ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:53 PM

ತ್ರಿಕೋಣಾಸನ

Posted by ekanasu

ವೈವಿಧ್ಯ
ಈ ಆಸನವು ತ್ರಿಕೋಣಾಕಾರದಲ್ಲಿರುತ್ತದೆ.ಅಭ್ಯಾಸ ಕ್ರಮ

ಮೊದಲು ತಾಡಾಸನದಲ್ಲಿ ನಿಲ್ಲಬೇಕು. ಅನಂತರ ಕಾಲುಗಳನ್ನು ಅಗಲಿಸಿ ಮೂರು ಯಾ ಮೂರೂವರೆ ಅಡಿಗಳಷ್ಟು ಅಂತರದಲ್ಲಿ ನಿಲ್ಲಿಸಬೇಕು. ಕೈಗಳೆರಡನ್ನೂ ಹೆಗಲಿನ ಮಟ್ಟಕ್ಕೆ ಇರುವಂತೆ ನೇರವಾಗಿ ಚಾಚಬೇಕು. ಆಮೇಲೆ ಬಲಪಾದವನ್ನು ಬಲಕಡೆಗೆ 90ಡಿಗ್ರಿ ತಿರುಗಿಸಿ ಉಸಿರನ್ನು ಹೊರಕ್ಕೆ ಬಿಟ್ಟು ಶರೀರವನ್ನು ಬಲಭಾಗಕ್ಕೆ ಬಾಗಿಸಬೇಕು. ಬಲಕೈಯು ಬಲಕಾಲಿನ ಪಕ್ಕದಲ್ಲಿ ಇಡಬೇಕು. ಆಗ ದೃಷ್ಟಿಯು ಎಡಕೈಯ ಬೆರಳ ಮೇಲಿರಬೇಕು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷ ಇರಬೇಕು. ಆಮೇಲೆ ಅದೇ ರೀತಿ ಎಡ ಭಾಗದಲ್ಲಿ ಅಭ್ಯಸಿಸಬೇಕು. ಅನಂತರ 2 ನಿಮಿಷ ವಿಶ್ರಾಂತಿ.

ಉಪಯೋಗಗಳು
ಈ ಆಸನ ಅಭ್ಯಾಸದಿಂದ ಕಾಲುಗಳ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ. ಕಾಲುಗಳ ಸಾಮಾನ್ಯ ವಕ್ರತೆಯಿದ್ದರೆ ಈ ಆಸನ ಅಭ್ಯಾಸದಿಂದ ಸರಿಪಡಿಸಬಹುದಾಗಿದೆ. ಹಾಗೂ ಈ ಆಸನದಿಂದ ಬೆನ್ನುನೋವು, ಕುತ್ತಿಗೆ ನೋವು, ಸೊಂಟನೋವು ಪರಿಹಾರವಾಗುತ್ತದೆ. ಮೊಣಕೈಗಳು ಬಲಗೊಳ್ಳುತ್ತವೆ.- 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.

0 comments:

Post a Comment