ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಪರೀಕ್ಷಾ ಸೆಕೆ

ಮಾರ್ಚ್, ಎಪ್ರಿಲ್... ಸೆಖೆಯೊಂದಿಗೆ ಪರೀಕ್ಷಾ ಸೆಖೆ...ಇದು ಪರೀಕ್ಷಾ ಸಮಯ. ಅದರಲ್ಲೂ ಜೀವನದ ತಿರುವುಗಳು ಎಂದೇ ಕರೆಸಿಕೊಳ್ಳುವ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಇನ್ನೇನು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಭಯ ಬೀಳುವುದು, ಓದಲು ಇರುವಂತಹ ಅನೇಕ ಒತ್ತಡಗಳನ್ನು ಎದುರಿಸುವುದು ಸರ್ವೇ ಸಾಮಾನ್ಯ. ಪರೀಕ್ಷೆ ಎಂದರೆ ಸಾಕು ಅದೇಕೋ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಾರೆ. ಯಾಕೆಂದು ನಾವು ಒಬ್ಬ ಪಿಯುಸಿ ವಿದ್ಯಾರ್ಥಿಗಳಲ್ಲಿ ಕೇಳಿದರೆ ಅವರು ಹೇಳುವುದು ಹೀಗೆ "ವರ್ಷವಿಡೀ ಓದಿದ್ದನ್ನು ಮೂರು ಗಂಟೆಗಳಲ್ಲಿ ಬರೆದು ಮುಗಿಸಬೇಕಲ್ಲ" ಎಂದು ಹೇಳುತ್ತಾರೆ. ಪರೀಕ್ಷೆ ಎಂದರೆ ಅದೇ. ಇನ್ನು ಸುಮ್ಮನೆ ಕಾಲ ಹರಣ ಬೇಡ. ಬುಕ್ ಕೈಯಲ್ಲಿ ತಗೊಳ್ಳಿ ಓದೋಕೆ ಪ್ರಾರಂಭಿಸಿ.ಸ್ನೇಹಿತರೆ ಪರೀಕ್ಷೆಗಳು ಬರುವುದು ವರ್ಷಕ್ಕೆ ಒಂದೇ ಬಾರಿ. ಒತ್ತಡಗಳಿಂದ ದೂರ ಆಗಿ. ನಿಮ್ಮದೇ ಟೈಮ್ ಟೇಬಲ್ ಹಾಕಿಕೊಳ್ಳಿ. ಮೊತ್ತ ಮೊದಲನೇಯದಾಗಿ ಮೊಬೈಲ್ ಬಿಡಿ. ಅದು ನಿಮ್ಮ ಓದಿಗೆ ಉಪದ್ರ ಕೊಡುವ ಮೊದಲ ಸಾಧನ. ಇನ್ನು ಟಿವಿ ವಿಶ್ವಕಪ್ ಕ್ರಿಕೆಟ್ ಸಮಯ ನೋಡಲೇ ಬೇಕು ಎಂದರೆ ನೋಡಿ ಆನಂತರ ಓದಲು ಆರಂಬಿಸಿ. ಕ್ರಿಕೆಟ್ ಕೇವಲ ನಮಗೆ ಮನೋರಂಜನೆ ಮಾತ್ರ. ಆದರೆ ಪರೀಕ್ಷೆಗಳು ನಮ್ಮ ಜೀವನವನ್ನು ಬದಲಾಯಿಸುವ ಮುಖ್ಯ ಅಂಗಗಳು. ನೀವು ಪರೀಕ್ಷೆಗಾಗಿ ಓದ ಬೇಡಿ. ಅರಿವಿಗೆಂದು ಇಷ್ಟಪಟ್ಟು ಓದಿದರೆ ಖಂಡಿತ ನಿಮ್ಮಲ್ಲಿ ಓದಲು ಆಸಕ್ತಿ ಹುಟ್ಟುತ್ತದೆ. ಸ್ವಲ್ಪ ದಿನ ಕಷ್ಟಪಟ್ಟರೆ ಆಯಿತು ಅಲ್ಲವೇ. ಆನಂತರ ನಿಮ್ಮ ಆಟಗಳು ಇದ್ದೇ ಇವೆ. ಓದಿ ಉದಾಸೀನ ಬೇಡ.

