ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ನಿರ್ಮಲ ಗ್ರಾಮದ ಸಮುದಾಯ ಶಿಬಿರ ಸಮಾರೋಪ

ವೇಣೂರು: ರಾಜ್ಯದಲ್ಲೇ ನಿರ್ಮಲ ಗ್ರಾಮವೆಂಬ ಪುರಸ್ಕಾರಕ್ಕೆ ಪಾತ್ರವಾದ ಹೊಸಂಗಡಿ ಗ್ರಾಮವನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ದತ್ತು ಗ್ರಾಮವನ್ನಾಗಿ ಸ್ವೀಕರಿಸುವ ಬಗ್ಗೆ ಚಿಂತಿಸಿದೆ.ಗ್ರಾಮದ ನೈರ್ಮಲ್ಯವನ್ನು ಕಾಪಾಡುವುದು, ಗ್ರಾಮಸ್ಥರನ್ನು ಸ್ವಾವಲಂಬಿಗಳನ್ನಾಗಿಸುವುದು, ದುಶ್ಚಟ ಮುಕ್ತ ಗ್ರಾಮವನ್ನಾಗಿ ಹೊಸಂಗಡಿಯನ್ನು ರೂಪಿಸುವುದು, ಸಂಪೂರ್ಣ ಪ್ಲಾಸ್ಟಿಕ್ ನಿರ್ಮೂಲನೆಗೆ ಮುಂದಡಿಯಿಡುವುದು ಇವೇ ಮೊದಲಾದ ಯೋಜನೆಗಳ ಸಂಪೂರ್ಣ ಅನುಷ್ಠಾನಕ್ಕೆ ಆಳ್ವಾಸ್ ಸಂಸ್ಥೆ ಸಹಕಾರ ನೀಡಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಘೋಷಿಸಿದರು.

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊಸಂಗಡಿ ಗ್ರಾಮದ ಮೂರನೇ ವಾರ್ಡ್, ಆಳ್ವಾಸ್ ಸಮಾಜಕಾರ್ಯ ಕಾಲೇಜು ಮೂಡಬಿದಿರೆ ಇಲ್ಲಿನ ಬಿ.ಎಸ್.ಡಬ್ಲ್ಯು ವೇದಿಕೆ , ಹೊಸಂಗಡಿ ಫ್ರೆಂಡ್ಸ್ ಕ್ಲಬ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ - ಬಡಕೋಡಿ., ಸ್ವಚ್ಛತಾ ಸಮಿತಿ 3ನೇ ವಾರ್ಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರ ಏರ್ಪಡಿಸಲಾಗಿತ್ತು.

ಹೊಸಂಗಡಿ ಗ್ರಾಮ ವ್ಯಾಪ್ತಿಯ ಯೋಗ್ಯ, ಅರ್ಹ ಹಿಂದುಳಿದ ಜನತೆಗೆ ಶಿಕ್ಷಣದಲ್ಲಿ ಸಹಕಾರ ನೀಡುವ ಬಗ್ಗೆ ಆಳ್ವಾಸ್ ಸಂಸ್ಥೆ ಪೂರಕ ಯೋಜನೆ ರೂಪಿಸಲಿದೆ ಎಂದು ಡಾ.ಆಳ್ವ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಬಡಕೋಡಿ ಇದರ ನಾಲ್ಕನೇ ತರಗತಿ ವಿದ್ಯಾರ್ಥಿ ದೀಪಕ್, ದ.ಕ.ಜಿ.ಪ.ಹಿ.ಪ್ರಾ.ಶಾಲೆ ಪಡ್ಡಂದಡ್ಕ ಇದರ 7ನೇ ತರಗತಿ ವಿದ್ಯಾರ್ಥಿ ಮನ್ಮಥ, ದ.ಕ.ಜಿ.ಪ.ಹಿ.ಪ್ರಾ.ಶಾಲೆ ಪೆರಿಂಜೆ ಇದರ 7ನೇ ತರಗತಿ ವಿದ್ಯಾರ್ಥಿ ಸಿರಾಜ್ ಮನ್ಸೂರ್ ಇವರಿಗೆ ಶಾಲಾ ನೈರ್ಮಲ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾದರಿ ಮನೆ ಸುಸ್ಥಿರ ಸ್ವಾವಲಂಬೀ ಸಮುದಾಯ ಯೋಜನೆಯ ರೂವಾರಿ , ಸಮಾಜ ಸೇವಕ ಹರಿಪ್ರಸಾದ್ ಅವರನ್ನು ಈ ಸಂದರ್ಭದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸದಸ್ಯರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಾದರಿ ಮನೆ ಸುಸ್ಥಿರ ಸ್ವಾವಲಂಬೀ ಸಮುದಾಯ ಯೋಜನೆಯ ಅರ್ಹ ಕುಟುಂಬಗಳಿಗೆ ಡಾ.ಎಲ್.ಎಚ್.ಮಂಜುನಾಥ್ ಮಾನ್ಯತಾ ಪತ್ರ ವಿತರಿಸಿದರು.

