಸ ಆರಂಭಿಸಲಾಗುತ್ತದೆ ಎಂದು ಅವರು ರಾಜಕೀಯ ಮತ್ತು ಯಾರ ಒತ್ತಡಕ್ಕೂ ಮಣಿದು ಉಪವಾಸ ವೃತ ಕೈಬಿಡೋದಿಲ್ಲ. ಯುಪಿಸಿಎಲ್ ಕಂಪನಿ ಪರಿಸರಕ್ಕೆ ಪೂರಕ ಎಂದು ಪರಿಸರ ವಾಸಿಗಳು ಹೇಳುವವರೆಗೂ ಉಪವಾಸ ನಿಲ್ಲೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಯುಪಿಸಿಎಲ್ ಕಂಪನಿಯಿಂದ ಪರಿಸರ ಮತ್ತು ಜನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ. ಆದರೆ ಕಂಪನಿ ಅಧಿಕಾರಿಗಳು ಅದನ್ನು ಅಲ್ಲಗಳೆಯುತ್ತಿದ್ದಾರೆ. ಪರಿಸರ ತಜ್ಞರೂ ಕಂಪನಿಯಿಂದ ಆಗುತ್ತಿರುವ ಹಾನಿ ಬಗ್ಗೆ ವ್ಯಾಖ್ಯಾನಿಸಿದ್ದಾರೆ ಎಂದು ಅವರು ತಿಳಿಸಿದರು.


ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಪನಿ ಅಪಸೌವ್ಯಗಳನ್ನು ಇಂದು ತಿಂಗಳ ಒಳಗೆ ಸರಿಪಡಿಸಲಾಗುತ್ತದೆ ಎಂದು ಹೇಳುವ ಮೂಲಕ ಯುಪಿಸಿಎಲ್ ನಿಂದ ತೊಂದರೆ ಆಗುತ್ತದೆ ಎಂದು ಒಪ್ಪಿಕೊಂಡ ಹಾಗಾಗಿದೆ. ಪರಿಸರಕ್ಕೆ ಹಾನಿ ತಪ್ಪಿಸುವವರಗೆ ಕಂಪನಿ ಚಾಲೂ ಮಾಡಬಾರದು ಎಂದ ಅವರು ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದರು.
ಉಪವಾಸ ವೃತವನ್ನು ತಪಸ್ಸಿನಂತೆ ಆಚರಿಸಲಾಗುತ್ತದೆ ಎಂದ ಅವರು, ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕವಾಗಿ ಗಟ್ಟಿಯಾಗಬೇಕಿದ್ದರೆ ಪರಿಸರವೂ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಅವರು ಹೋರಾಟದ ಉದ್ದೇಶ ವಿವರಿಸಿದರು.
ಪರಿಸರ ತಜ್ಞರೂ ಮತ್ತು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಿವಾಸಿಗಳು ಯುಪಿಸಿಎಲ್ ಕಂಪನಿಯಿಂದ ತೊಂದರೆ ತಪ್ಪಿದ್ದಲ್ಲ ಎನ್ನುತ್ತಿದ್ದಾರೆ. ಕಂಪನಿ ಅಧಿಕಾರಿಗಳು ನಾಗರಿಕರ ಹೇಳಿಕೆಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹಾರೋ ಬೂದಿ ಮಳೆಗಾಲದಲ್ಲಿ ಉಂಟುಮಾಡುವ ಅನಾಹುತಕ್ಕೆ ಅಧಿಕಾರಿಗಳಲ್ಲಿ ಸ್ಪಷ್ಟ ಉತ್ತರವಿಲ್ಲ ಎಂದು ಅವರು ಬೇಸರಿಸಿದರು.
ಯುಪಿಎಲ್ ಕಂಪನಿ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಪರಾಂಬರಿಸುವ ಸಲುವಾಗಿ ಬುಧವಾರ ಮೂರು ಗಂಟೆಗೆ ಯುಪಿಸಿಲ್ ಕಂಪನಿ ಪರಿಸರ ವೀಕ್ಷಿಸಲಾಗುತ್ತದೆ. ಕಂಪನಿಯಿಂದ ಪರಿಸರಕ್ಕೆ ಹಾನಿಯಗುತ್ತದೆ ಎಂದು ಪರಿಸರ ನಿವಾಸಿಗಳು ಅವಲತ್ತು ಕೊಂಡರೆ ಕಂಪನಿಯನ್ನು ತಕ್ಷಣ ಬಂದ್ ಮಾಡಬೇಕು ಎಂದು ಆಜ್ಞಾಪಿಸಿದರು.

