ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಈಗಿನ ಕಾಲದ ಹೆಣ್ಣು ಮಕ್ಕಳ ಡ್ರಸ್ ಏನು, ಅವರು ಸುತ್ತೋದೇನು, ಹುಡುಗರ ಜೊತೆ ಡ್ಯಾನ್ಸ್ ಮಾಡೋದೇನು, ಎಂತಾ ಕಾಲ ಬಂತಪ್ಪ ಅಂತ ನಮ್ಮ ಅಜ್ಜಿ ಟಿವಿ ನೋಡ್ತಾ ಹೇಳ್ತಾ ಇದ್ರು. ಸ್ವಲ್ಪ ಹೊತ್ತು ಆದಮೇಲೆ ನಾನು ಕೇಳಿದೆ ಯಾಕಜ್ಜಿ ಹಾಗೆ ಹೇಳ್ತಿಯಾ ಅಂತ. ಆಗ ಅವರು ಹೇಳಿದ್ರು ನಮ್ಮ ಕಾಲದಲ್ಲಿ ಹುಡುಗರ ಜೊತೆ ಮಾತಾಡೋದು ಇರಲಿ. ತಲೆ ಎತ್ತಿ ಸಹ ನೋಡೋ ಹಾಗೆ ಇರಲಿಲ್ಲ. ಈಗಂತೂ ಎಲ್ಲ ಬಿಟ್ಟು ನಿಂತಿದ್ದಾರೆ ಹುಡುಗೀರು ಮತ್ತೆ ಹುಡುಗರೂ ಕೂಡ ಅಂತ ಹೇಳಿದ್ರು. ಆಗ ನಾನು ಹೇಳಿದೆ ನೋಡಿ ಅಜ್ಜಿ ಇದು ನಿಮ್ಮ ಕಾಲ ಅಲ್ಲ ಈಗ ನಮ್ಮ ಕಾಲ. ಕಂಪ್ಯೂಟರ್ ಯುಗ. ಎಲ್ಲರಿಗೂ ಸಮಾನತೆ ಇದೆ. ಹುಡುಗ ಹುಡುಗಿ ಎನ್ ಬೇಕಾದ್ರು ಮಾಡಬಹುದು. ಎಲ್ಲರು ಒಂದೆ ಅಂತ ಹೇಳಿದೆ. ಆಗ ಅವರು ಎನ್ ಬೇಕಾದ್ರು ಮಾಡಿ ನಮಗ್ಯಾಕೆ ಅಂತ ಹೇಳಿ ಹೋದ್ರು.


ಸ್ನೇಹಿತರೆ ಸ್ವಲ್ಪ ಯೋಚನೆ ಮಾಡಿ ನೋಡಿ ಅಜ್ಜಿ ಹೇಳಿದ ಹಾಗೆ ಕಾಲ ಕೆಟ್ಟೋಗಿದೆ ಅಂತ ನಿಮಗೆ ಅನ್ನಿಸ್ತಾ ಇಲ್ವಾ? ಹೌದು. ಕಾಲ ಕೆಟ್ಟೋಗಿದೆ. ಯುವಜನತೆ ಬೇಡದ ವಿಷಯಗಳಿಗೆ ಹೆಚ್ಚು ಗಮನ ಕೊಡ್ತಾ ಇರೋದು ಒಂದು ಬೇಸರದ ಸಂಗತಿ.
ಇದಕ್ಕೆಲ್ಲ ಮುಖ್ಯ ಕಾರಣ ಅಂದ್ರೆ 'ಲವ್'. ಅದೇನು ಲವ್ವೋ ಏನೋ, ಅವರು ಲವ್ ಮಾಡ್ತಾರೋ ಇನ್ನೇನು ಮಾಡ್ತಾರೋ ಆ ದೇವರಿಗೇ ಗೊತ್ತು. ಹತ್ತನೇ ತರಗತಿ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿದ ಕೂಡಲೇ ಈಗಿನ ಜನಕ್ಕೆ ಲವ್ ಶುರು ಆಗಿ ಬಿಡತ್ತೆ. ಅದು ಫಸ್ಟ್ ಮತ್ತೆ ಸೆಕೆಂಡ್ ಪಿಯು ಮುಗಿಯುವವರೆಗೆ ಮಾತ್ರ ಇರತ್ತೆ. ಆಮೇಲೆ ಇರಲ್ಲ. ಮತ್ತೆ ಡಿಗ್ರಿಗೆ ಹೋಗ್ತಾರೆ ಅಲ್ಲಿ ಇನ್ನೊಂದು ಲವ್ ಶುರು ಆಗತ್ತೆ. ಡಿಗ್ರಿ ಮುಗಿದ ಕೂಡಲೇ ಲವ್ ಕೂಡ ಮುಗುಯತ್ತೆ. ಇದು ಯಾವ ಸೀಮೆ ಲವ್ ಅಂತ ದೇವರಾಣೆ ನನಗಂತೂ ಗೊತ್ತಿಲ್ಲ. ಇದರ ಮಧ್ಯೆ ಹುಡುಗ ಹುಡುಗಿ ಪಾರ್ಕ್ , ಸಿನೆಮಾ, ಕ್ಲಬ್, ಪಬ್ ಅಂತ ಸುತ್ತೋದು ಆಮೇಲೆ ಇಬ್ರು ಬಿಟ್ಟು ಹೋಗೋದು. ಇದನ್ನ ಜಸ್ಟ್ ಟೈಮ್ ಪಾಸಿಗೆ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತು.

ಗೆಳೆಯರೇ, ಇದೆಲ್ಲಾ ಮಾಡೋದ್ರಿಂದ ಟೈಮ್ ವೇಸ್ಟ್, ಮನಿ ವೇಸ್ಟ್ ಹಾಗೆ ನಿಮ್ಮ ಸುಂದರ ಭವಿಷ್ಯದ ಕನಸುಗಳು ನುಚ್ಚು ನೂರಾಗಿ ಬಿಡ್ತವೆ ಅಲ್ವ? ತಂದೆ ತಾಯಿಗಳು ಕಷ್ಟಪಟ್ಟು ದುಡಿದು, ನಿಮ್ಮನ್ನ ಕಾಲೇಜಿಗೆ ಸೇರಿಸಿ ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಹೆಸರು ಮಾಡಬೇಕು ಅಂತ ಎನೆಲ್ಲಾ ಆಸೆ ಪಟ್ಟಿರ್ತಾರೆ. ನೀವು ಅವರಿಗೆ ಮೋಸ ಮಾಡ್ತಾ ಇದಿರಾ ಅಂತ ಅನ್ನಿಸ್ತಾ ಇಲ್ವಾ? ವಿದ್ಯಾರ್ಥಿ ಜೀವನ ಒಂದು ಸುವರ್ಣಮಯ ಕಾಲ ಅಂತ ಹೇಳ್ತಾರೆ. ಆ ಟೈಮ್ನಲ್ಲಿ ನೀವು ನಿಮ್ಮ ಕನಸುಗಳನ್ನ ಸಾಕಾರ ಮಾಡೋಕೆ ಪ್ರಯತ್ನ ಪಡಬೇಕು. ನಿಮ್ಮನ್ನ ಆಕರ್ಷಿಸೋಕೆ ಅನೇಕ ವಸ್ತುಗಳು ಇವೆ. ಅದ್ಯಾವುದಕ್ಕೂ ನೀವು ಕೇರ್ ಮಾಡದೇ ಚಿನ್ನಾಗಿ ಓದಿ.

-ದರ್ಶನ್ ಬಿ. ಎಂ
ಪ್ರಥಮ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

0 comments:

Post a Comment