ಪರೀಕ್ಷಾ ದಿನಕ್ಕೆ ಟಿಪ್ಸ್

* ಪರೀಕ್ಷೆಗೆ ಹೋಗುವ ಮೊದಲು ಪ್ರವೇಶ ಪತ್ರ , ಕಾಲೇಜು ಐಡಿಕಾರ್ಡ್ ಇತರ ಸಾಮಾಗ್ರಿಗಳನ್ನು ಮರೆಯದೆ ತೆಗೆದುಕೊಳ್ಳಿ.
* ಪರೀಕ್ಷೆ ಬರೆಯಲು ಬೇಕಾಗುವ ಪೆನ್, ಪೆನ್ಸಿಲ್ ಎಲ್ಲವೂ ಇದೆಯೆಂಬುದನ್ನು ಖಚಿತಪಡಿಸಿ.
* ಪರೀಕ್ಷಾ ಕೊಠಡಿಗೆ 15 ನಿಮಿಷ ಮುಂಚಿತವಾಗಿ ಹೊಗಿ ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಿ.
* ಪ್ರಶ್ನೆ ಪತ್ರಿಕೆ ಕೊಟ್ಟ ನಂತರ ಎಲ್ಲಾ ಪ್ರಶ್ನೆಗಳನ್ನು ಓದಿಕೊಳ್ಳಿ, ಆನಂತರವೇ ಉತ್ತರ ಬರೆಯಲು ಆರಂಭಿಸಿ.
* ಪರೀಕ್ಷಾ ಕೊಠಡಿಯಲ್ಲಿ ಉದ್ವೇಗಕ್ಕೆ ಒಳಗಾಗ ಬೇಡಿ. ನಿಮಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾತ್ರ ಉತ್ತರಿಸಿ.
* ಮೂರು ಗಂಟೆ ಅವಧಿ ಮುಗಿದ ನಂತರವೇ ಕೊಠಡಿಯಿಂದ ನಿರ್ಗಮಿಸಿ.
* ಪರೀಕ್ಷೆಗೆ ಮೊದಲ ದಿನ ಚೆನ್ನಾಗಿ ನಿದ್ರಿಸಿ. ಪ್ರೆಶ್ ಮೂಡು ನಿಮ್ಮದಾಗಿರಲಿ.

ಗುಡ್ ಲಕ್.

- ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಪತ್ರಿಕೋದ್ಯಮ, ಆಳ್ವಾಸ್ ಕಾಲೇಜು
ಮೂಡುಬಿದಿರೆ.

3 comments:

Anonymous said...

ಕೆಲವು ವಿದ್ಯಾಥರ್ಿಗಳಿಗೆ ಪರೀಕ್ಷೆ ಸಮಯದ ಅಲರ್ಜಿ ಸಹಿಸಿ ಕೊಳ್ಳುವುದು ಕಷ್ಟವಾದಾಗ ಈ ಕನಸಿನಂತಹ ವೆಬ್ ಸೈಟುಗಳು ಒಳ್ಳೆಯ ದಾರಿಯನ್ನು ತೋರಿಸಬಹುದು. ಇಂದಿನ ಕಿರಿಕ್ ಸಮಯದಲ್ಲಿ ವಿದ್ಯಾರ್ಥಿ ಅಂಕ ಕಡಿಮೆ ಬರಬಹುದೆಂಬ ಪೂರ್ವಭಾವೀ ಭೀತಿಯಲ್ಲಿ ಸಾವಿಗೆ ಶರಣಾಗುತ್ತಿರುವ ವಿಷಯಗಳಿಗೆ ಸಂಜೀವಿನಿಯಾಗಿ ಈಕನಸು ಬಂದಿದೆ ಎಂದು ಭಾವಿಸೋಣ. ಅಂಕವೊಂದೇ ಸರ್ವಸ್ವವಲ್ಲ. ಪುಸ್ತಕದ ಬದನೆಕಾಯಿಯನ್ನು ಗೊಜ್ಜು ಮಾಡಿಸಿಕೊಳ್ಳುವ ಸಾಮಥ್ರ್ಯವನ್ನು ಪಡೆದುಕೊಂಡವನೇ ನಿಜವಾದ ಜಾಣ. - ಕೊಡಕ್ಕಲ್ ಶಿವಪ್ರಸಾದ

nagarathna said...

egina vidyarthigalige exam andre beda anisuthade. kevala bookinali iruvudanu aste odutare ekanasu oleya oleya avakasa kotide.

nagarathna
vinaya

nagarathna said...

thumba oleyadu egina vidhyarthigalu kevala bookinali iddadanu matra odutare idu uttamavada avakasa
nagarathna
vinaya

Post a Comment