ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಕಾಂತಾವರ:ರಂಗಕಲಾವಿದ,ರಂಗ ನಿರ್ದೇಶಕ ಜೀವನ ರಾಂ ಸುಳ್ಯ ಅವರಿಗೆ ವಿಶ್ವರಂಗ ಭೂಮಿ ದಿನದಂದು ಕಾಂತಾವರದ ಕನ್ನಡ ಭವನದಲ್ಲಿ "ಸುವರ್ಣ ರಂಗ ಸನ್ಮಾನ್" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಹತ್ತುಸಾವಿರ ನಗದು, ಪ್ರಶಸ್ತಿಪತ್ರ, ಫಲಕ,ಶಾಲು, ಹಾರ, ಫಲತಾಂಬೂಲಗಳನ್ನು ಒಳಗೊಂಡಿತ್ತು.


ಹಿರಿಯರಾದ ಕೆ.ವಿ.ಅಕ್ಷರ, ಟಿ.ಪಿ.ಅಶೋಕ, ಸಿ.ಕೆ.ಪಡಿವಾಳ್, ಡಾ.ನಾ.ಮೊಗಸಾಲೆ, ರಂಗಕರ್ಮಿ ಸದಾನಂದ ಸುವರ್ಣ,ಡಾ.ಸೀತಾಲಕ್ಷ್ಮಿ ಕರ್ಕಿಕೋಡಿ ಅತಿಥಿಗಳಾಗಿದ್ದರು.


ಸಾಹಿತಿ, ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ ಅಭಿನಂದನಾ ಭಾಷಣ ಮಾಡಿ ಹೇಳಿದ್ದು ಇಷ್ಟು. "ಬಾಲ್ಯದಲ್ಲಿ ನೋಡುತ್ತಿದ್ದ ಯಕ್ಷರಂಗದ ಪ್ರಭಾವ ಜೀವನ್ ರಾಂ ಅವರ ನಾಟಕದಲ್ಲಿ ಧನಾತ್ಮಕವಾಗಿ ಇಂದು ಗೋಚರಿಸುತ್ತಿದೆ.ಇದು ಅಭಿನಂದನಾರ್ಹ. ರಂಗಭೂಮಿ, ಯಕ್ಷರಂಗದ ಪ್ರೇರಣೆಗಳು ಧನಾತ್ಮಕವಾಗಿ ಜೀವನರಾಂ ಸುಳ್ಯ ನಿರ್ದೇಶಿತ ನಾಟಕಗಳಲ್ಲಿ ಗೋಚರಿಸುತ್ತಿರುವುದು ಅವರ ಆಳವಾದ ಅನುಭವ,ಕ್ಷೇತ್ರದ ಬಗೆಗಿನ ಪ್ರೀತಿಗೆ ಒಂದು ನಿದರ್ಶನ."ಜೀವನವೊಂದೇ ನಾಟಕ ರಂಗ " ಎಂಬಂತೆ ನಾಟಕವನ್ನೇ ಉಸಿರಾಗಿಸಿಕೊಂಡವರು ಜೀವನ್ ರಾಂ ಸುಳ್ಯ ಅವರು. ನಟನಾಗಿ, ನಿರ್ದೇಶಕನಾಗಿ, ಸಂಗೀತರಾಗನಾಗಿ, ವಿವಿಧ ಆಯಾಮಗಳಲ್ಲಿ ಕಾಣಿಸಿಕೊಳ್ಳುವ ಜೀವನ್ ರಾಂ ಸುಳ್ಯರು ಸಮಗ್ರ ನಿರ್ವಹಣೆಯ ಶಕ್ತಿಯನ್ನು ಹೊಂದಿದ್ದಾರೆ. ಚೌಕಟ್ಟನ್ನು ಅರ್ಥಪೂರ್ಣವಾಗಿ ಮೀರುವಲ್ಲಿ ಸಫಲತೆಯನ್ನು ಸಾಧಿಸಿಕೊಂಡಿದ್ದಾರೆ.ಪರಿಕರಗಳನ್ನು ಜೀವಂತ ಪಾತ್ರಗಳಂತೆ ಕಾಣುವ , ಬಿಂಭಿಸುವ ಚಾಕಚಕ್ಯತೆ ಜೀವನ್ ಅವರಲ್ಲಿದೆ."

1 comments:

Anonymous said...

Congratulations sir….
Deepak.

Post a Comment