ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಮ್ಮೇಳನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಘದ ಸರಸಂಘಚಾಲಕ್ ಮಾನ್ಯ ಮೋಹನ್ ಜಿ ಭಾಗವತ್ ಅವರಿಂದ ಉದ್ಘಾಟನೆಗೊಂಡಿತು. ಭಾರತಮಾತೆಯ ಭಾವಚಿತ್ರದ ಮುಂದೆ ದೀಪ ಬೆಳಗಿಸಿ, ಪುಷ್ಪಾರ್ಚನೆ ನಂತರ ಅಡಿಕೆ ಹೂವಿನ ಸಿಂಗಾರವನ್ನು ಬಿಚ್ಚುವ ಮೂಲಕ ಪ್ರಾರಂಭ ಮಾಡಲಾಯಿತು. ಸಂಘದ ಸರಕಾರ್ಯವಾಹ ಮಾನ್ಯ ಸುರೇಶ ಜೋಶಿ ಅವರು ಉದ್ಘಾಟನೆಯ ವೇಳೆ ಉಪಸ್ಥಿತರಿದ್ದರು.ಉದ್ಘಾಟನೆಯ ಹಿನ್ನೆಲೆಯಲ್ಲಿ ವೇದ ವಿಜ್ಞಾನ ಗುರುಕುಲದ ವಟುಗಳಿಂದ ವೇದ ಮಂತ್ರಗಳ ಉದ್ಘೋಷ ಇತ್ತು. ಪ್ರತಿನಿಧಿ ಸಭೆಗೆ ಸರಸಂಘಚಾಲಕರನ್ನು ಪೂರ್ಣಕುಂಭ, ಕೊಂಬು ಸಗಾರಿ ಚೆಂಡೆಗಳನ್ನು ಒಳಗೊಂಡ ಪಂಚವಾದ್ಯ ವಾದನದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.


ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಲಂಕಾರದೊಂದಿಗೆ ಪ್ರತಿನಿಧಿ ಸಭೆಯು ಸಂಪೂರ್ಣವಾಗಿ ಅಲಂಕೃತಗೊಂಡಿದ್ದು ದೇಸೀ ಪರಂಪರೆಗೆ ಇಂಬು ಕೊಡುವಂತಿತ್ತು. ಸಭಾಮಂಟಪದ ಅಲಂಕಾರ ಮತ್ತು ಕಲಾ ಕೆಲಸಗಳು ಡಾ.ಮೋಹನ್ ಆಳ್ವಾ ಅವರ ಮೇಲ್ವಿಚಾರಣೆಯಲ್ಲಿ ನಡೆದಿದೆ.



ದೇಶದ ಸುದೂರ ಪ್ರದೇಶಗಳಿಂದ ಸುಮಾರು 1,400 ಪ್ರತಿನಿಧಿಗಳು ಈ ರಾಷ್ಟ್ರೀಯ ವಾರ್ಷಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಮುಖ್ಯವಾಗಿ ಸಂಘದ ಎಲ್ಲ ಪ್ರಮುಖರು, ಸಂಘದ ಪ್ರೇರಣೆಯಿಂದ ಪ್ರಾರಂಭಗೊಂಡು ಸಮಾಜದ ಬಹುತೇಕ ಎಲ್ಲ ವೃತ್ತಿ-ರಂಗಗಳನ್ನು ಆವರಿಸಿರುವ ಸುಮಾರು 34 ವಿವಿಧ ಕ್ಷೇತ್ರಗಳ ಮುಖ್ಯಸ್ಥರು ಈ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ಸಭೆಯಲ್ಲಿ ಮೊದಲ ದಿನವಾದ ಇಂದು ಸಂಘದ ಸರಕಾರ್ಯವಾಹರು ವಾರ್ಷಿಕ ವರದಿಯನ್ನು ಪ್ರತಿನಿಧಿ ಸಭೆಯ ಮುಂದೆ ಮಂಡಿಸುತ್ತಾರೆ. ನಂತರ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಸಂಘಟನೆಗಳ ಸಾಧನೆ, ಸಾಮಾಜಿಕ ಪರಿವರ್ತನೆಗಳ ಕುರಿತು ಆಯಾ ಸಂಘಟನೆಗಳ ಪ್ರಮುಖರು ವರದಿ ನೀಡುತ್ತಾರೆ. ಒಟ್ಟಾರೆ ಸಂಘ ಮತ್ತು ಪರಿವಾರ ಸಂಘಟನೆಗಳ ಸಂಘಟನಾತ್ಮಕ ಬೆಳವಣಿಗೆ, ವಿಶೇಷ ಕಾರ್ಯಕ್ರಮ, ಉಲ್ಲೇಖನೀಯ ಘಟನಾವಳಿಗಳು ಈ ಸಭೆಯಲ್ಲಿ ವ್ಯಕ್ತವಾಗಲಿವೆ.

ವಿಶೇಷವಾಗಿ ದೇಶವನ್ನು ಕ್ಯಾನ್ಸರಿನಂತೆ ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಚೈನಾದ ನಿರಂತರ ಉಪಟಳದ ಕುರಿತು ಸಭೆಯು ನಿರ್ಣಯ ಕೈಗೊಳ್ಳಲಿದೆ.

0 comments:

Post a Comment