ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ನಮ್ಮ ನಾಡು ನಮ್ಮ ಜನ
ಸತ್ತರೂ ತೀರದು ಈ ಭೂಮಿಯ ಋಣ
ಕಾವೇರಿಯ ನಾಡು
ಶ್ರೀಗಂಧದ ಬೀಡು ಕರುನಾಡು
ಶ್ರೀ ಕೃಷ್ಣದೇವರಾಯ ಕೆಂಪೇಗೌಡ ಒಡೆಯರ
ಕನಸಿನ ಬೀಡು


ಟಿಪ್ಪು ಹೈದರ್ಅಲಿ, ಸರ್ ಮಿರ್ಜಾ ಇಸ್ಮಾಯಿಲ್
ಸರ್ ಎಂ ವಿಶ್ವೇಶ್ವರಯ್ಯರ ಹೆಮ್ಮೆಯ ನಾಡು
ತಂತ್ರಜ್ಞಾನದಲ್ಲಿ ದಾಖಲೆ ಸಾಧಿಸುತಿದೆ
ಪರದೇಶಗಳಲ್ಲಿ ವಿಖ್ಯಾತಿ ಪಡೆಯುತಿದೆ ಕರುನಾಡು
ಎಲ್ಲ ಮತಧರ್ಮದವರಿಗೂ ವಿಶ್ವವಿದ್ಯಾಲಯ
ಪರನಾಡಿನವರಿಗೂ ಕಲ್ಪವೃಕ್ಷವಾಗಿದೆ ಕರುನಾಡು
ನಮ್ಮ ಉದಾರತೆಗೆ ಯಾರು ಸಾಟಿ ಇಲ್ಲ
ಇಲ್ಲಿ ಎಲ್ಲರು ಒಂದೇ ಬೇರೆ ಜಾತಿ ಇಲ್ಲ
ನಾವೆಲ್ಲಾ ಕನ್ನಡಿಗರು
ಭಾಷೆ ಮಾಧ್ಯಮದ ಮೂಲವೆಂದು ಮರೆಯದಿರಿ
ಪರಭಾಷೆ ಕಲಿತು ಕನ್ನಡ ಭಾಷೆ ತೊರೆಯದಿರಿ
ಪ್ರಾಚೀನ ಭಾಷೆ ಹಳೆಗನ್ನಡ
ಕಸ್ತೂರಿ ಭಾಷೆ ಹೊಸಕನ್ನಡ

- ಜಬೀವುಲ್ಲಾ ಖಾನ್

0 comments:

Post a Comment