ಜಿ.ಪಂ.ಮಂಗಳೂರು ಇದರ ನೆರವು ಘಟಕದ ಮೇಲ್ವಿಚಾರಕಿ ಮಂಜುಳಾ ಜಿ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕುಮಾರ್,ಸುದ್ದಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ರಮೇಶ್ , ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ , ತಾ.ಪಂ ಸದಸ್ಯರು, ಗ್ರಾ.ಪಂ.ಸರ್ವ ಸದಸ್ಯರು ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜು ಮೂಡಬಿದಿರೆ ಇದರ ಪ್ರಾಂಶುಪಾಲ ಪ್ರೊ.ಕುರಿಯನ್ ಸಮಾರೋಪ ಭಾಷಣ ಮಾಡಿದರು.

ಆಳ್ವಾಸ್ ರೀಚ್ 2011 ಸಮಾರೋಪ: ಇದೇ ಸಂದರ್ಭದಲ್ಲಿ ಮಂಗಳೂರು ವಿ.ವಿ.ಆಶ್ರಯದ ಬಿ.ಎಸ್.ಡಬ್ಲ್ಯು ಕಾಲೇಜುಗಳ ಸಮ್ಮಿಲನ ಕಾರ್ಯಕ್ರಮ ಆಳ್ವಾಸ್ ರೀಚ್ 2011 ಇದರ ಸಮಾರೋಪ ಸಮಾರಂಭವೂ ನಡೆಯಿತು.
ಆಳ್ವಾಸ್ ರೀಚ್ 2011ರ ಸಮಗ್ರ ಪ್ರಶಸ್ತಿಯನ್ನು ಕಾರ್ಕಳ ಭುವನೇಂದ್ರ ಕಾಲೇಜಿನ ಬಿ.ಎಸ್.ಡಬ್ಲ್ಯು ವಿಭಾಗ ತನ್ನದಾಗಿಸಿಕೊಂಡಿತು.
ಫಲಿತಾಂಶ ವಿವರ: ಸಮೂಹ ಗೀತೆ: ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು (ಪ್ರಥಮ), ಸಂತ ಅಲೋಶಿಯಸ್ ಕಾಲೇಜು (ದ್ವಿತೀಯ), ಟಿ -ಶರ್ಟ್ ಪೇಂಟಿಂಗ್ : ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ (ಪ್ರಥಮ), ಎಸ್.ಆರ್.ಎಸ್. ಕಾಲೇಜು ಬಾರ್ಕೂರು (ದ್ವಿತೀಯ), ಮೂಕಾಭಿನಯ: ಕಾರ್ಕಳ ಭುವನೇಂದ್ರ ಕಾಲೇಜು (ಪ್ರಥಮ), ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ (ದ್ವಿತೀಯ), ಕೊಲಾಜ್ : ಭುವನೇಂದ್ರ ಕಾಲೇಜು ಕಾರ್ಕಳ (ಪ್ರಥಮ), ಭಿತ್ತಿ ಪತ್ರ ರಚನೆ: ವಿಟ್ಲ ಪ್ರಥಮ ದರ್ಜೆ ಕಾಲೇಜು (ಪ್ರಥಮ), ಭುವನೇಂದ್ರ ಕಾಲೇಜು (ದ್ವಿತೀಯ), ಬೀದಿನಾಟಕ : ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ (ಪ್ರಥಮ), ಭುವನೇಂದ್ರ ಕಾಲೇಜು ಕಾರ್ಕಳ (ದ್ವಿತೀಯ).

0 comments:

Post a Comment