ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂತಾರಾಷ್ಟ್ರೀಯ ಮಹಿಳಾ ವರ್ಷವನ್ನು 1975ರ ಮಾರ್ಚ್ 8ರಂದು ಆಚರಿಸಿ, ಪ್ರತೀ ವರ್ಷ ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ಮಹಿಳೆಯರು ಸಶಕ್ತರಾಗುವ ಅಭಿಲಾಷೆಯನ್ನು ವ್ಯಕ್ತ ಪಡಿಸಲಾಗುತ್ತಿದೆ. ಅಂತೆಯೇ 2001ನೇ ವರ್ಷವನ್ನು ಮಹಿಳಾ ಸಶಕ್ತೀಕರಣ ವರ್ಷ ಎಂದು ಘೋಷಿಸಲಾಗಿದೆ. ಆದ್ದರಿಂದ, ಈ ಶತಮಾನದಲ್ಲಿ ಮಹಿಳಾ ಕಲ್ಯಾಣದಿಂದ, ಮಹಿಳಾ ಅಭಿವೃದ್ದಿ ಹಾಗೂ ಮಹಿಳಾ ಸಶಕ್ತೀಕರಣದ ಕಡೆಗೆ ನಾವು ಸಾಗುತ್ತಿದ್ದೇವೆ.ಭಾರತಕ್ಕೆ ಸ್ವತಂತ್ರ ಬಂದ ನಂತರ ಮಹಿಳೆಯರಿಗೆ ಉತ್ತಮ ಸ್ಥಾನಮಾನ ದೊರೆಯುತ್ತಿದೆ ಎಂದರೆ ಅದು ತಪ್ಪಾಗಲಾರದು. ಇದಕ್ಕೂ ಮೊದಲು ಇದ್ದಂತಹ ಸತಿ ಪದ್ದತಿ, ದೇವದಾಸಿ ಪದ್ದತಿ, ವಿಧವಾ ಪದ್ದತಿಯಂತಹ ಅನಿಷ್ಟಗಳು ತೊಲಗಿ ಆಧುನಿಕ ಯುಗಕ್ಕೆ ಇಂದಿನ ಮಹಿಳೆ ಕಾಲಿಡುತ್ತಿದ್ದಾಳೆ. ಕೈಗಾರಿಕೀಕರಣ, ನಗರೀಕರಣ, ಶಿಕ್ಷಣ, ಉದ್ಯೋಗ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಆದಂತಹ ಬದಲಾವಣೆಯೇ ಇದಕ್ಕೆ ಮುಖ್ಯ ಕಾರಣ. ಇಂದು ಮಹಿಳೆ ಪುರುಷರಷ್ಟೇ ಸಮಾನಳಾಗಿ ಬೆಳೆಯುತ್ತಿದ್ದಾಳೆ. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಮಹಿಳೆ ಕೇವಲ ಮಹಿಳೆಯಾಗಿರದೆ ತಾಯಿಯಾಗಿ, ಹೆಂಡತಿಯಾಗಿ, ಸೇವಕಿಯಾಗಿ ಹತ್ತು ಹಲವಾರು ರೀತಿಯಲ್ಲಿ ಪುರುಷನ ಬೆನ್ನೆಲುಬಾಗಿದ್ದಾಳೆ. ಆದ್ದರಿಂದಲೇ ಹೇಳುವುದು ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂದು. ಹೆಣ್ಣು ಭ್ರೂಣ ಹತ್ಯೆ ಮಾಡುವುದನ್ನು ನಿಷೇಧಿನಲಾಗಿದ್ದು ಇದರಿಂದ ಅನೇಕ ಹೆಣ್ಣು ಜೀವಗಳು ಸಮಾಜಕ್ಕೆ ಕಾಲಿಡುತ್ತಿವೆ. ಮಹಿಳೆಯರ ಅಭಿವೃದ್ದಿಗಾಗಿ ಸರಕಾರಗಳೂ ಸಹ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ.

ಭಾರತದ ಸಾಮಾಜಿಕ, ಆರ್ಧಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ತ್ರೀಯರ ಅಂತಸ್ತು ಮತ್ತು ಸ್ಥಾನಮಾನಗಳನ್ನು ಅವಲೋಕಿಸಿದಾಗ ಅವರಿಗೆ ಉತ್ತಮ ಭವಿಷ್ಯ ಇದೆ ಎಂದು ಹೇಳಬಹುದು. ದೊಡ್ಡ ಹುದ್ದೆಗಳಲ್ಲಿ ಇಂದು ನಮ್ಮ ಮಹಿಳೆಯರಿದ್ದಾರೆ. ಉದಾಹರಣೆಗೆ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್, ಸ್ಪೀಕರ್ ಮೀರಾ ಕುಮಾರ್ ಹೀಗೆ ಅನೇಕರು ಉನ್ನತ ರೀತಿಯಲ್ಲಿ ತಮ್ಮ ಸ್ಥಾನವನ್ನು ಗುರಿತಿಸಿಕೊಂಡಿದ್ದಾರೆ.
ಮಹಿಳೆಯರಿಗೆ ಉತ್ತಮ ಸ್ಥಾನಮಾನ ಕೊಡಿಸುವಲ್ಲಿ ಪುರುಷರೂ ಸಹಕರಿಸ ಬೇಕು.ಇಂದಿನ ಆಧುನಿಕ ಯುಗದಲ್ಲಿ ಸ್ತ್ರೀಯರಿಗೆ ಸಾಕಷ್ಟು ಸೌಲಭ್ಯ ಸವಲತ್ತುಗಳನ್ನು ಒದಗಿಸಲಾಗಿದ್ದು ಮಹಿಳೆಯರು ಸ್ವತಃ ತಾವಾಗಿಯೇ ಅದನ್ನು ಉಪಯೋಗಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ.

- ದರ್ಶನ್ , ಆಳ್ವಾಸ್ ಕಾಲೇಜು
ಮೂಡಬಿದಿರೆ.

1 comments:

Abhirama Hegde said...

I must say darshan,
you are going to shine in really short period..
nice write up bro. keep writing..

Post a Comment