ಕಂಪನಿ ಹೇಳಿಕೆ : ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಹಾರೋ ಬೂದಿಯನ್ನು ವ್ಯವಸ್ಥಿಯವಾಗಿ ದಫನ್ ಮಾಡಲಾಗುತ್ತಿದೆ. ಚಿಮಣಿಯಿಂದ ಆವಿ ನೀರು ಬರುತ್ತದೆಯೇ ವಿನಃ ಬೂದಿ ಬರುತ್ತಿಲ್ಲ.
ಉರಿದ ಕಲ್ಲಿದ್ದಲು ಉಯೋಗಿಸಿ, ಸಿಮೆಂಟ್ ತಯಾರಿಸಲಾಗುತ್ತದೆ. ಉಪ್ಪುನೀರು ತ್ಯಾಜ್ಯವನ್ನು ನೀರಿಗೆ ಬಿಡುತ್ತಿಲ್ಲ. ಪರಿಸರ ಇಲಾಖೆ ಕೂಡಾ ಕಂಪನಿ ಸರಿಯಾಗಿದೆ ಎಂದು ಹೇಳಿದೆ. ಆದರೆ ಸ್ವಾಮೀಜಿ ಅವರು ಉಪವಾಸ ಮಾಡುವ ಸಂಗತಿ ಖೇಕರ. ಕಂಪನಿ ಸರಿಯಾಗಿದ ಎಂದು ಸ್ವಾಮೀಜಿ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಯುಪಿಸಿಎಲ್ನ ಕಿಶೋರ್ ಆಳ್ವಾ ಹೇಳಿದ್ದಾರೆ.

ತಜ್ಞರ ಅಭಿಪ್ರಾಯವೇನು : ಪರಿಸರ, ಜನ ನಿಬಿಡ ಪ್ರದೇಶ, ಹಸಿರು ಮನೆ, ಕೃಷಿ ಮತ್ತು ಸೂಕ್ಷ್ಮ ಪ್ರದೇದಲ್ಲಿ ಉಷ್ಣವಿದ್ಯುತ್ ಸ್ಥಾವರ ಸಾಧುವಲ್ಲ. ಇದರಿಂದ ಪಶ್ಚಿಮ ಘಟ್ಟ ಮತ್ತು ಅಸಿರು ಮನೆ ಕೃಷಿ ಭೂಮಿಗೆ ಅಪಾರವಾದ ಸಷ್ಟ ಉಂಟಾಗಲಿದೆ. ಕಂಪಿನಿ ಅಭಿವೃದ್ದಿ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದೆ. ಜನರ ಅಭಿವೃದ್ಧಿಯಲ್ಲ. ಹಾರೋ ಬೂದಿಗೆ ಬೇಸಿಗೆಯಲ್ಲಿ ತಾತ್ಕಾಲಿಕ ಪರಿಹಾರ ಕಂಡರೂ ಅದರಿಂದ ಮಳೆಗಾದಲ್ಲಿ ಅಗುವ ನಷ್ಟ ಅಪಾರ. ಕಲ್ಲಿದ್ದಲೂ ಬೂದಿ ಬಳಸಿ ಬೇರೆ ವಸ್ತುಗಳನ್ನು ತಯಾರಿಸಿದರೂ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅಫ್ರಾಯವನ್ನು ಪಕ್ಷಿ ತಜ್ಞ ಡಾ.ಮಧ್ಯಸ್ಥ ಅವರು ಅಭಿಪ್ರಾಯ ಮಂಡಿಸಿದರು.

0 comments:

Post a Comment